»   » ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ'

ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ'

Posted by:
Subscribe to Filmibeat Kannada

ಎಲ್ಲಿ ಏನೇ ನಡೆದರೂ, ಅದಕ್ಕೆ 'ಎಲ್ಲಿದ್ದೀರಾ ಯಶ್?' ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗ್ಬಿಟ್ಟಿದೆ. ಈಗ ಅದೇ ಪ್ರಶ್ನೆಗೆ ಸದ್ಯ ಫೋಟೋ ಸಮೇತ ಉತ್ತರ ದೊರಕಿದೆ.

ತಮ್ಮ ಮದುವೆ ತಯಾರಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ತೊಡಗಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ನಟರ ಮನೆಗೆ ತೆರಳಿ, ತಮ್ಮ ಜೀವನದ ಅತ್ಯಮೂಲ್ಯ ಘಳಿಗೆಗೆ ಸಾಕ್ಷಿಯಾಗುವಂತೆ ಎಲ್ಲರನ್ನೂ ಯಶ್ ಆಹ್ವಾನಿಸುತ್ತಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರನ್ನ ಆಹ್ವಾನಿಸಿದ ಯಶ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರನ್ನ ಆಹ್ವಾನಿಸಿದ ಯಶ್

ಅಣ್ಣಾವ್ರ ಕುಟುಂಬ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಗೆ ಎಲ್ಲಿಲ್ಲದ ಅಕ್ಕರೆ. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿ ಆಗಿರುವ ಯಶ್, ಶಿವಣ್ಣ ದಂಪತಿಗೆ ತಮ್ಮ 'ಮದುವೆಯ ಮಮತೆಯ ಕರೆಯೋಲೆ' ನೀಡಿ ಆಹ್ವಾನಿಸಿದ್ದಾರೆ. [ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು]

ಪವರ್ ಸ್ಟಾರ್ ಪುನೀತ್ ಗೆ ಆಹ್ವಾನ

ಪವರ್ ಸ್ಟಾರ್ ಪುನೀತ್ ಗೆ ಆಹ್ವಾನ

ತಮ್ಮ ಮದುವೆಗೆ ತಪ್ಪದೇ ಬಂದು ಹರಸುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಕುಟುಂಬಕ್ಕೆ ಯಶ್ ಪ್ರೀತಿಯ ಆಹ್ವಾನ ನೀಡಿದ್ದಾರೆ. [ಮಾಧ್ಯಮಗಳ ಮುಂದೆ ಪ್ರೇಮ ಪುರಾಣ ಬಾಯ್ಬಿಟ್ಟ ಯಶ್-ರಾಧಿಕಾ]

ರಾಘವೇಂದ್ರ ರಾಜ್ ಕುಮಾರ್ ಕುಟುಂಬಕ್ಕೆ ಕರೆಯೋಲೆ

ರಾಘವೇಂದ್ರ ರಾಜ್ ಕುಮಾರ್ ಕುಟುಂಬಕ್ಕೆ ಕರೆಯೋಲೆ

ರಾಘವೇಂದ್ರ ರಾಜ್ ಕುಮಾರ್ ಕುಟುಂಬಕ್ಕೂ ರಾಕಿಂಗ್ ಸ್ಟಾರ್ ಯಶ್ ಆಮಂತ್ರಣ ಪತ್ರಿಕೆ ನೀಡಿದ್ದಾರೆ. [ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

ಅನಂತ್ ನಾಗ್ ದಂಪತಿಗೆ ಆಮಂತ್ರಣ

ಅನಂತ್ ನಾಗ್ ದಂಪತಿಗೆ ಆಮಂತ್ರಣ

'ಗೂಗ್ಲಿ' ಮತ್ತು 'ಗಜಕೇಸರಿ' ಚಿತ್ರಗಳಲ್ಲಿ ತಮ್ಮ ಜೊತೆ ತೆರೆ ಹಂಚಿಕೊಂಡಿದ್ದ ಸ್ಯಾಂಡಲ್ ವುಡ್ ನ ಹಿರಿಯ ನಟ ಅನಂತ್ ನಾಗ್ ರವರಿಗೂ ರಾಕಿಂಗ್ ಸ್ಟಾರ್ ಯಶ್ ಆಮಂತ್ರಣ ಪತ್ರಿಕೆ ನೀಡಿ, ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.

ಕುಮಾರ್ ಬಂಗಾರಪ್ಪ ರವರಿಗೆ ಆಹ್ವಾನ

ಕುಮಾರ್ ಬಂಗಾರಪ್ಪ ರವರಿಗೆ ಆಹ್ವಾನ

ರಾಜಕಾರಣಿ ಮತ್ತು ನಟ ಕುಮಾರ್ ಬಂಗಾರಪ್ಪ ರವರಿಗೂ ತಮ್ಮ ಲಗ್ನಪತ್ರಿಕೆ ನೀಡಿ ನಟ ಯಶ್ ಆಹ್ವಾನಿಸಿದ್ದಾರೆ.

ನಿರ್ಮಲಾನಂದ ಸ್ವಾಮೀಜಿ ರವರಿಗೂ ಆಹ್ವಾನ

ನಿರ್ಮಲಾನಂದ ಸ್ವಾಮೀಜಿ ರವರಿಗೂ ಆಹ್ವಾನ

ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ರವರಿಗೂ ರಾಕಿಂಗ್ ಸ್ಟಾರ್ ಯಶ್ ಆಮಂತ್ರಣ ಪತ್ರಿಕೆ ನೀಡಿ, ಆಶೀರ್ವಾದ ಪಡೆದಿದ್ದಾರೆ.

ಆಮಂತ್ರಣ ಪತ್ರಿಕೆ ಹೇಗಿದೆ.?

ಆಮಂತ್ರಣ ಪತ್ರಿಕೆ ಹೇಗಿದೆ.?

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ರವರ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ ಹೇಗಿದೆ ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ ಈ ಫೋಟೋ ನೋಡಿ....

ಸಿಂಪಲ್ ಆಗಿರುವ ವೆಡ್ಡಿಂಗ್ ಇನ್ವಿಟೇಷನ್ ಕಾರ್ಡ್

ಸಿಂಪಲ್ ಆಗಿರುವ ವೆಡ್ಡಿಂಗ್ ಇನ್ವಿಟೇಷನ್ ಕಾರ್ಡ್

ಸ್ಟಾರ್ ನಟರ ಮದುವೆ ಅಂದ್ರೆ ಕೇಳ್ಬೇಕಾ...ಅದ್ಧೂರಿತನ ಎಲ್ಲೆಡೆ ತುಂಬಿ ತುಳುಕುತ್ತಿರುತ್ತದೆ. ಆದ್ರೆ, ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ರವರ ಮದುವೆಯ ಕರೆಯೋಲೆ ಸಖತ್ ಸಿಂಪಲ್ ಆಗಿದೆ.

ವಿಶೇಷತೆಗಳಿವೆ...

ವಿಶೇಷತೆಗಳಿವೆ...

ಆಮಂತ್ರಣ ಪತ್ರಿಕೆಯಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ರವರ ನುಡಿಮುತ್ತುಗಳ ಜೊತೆಗೆ ಇಬ್ಬರ ಹೆಬ್ಬೆಟ್ಟಿನ ಗುರುತು ಕೂಡ ನೀವು ಕಾಣಬಹುದು.

ನೀವು ಗಮನಿಸಬೇಕಾದ ಸಂಗತಿ...

ನೀವು ಗಮನಿಸಬೇಕಾದ ಸಂಗತಿ...

ಆಮಂತ್ರಣ ಪತ್ರಿಕೆ ಜೊತೆಗೆ ಎಲ್ಲರಿಗೂ ಯಶ್ ರವರು ಸಂಪಿಗೆ ಗಿಡ ನೀಡುತ್ತಿದ್ದಾರೆ. ಇದರ ಹಿಂದೆ ಒಳ್ಳೆಯ ಉದ್ದೇಶ ಇದೆ.

ಯಶೋಮಾರ್ಗ....

ಯಶೋಮಾರ್ಗ....

ಆಮಂತ್ರಣ ಪತ್ರಿಕೆ ಜೊತೆಗೆ ಎಲ್ಲರಿಗೂ ಸಂಪಿಗೆ ಸಸಿಯನ್ನು ನೀಡುವ ಮೂಲಕ ಪ್ರಕೃತಿಯನ್ನ ಬೆಳಸಿ, ಉಳಿಸುವ ಸಂದೇಶವನ್ನೂ ರವಾನಿಸುತ್ತಿದ್ದಾರೆ ಯಶ್.

ಮದುವೆ ಯಾವಾಗ.?

ಮದುವೆ ಯಾವಾಗ.?

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರ ವಿವಾಹ ಮಹೋತ್ಸವ ಡಿಸೆಂಬರ್ 10 ಹಾಗೂ 11 ರಂದು ನಡೆಯಲಿದೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಡಿಸೆಂಬರ್ 11 ರಂದು ಸಂಜೆ 7 ಗಂಟೆಯಿಂದ ಆರತಕ್ಷತೆ ನಡೆಯಲಿದೆ.

English summary
Rocking Star Yash has started to invite Sandalwood Stars for his marriage with Kannada Actress Radhika Pandit. The wedding is scheduled on December 10th and 11th at Tripura Vasini, Bengaluru Palace Ground.
Please Wait while comments are loading...

Kannada Photos

Go to : More Photos