»   » ಚಿರಂಜೀವಿ ಸರ್ಜಾ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳು

ಚಿರಂಜೀವಿ ಸರ್ಜಾ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳು

Written by: ಜೀವನರಸಿಕ
Subscribe to Filmibeat Kannada

ಕನ್ನಡದ ಯುವ ನಟ ಚಿರಂಜೀವಿ ಸರ್ಜಾಗೆ ಇವತ್ತು (ಅ.17) ಬರ್ತಡೇ ಸಂಭ್ರಮ. ಚಿರು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಇವತ್ತಿಗೆ 29ನೇ ವರ್ಷದ ಹುಟ್ಟುಹಬ್ಬ ಆಚರಿಸ್ತಿದ್ದಾರೆ.

ಚಿರು ಈಗ ಸ್ಯಾಂಡಲ್ ವುಡ್ ನ ಬಿಜಿ ಹೀರೋ. ಅಜಿತ್, ಚಂದ್ರಲೇಖ, ಅಯ್ಯ-2 ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ನಟಿಸ್ತಾ ಇರೋ ಈ ಯಂಗ್ ಸ್ಟಾರ್ ಗೆ ನಮ್ಮ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.

ಈ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳು. ಅವರಿಗೆ ಏನು ಇಷ್ಟ, ಮಾವ ಅರ್ಜುನ್ ಬಗ್ಗೆ ಏನಂತಾರೆ, ತಮ್ಮ ಧೃವ ಸರ್ಜಾ ಬಗ್ಗ್ಗೆ ಏನೆಲ್ಲಾ ಕನಸುಗಳಿವೆ...ಈ ಬರ್ತಡೇ ಬಾಯ್ ನ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಎಕ್ಸ್ ಕ್ಲೂಸೀವ್ ಆಗಿ ನಿಮ್ಮ ನೆಚ್ಚಿನ ಒನ್ಇಂಡಿಯಾ ಕನ್ನಡದಲ್ಲಿ ಮಾತ್ರ.

ಚಿರುಗೆ ಹೋಳಿಗೆ ಎಂದರೆ ಪಂಚಪ್ರಾಣ

ಚಿರುಗೆ ಹೋಳಿಗೆ ಎಂದರೆ ಪಂಚಪ್ರಾಣ

ಚಿರಂಜೀವಿ ಸರ್ಜಾಗೆ ತಿನ್ನೋದು ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಹೋಳಿಗೆ ಅಂದ್ರೆ ಪಂಚಪ್ರಾಣ.

ನಾಗರಹಾವು, ಕರ್ಣ ಚಿತ್ರಗಳು ಫೇವರಿಟ್

ನಾಗರಹಾವು, ಕರ್ಣ ಚಿತ್ರಗಳು ಫೇವರಿಟ್

ಸಾಹಸಸಿಂಹ ವಿಷ್ಣುವರ್ಧನ್ ರನ್ನು ತುಂಬಾನೇ ಇಷ್ಟಪಡೋ ಚಿರುಗೆ ವಿಷ್ಣು ಅವರ ನಾಗರಹಾವು, ಕರ್ಣ ಸಿನಿಮಾ ಫೇವರೀಟ್.

ಓಂ ಸಾಯಿ ಪ್ರಕಾಶ್ ಅಚ್ಚುಮೆಚ್ಚು

ಓಂ ಸಾಯಿ ಪ್ರಕಾಶ್ ಅಚ್ಚುಮೆಚ್ಚು

ನಿರ್ದೇಶಕರಲ್ಲಿ ಓಂ ಸಾಯಿಪ್ರಕಾಶ್ ಅಂದ್ರೆ ಅಚ್ಚುಮೆಚ್ಚು, 97 ಸಿನಿಮಾ ನಿರ್ದೇಶನ ಮಾಡಿರೋ ಅವರ ಎನರ್ಜಿ ಜೋಷ್ ಚಿರುಗೆ ಪ್ರೇರಣೆ.

ಚಿರಂಜೀವಿ ಸರ್ಜಾ ತನ್ನ ಗಾಡ್ ಫಾದರ್?

ಚಿರಂಜೀವಿ ಸರ್ಜಾ ತನ್ನ ಗಾಡ್ ಫಾದರ್?

ಚಿರಂಜೀವಿ ಸರ್ಜಾ ತನ್ನ ಗಾಡ್ ಫಾದರ್ ಸೌತ್ ಇಂಡಿಯನ್ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬಗ್ಗೆ ಹೇಳೋ ಒಂದು ಮಾತು ಮಾಮ ಇಸ್ ಗ್ರೇಟ್.

ಸಾಕುಪ್ರಾಣಿಗಳು ಅಂದ್ರೆ ತುಂಬಾ ಇಷ್ಟ

ಸಾಕುಪ್ರಾಣಿಗಳು ಅಂದ್ರೆ ತುಂಬಾ ಇಷ್ಟ

ಚಿರುಗೆ ಸಾಕುಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಮನೆಯಲ್ಲಿ ನಾಯಿಮರಿ ಮತ್ತು ಪಾರಿವಾಳ ಮತ್ತು ಇತರೆ ಪಕ್ಷಿಗಳ ಜೊತೆ ಆಟವಾಡೋದು ಇಷ್ಟದ ಟೈಂಪಾಸ್ ಟೈಮ್.

ಚಿರಂಜೀವಿ ಸರ್ಜಾಗೆ ಇನ್ನೇನು ಇಷ್ಟ?

ಚಿರಂಜೀವಿ ಸರ್ಜಾಗೆ ಇನ್ನೇನು ಇಷ್ಟ?

ಚಿರಂಜೀವಿ ಸರ್ಜಾ ಪ್ರಾಣಿಗಳ ಜೊತೆ ಇಲ್ಲ ಅಂದ್ರೆ ಟಿವಿಯಲ್ಲಿ ಸಿನಿಮಾ ನೋಡ್ತಿರ್ತಾರೆ.

ಚಿರು ಕನಸಿನ ಪಾತ್ರ ಅಂದ್ರೆ...

ಚಿರು ಕನಸಿನ ಪಾತ್ರ ಅಂದ್ರೆ...

ಚಿರು ಕನಸಿನ ಪಾತ್ರ ಅಂದ್ರೆ ಮಾಸ್ ಹೀರೋ ರೋಲ್, ಅದೂ ಸದ್ಯದಲ್ಲೇ ನನಸಾಗುತ್ತೆ ಅನ್ನೊ ಹೋಪ್ ಇದೆ ಅಂತಾರೆ.

ಚಿರುಗೆ ರೋಲ್ ಮಾಡೆಲ್ ಯಾರು?

ಚಿರುಗೆ ರೋಲ್ ಮಾಡೆಲ್ ಯಾರು?

ಚಿರುಗೆ ರೋಲ್ ಮಾಡೆಲ್ ಅಂದ್ರೆ ಸ್ಟೈಲ್ ಕಿಂಗ್ ರಜನಿಕಾಂತ್.

ಮಿನುಗುತಾರೆ ಕಲ್ಪನಾ, ಜ್ಯೂಲಿ ಲಕ್ಷ್ಮಿ ಇಷ್ಟ

ಮಿನುಗುತಾರೆ ಕಲ್ಪನಾ, ಜ್ಯೂಲಿ ಲಕ್ಷ್ಮಿ ಇಷ್ಟ

ಹೀರೋಯಿನ್ ಗಳಲ್ಲಿ ಮಿನುಗುತಾರೆ ಕಲ್ಪನಾ, ಜ್ಯೂಲಿ ಲಕ್ಷ್ಮಿ ಅಂದ್ರೆ ಅಚ್ಚುಮೆಚ್ಚು.

ಕಲರ್ ಫುಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು

ಕಲರ್ ಫುಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು

ಚಿರುಗೆ ಪೊಲೀಸ್ ಡ್ರೆಸ್ ಹಾಕ್ಕೊಂಡು ಕಲರ್ ಫುಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅಂತಾನೂ ಇಷ್ಟ.

ಧೃವಸರ್ಜಾ ಇನ್ನೂ ದೊಡ್ಡ ಸ್ಟಾರ್ ಆಗ್ತಾನೆ

ಧೃವಸರ್ಜಾ ಇನ್ನೂ ದೊಡ್ಡ ಸ್ಟಾರ್ ಆಗ್ತಾನೆ

ತಮ್ಮ ಧೃವಸರ್ಜಾ ಜೊತೆ ಫ್ರೆಂಡ್ಲೀಯಾಗಿರೋ ಚಿರು ತಮ್ಮ ಇನ್ನೂ ದೊಡ್ಡ ಸ್ಟಾರ್ ಆಗ್ತಾನೆ ಅಂತಾರೆ.

ಚಿರು ಆಲ್ವೇಸ್ ಜಾಲಿಬಾಯ್

ಚಿರು ಆಲ್ವೇಸ್ ಜಾಲಿಬಾಯ್

ಚಿರು ಆಲ್ವೇಸ್ ಜಾಲಿಬಾಯ್. ಶೂಟಿಂಗ್ ನಲ್ಲಂತೂ ಎಲ್ಲರಿಗೂ ತಮಾಷೆ ಮಾಡ್ಕೊಂಡು ಜಾಲಿ ಜಾಲಿಯಾಗಿರೋ ನಟ.

ಸುದೀಪ್ ಅಂದ್ರೆ ಪ್ರೀತಿಯ ಅಣ್ಣನಂತೆ

ಸುದೀಪ್ ಅಂದ್ರೆ ಪ್ರೀತಿಯ ಅಣ್ಣನಂತೆ

ಚಿರುಗೆ ಯಾವಾಗಲೂ ಪ್ರೋತ್ಸಾಹ ಕೊಡೋ ಸುದೀಪ್ ಅಂದ್ರೆ ಪ್ರೀತಿಯ ಅಣ್ಣನಂತೆ.

ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ

ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ

ಸಿಸಿಎಲ್ ನ ಕರ್ನಾಟಕ ಟೀಂನಲ್ಲಿರೋ ಚಿರುಗೆ ಕ್ರಿಕೆಟ್ ಅಂದ್ರೆ ಇಷ್ಟ.

ಜಾಲಿರೈಡ್ ಹೋಗೋ ಜಾಲಿಬಾಯ್

ಜಾಲಿರೈಡ್ ಹೋಗೋ ಜಾಲಿಬಾಯ್

ಸ್ಫೋರ್ಟ್ ಬೈಕ್ ರೈಡಿಂಗ್ ಕಾರ್ ನಲ್ಲಿ ಜಾಲಿರೈಡ್ ಹೋಗೋದು ಅಂದ್ರೆ ತುಂಬಾ ಇಷ್ಟ.

English summary
Kannada young and dynamic actor Chiranjeevi Sarja, mononymously known as Chiru is celebrating his 29th birthday on 17th October. He made his debut in the Kannada movie Vayuputra in the lead role. Here is the interesting facts about Chiru.
Please Wait while comments are loading...

Kannada Photos

Go to : More Photos