»   » ಬರ್ತಡೇ ಬಾಯ್ ಯಶ್ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳು

ಬರ್ತಡೇ ಬಾಯ್ ಯಶ್ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳು

Posted by:
Subscribe to Filmibeat Kannada

ಕನ್ನಡದಲ್ಲಿ 2013ರಲ್ಲಿ ಯಶಸ್ಸಿನ ಅಲೆಯಲ್ಲಿ ತೇಲಿದ ನಟ ರಾಕಿಂಗ್ ಸ್ಟಾರ್ ಯಶ್. ತನ್ನ 28ನೇ ವರ್ಷಕ್ಕೆ ಕಾಲಿಡ್ತಾ ಇರೋ ಯಶ್ 'ಜಂಬದ ಹುಡ್ಗಿ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಹೀರೋ. ನಾಟಕದ ಹಿನ್ನಲೆಯಿಂದ ಬಂದಿರೋ ಯಶ್ ಗೆ ಅಭಿನಯ ಲೀಲಾಜಾಲ.

ಇನ್ನು ಫೈಟ್ಸ್ ಅಂದ್ರೆ ಯಶ್ ತಲೇನೇ ಕೆಡಿಸಿಕೊಳ್ಳಲ್ಲ. ಡಾನ್ಸ್ ವಿಷಯದಲ್ಲೂ ಯಶ್ ಸೂಪರ್. ಕನ್ನಡದ ಕೆಲವೇ ಕೆಲವು ಹ್ಯಾಂಡ್ಸಮ್ ನಟರಲ್ಲಿ ಯಶ್ ಕೂಡ ಒಬ್ಬರು. ಮೊದಲಾಸಲ (2010), ರಾಜಧಾನಿ (2011), ಕಿರಾತಕ (2011), ಲಕ್ಕಿ (2012), ಜಾನು (2012), ಡ್ರಾಮಾ (2012), ಗೂಗ್ಲಿ (2013) ಹಾಗೂ ರಾಜಾಹುಲಿ (2013)...ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟ ನಟ.

ಈಗ ಯಶ್ ನಿರ್ಮಾಪಕರ ಪಾಲಿಗೆನ ಡಾರ್ಲಿಂಗ್. ಯಶ್ ಮೇಲೆ ಕೋಟಿಗಟ್ಟಲೆ ಬಂಡವಾಳ ಹೂಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಯಶ್ ಕಾಲ್ ಶೀಟ್ ಪಡೆಯಬೇಕಾದರೆ ಇನ್ನೂ ಮೂರು ನಾಲ್ಕು ವರ್ಷಗಳ ಕಾಲ ಕಾಯಬೇಕು. ಅಷ್ಟರ ಮಟ್ಟಿಗೆ ಯಶ್ ಬಿಜಿ. [ಯಶ್ ಗೆ 'ಗಜಕೇಸರಿ' ವಿಡಿಯೋ ಗಿಫ್ಟ್]

ಯಶ್ ಗೆ ನಮ್ಮ ಕಡೆಯಿಂದ ಹ್ಯಾಪಿ ಬರ್ತಡೇ, ಯಶ್ ಮತ್ತಷ್ಟು ಯಶಸ್ವೀ ಸಿನಿಮಾ ನೀಡ್ಲಿ...ಈ ಹ್ಯಾಂಡ್ಸಮ್ ಹೀರೋಗೆ ಹ್ಯಾಪಿ ಬರ್ತಡೇ ಹೇಳ್ತಾ ಯಶ್ ರಿಯಲ್ ಲೈಫ್ ನ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳು ನಿಮಗಾಗಿ.

ಯಶ್ ಫೇವರೀಟ್ ಹೀರೋ ಯಾರು ಗೊತ್ತಾ?
  

ಯಶ್ ಫೇವರೀಟ್ ಹೀರೋ ಯಾರು ಗೊತ್ತಾ?

ತಾನೂ ಒಬ್ಬ ಯಶಸ್ವಿ ಹೀರೋ ಆಗಿ ಯಶ್ ಇಷ್ಟಪಡೋದು ಕರಾಟೆಕಿಂಗ್ ಶಂಕರನಾಗ್, ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರಗಳನ್ನು. ಇವರಿಬ್ಬರು ಅವರ ಫೇವರೀಟ್ ಹೀರೋಗಳು.

ರಾಜ್ ಸಿನಿಮಾಗಳನ್ನ ನೋಡ್ತಾರೆ
  

ರಾಜ್ ಸಿನಿಮಾಗಳನ್ನ ನೋಡ್ತಾರೆ

ವರನಟ ರಾಜ್ ಕುಮಾರ್ ಸಿನಿಮಾಗಳನ್ನ ಅಚ್ಚರಿಯಂದ ನೋಡ್ತಾರೆ. ರಾಜ್-ಭಾರತಿಯವರ ಸಿನಿಮಾಗಳು ಯಶ್ ಗೆ ಇಷ್ಟ. ಸಹಜವಾಗೇ ಅಂಬರೀಶ್, ಶಂಕರ್ ನಾಗ್ ಸಿನಿಮಾಗಳು ಇಷ್ಟ.

ಯಶ್ ಗೆ ತಂಗಿ ಅಂದ್ರೆ ಪ್ರಾಣ
  

ಯಶ್ ಗೆ ತಂಗಿ ಅಂದ್ರೆ ಪ್ರಾಣ

ಅಪ್ಪ, ಅಮ್ಮ, ತಂಗಿ ಅಂದರೆ ಯಶ್ ಗೆ ತುಂಬಾ ಇಷ್ಟ. ಅದ್ರಲ್ಲೂ ತಂಗಿ ಅಂದ್ರೆ ಪ್ರಾಣ.

ಮದುವೆ ಬಗ್ಗೆ ಏನಂತಾರೆ ಯಶ್
  

ಮದುವೆ ಬಗ್ಗೆ ಏನಂತಾರೆ ಯಶ್

ಮದುವೆ ಬಗ್ಗೆ ಯಶ್ ಗೆ ನೋ ಐಡಿಯಾ. ಸದ್ಯ ಯಶಸ್ವಿ ಸಿನಿಮಾಗಳನ್ನ ಕೊಡೋದಷ್ಟೇ ಯಶ್ ಆಸೆ. ಇನ್ನು ಕೆಲವು ವರ್ಷ ಮದುವೆಯ ಯೋಚನೆ ಇಲ್ಲ.

ಯಶ್ ರ ಫೇವರೀಟ್ ಡೈರೆಕ್ಟರ್
  

ಯಶ್ ರ ಫೇವರೀಟ್ ಡೈರೆಕ್ಟರ್

ಯಾವುದೇ ವಿಷಯಗಳಲ್ಲೂ ಯಶ್ ಗೆ ಇದೇ ಆಗ್ಬೇಕು ಅನ್ನೋದಿಲ್ಲ. ಆದರೆ ಸಿನಿಮಾ ಒಂದನ್ನ ಬಿಟ್ಟು ಸಿನಿಮಾದ ಸಬ್ಜೆಕ್ಟ್ ಆಯ್ಕೆ ಮಾಡೋದ್ರಲ್ಲಿ ಯಶ್ ಫುಲ್ ಚೂಸಿ. ಯಶ್ ಗೆ ಫೇವರೀಟ್ ಡೈರೆಕ್ಟರ್ ಅಂತ ಯಾರೂ ಇಲ್ಲ. ಒಳ್ಳೆ ಸಿನಿಮಾ ಮಾಡಿದವ್ರೆಲ್ಲ ಇಷ್ಟ.

ಧಾರಾವಾಹಿ ಬಗ್ಗೆ ಯಶ್ ಖುಷ್
  

ಧಾರಾವಾಹಿ ಬಗ್ಗೆ ಯಶ್ ಖುಷ್

ಧಾರವಾಹಿಯಿಂದ ತುಂಬಾ ಕಲಿತೆ ಅನ್ನೋ ಯಶ್ ಗೆ ಬೇಸರ ಅಂದ್ರೆ ಈಗ ಧಾರಾವಾಹಿಗಳನ್ನ ನೋಡೋಕೆ ಆಗಲ್ಲವಲ್ಲ ಅನ್ನೋದು.

ಫೇವರೀಟ್ ಫುಡ್
  

ಫೇವರೀಟ್ ಫುಡ್

ಮೈಸೂರು ಹೋಟೆಲ್ ನಲ್ಲಿ ಏನಿದ್ರೂ ಇಷ್ಟ. ಅದ್ರಲ್ಲೂ ಬಿರಿಯಾನಿ, ಪಾನಿಪೂರಿಯನ್ನ ಮೈಸೂರಿನ ತಾನು ಓದೋವಾಗ ಸ್ಕೂಲ್ ಪಕ್ಕದಲ್ಲಿ ತಿಂತಿದ್ದ ಗಲ್ಲಿಯಲ್ಲಿ ತಿನ್ನೋದು ಅಂದ್ರೆ ಇಷ್ಟ.

ಕ್ಯಾಷ್ಯುವಲ್ ಡ್ರೆಸ್
  

ಕ್ಯಾಷ್ಯುವಲ್ ಡ್ರೆಸ್

ಇದೇ ಡ್ರೆಸ್ ಹಾಕ್ಬೇಕು ಅಂತ ಯಶ್ ಅಂದ್ಕೊಳ್ಳೋದಿಲ್ಲ. ಆದ್ರೆ ಕ್ಯಾಷ್ಯುವಲ್ ಡ್ರೆಸ್ ಗಳು ಇಷ್ಟ. ಜೀನ್ಸ್ ಟೀಶರ್ಟ್ ಹಾಕ್ಕೊಂಡು ಫ್ರೀ ಫಿಟ್ಟಿಂಗ್ ಇಷ್ಟಪಡ್ತಾರೆ.

ಫೇವರೀಟ್ ಹೀರೋಯಿನ್
  

ಫೇವರೀಟ್ ಹೀರೋಯಿನ್

ಕನ್ನಡದ ತಾರೆ ಭಾರತಿ ಯಶ್ ರ ಫೇವರೀಟ್ ಹೀರೋಯಿನ್. ಅಭಿನಯ ಶಾರದೆ ಜಯಂತಿ ಅವರ ಸಿನಿಮಾಗಳೂ ಇಷ್ಟ.

ಮೈಸೂರ್ ಗೆ ಹೋದ್ರೆ ಚಾಮುಂಡಿಬೆಟ್ಟ ಫೇವರೀಟ್
  

ಮೈಸೂರ್ ಗೆ ಹೋದ್ರೆ ಚಾಮುಂಡಿಬೆಟ್ಟ ಫೇವರೀಟ್

ತಾನು ಓದಿದ ತಿರುಗಾಡಿದ ಹಳೆಯ ಜಾಗಗಳು ಇವತ್ತಿಗೂ ಯಶ್ ಫೇವರೀಟ್. ಅದ್ರಲ್ಲೂ ಚಾಮುಂಡಿಬೆಟ್ಟದಲ್ಲಿ ಹಳೆ ಫ್ರೆಂಡ್ಸ್ ಜೊತೆ ಹರಟೆ ಇಷ್ಟ.

ಗಜಕೇಸರಿ ಮೇಕಿಂಗ್ ಟ್ರೈಲರ್ ಬಗ್ಗೆ ಫುಲ್ ಖುಷ್
  

ಗಜಕೇಸರಿ ಮೇಕಿಂಗ್ ಟ್ರೈಲರ್ ಬಗ್ಗೆ ಫುಲ್ ಖುಷ್

ಗಜಕೇಸರಿ ಚಿತ್ರದ ಮೇಕಿಂಗ್ ಟ್ರೈಲರ್ ಬಗ್ಗೆ ಯಶ್ ಫುಲ್ ಖುಷ್. ಚಿತ್ರ ಫೆಬ್ರವರಿ ವೇಳೆಗೆ ತೆರೆಗೆ ಬರಲಿದೆ.

ಟ್ರಾವೆಲಿಂಗ್ ಅಂದ್ರೆ ಇಷ್ಟ
  

ಟ್ರಾವೆಲಿಂಗ್ ಅಂದ್ರೆ ಇಷ್ಟ

ಕಾರ್ ನಲ್ಲಿ ತನ್ನಿಷ್ಟದ ಹಾಡು ಕೇಳ್ತಾ ಟ್ರಾವೆಲ್ ಮಾಡೋದು ಯಶ್ ಗೆ ತುಂಬಾನೇ ಇಷ್ಟ.

English summary
Rocking Star Yash celebrates his 28th birthday on January 8th, 2014. He is known as the "Rocking star" of Kannada film industry, mostly due to his superior fighting and dancing skills. Prior to films, he appeared in TV Tele-series in various channels.
Please Wait while comments are loading...

Kannada Photos

Go to : More Photos