»   » ಯಶ್, ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಸಡಗರ ಹೇಗಿತ್ತು ಗೊತ್ತಾ?

ಯಶ್, ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಸಡಗರ ಹೇಗಿತ್ತು ಗೊತ್ತಾ?

Posted by:
Subscribe to Filmibeat Kannada

ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನ ನಾಡಿನಲ್ಲೆಡೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಗಳು ಕೂಡ ಹೊರತಾಗಿರಲಿಲ್ಲ.

ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಂಪ್ರದಾಯವಾಗಿ ಸಂಕ್ರಾಂತಿಯನ್ನ ಸಂಭ್ರಮಿಸಿದ್ದಾರೆ. ಇನ್ನೂ ಇತ್ತೀಚಿಗಷ್ಟೇ ಮದುವೆಯಾದ ಸ್ಯಾಂಡಲ್ ವುಡ್ ನೂತನ ದಂಪತಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಕೂಡ ಸುಗ್ಗಿ ಹಬ್ಬವನ್ನ ಆಚರಿಸಿದ್ದಾರೆ.

ತಾರೆಗಳ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ

ಕನ್ನಡದ ತಾರೆಯರು ಸಂಕ್ರಾಂತಿ ಹಬ್ಬವನ್ನ ತಮ್ಮ ಕುಟುಂಬದವರೊಂದಿಗೆ ಅದ್ಧೂರಿಯಾಗಿ ಆಚರಿಸಿದ್ದಾರೆ. ಕನ್ನಡ ನಟ-ನಿರ್ದೇಶಕ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು, ತಮ್ಮ ಫ್ಯಾಮಿಲಿ ಜೊತೆಯಲ್ಲಿ ಸುಗ್ಗಿ ಸಂಭ್ರಮಿಸಿದ್ರೆ, ನಟ ಯಶ್, ತಮ್ಮ ಪತ್ನಿ ರಾಧಿಕಾ ಅವರ ಜೊತೆ ಮೊದಲ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.

ನೂತನ ದಂಪತಿಯ ಮೊದಲ ಹಬ್ಬ!

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ದಂಪತಿಗೆ ಮದುವೆಯಾದ ಮೇಲೆ ಬಂದ ಮೊದಲ ಹಬ್ಬ ಸಂಕ್ರಾಂತಿ. ಹೀಗಾಗಿ ರಾಧಿಕಾ ಪಂಡಿತ್ ಅವರು ಗಂಡನ ಮನೆಯಲ್ಲಿ ಈ ಬಾರಿಯ ಸಂಕ್ರಾಂತಿಯನ್ನ ಆಚರಿಸಿದ್ದಾರೆ.

ಉಪೇಂದ್ರ ಮನೆಯಲ್ಲಿ ಭರ್ಜರಿ ಹಬ್ಬ

ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನ ಸಂಪ್ರದಾಯವಾಗಿ ಆಚರಿಸಿದ್ದಾರೆ. ಬಿಳಿ ಪಂಚೆ, ಬಿಳಿ ಶರ್ಟ್ ತೊಟ್ಟಿದ್ದ ಉಪ್ಪಿ, ಹಾಗೂ ನೀಲಿ ಬಣ್ಣದ ಸೀರೆಯಲ್ಲಿ ಪ್ರಿಯಾಂಕಾ ಕಂಗೊಳಿಸಿದ್ದಾರೆ.

ಕುಟುಂಬದ ಜೊತೆ ಉಪ್ಪಿ!

ಸಂಕ್ರಾಂತಿ ಹಬ್ಬದಲ್ಲಿ ಉಪೇಂದ್ರ, ಪತ್ನಿ ಪ್ರಿಯಾಂಕಾ ಹಾಗೂ ಮಕ್ಕಳಾದ ಆಯುಶ್, ಐಶ್ವರ್ಯ, ಮತ್ತು ಉಪೇಂದ್ರ ಅವರ ತಂದೆ-ತಾಯಿ ಎಲ್ಲರೂ ಒಟ್ಟಾಗಿ ಕಾಣಿಸಿಕೊಂಡಿದ್ದರು ಹೀಗೆ. ಅಷ್ಟೇ ಅಲ್ಲದೆ ಸ್ನೇಹಿತರನ್ನ ಕೂಡ ಮನೆಗೆ ಆಹ್ವಾನಿಸಿ ಹಬ್ಬದ ಮೆರುಗು ಹೆಚ್ಚಿಸಿದ್ದಾರೆ.

English summary
Kannada Actor Yash and Kannada Actor Upendra's Family Celebrities Sankranti Festival. Here Check out in pics.
Please Wait while comments are loading...

Kannada Photos

Go to : More Photos