»   » ರಾಮ್ ಗೋಪಾಲ್ ವರ್ಮಾ ಕನ್ನಡದಲ್ಲಿ ಮಾಡೋದೇನು?

ರಾಮ್ ಗೋಪಾಲ್ ವರ್ಮಾ ಕನ್ನಡದಲ್ಲಿ ಮಾಡೋದೇನು?

Written by: ಜೀವನರಸಿಕ
Subscribe to Filmibeat Kannada

ಸಿನಿಮಾಗಳ ಬಗ್ಗೆ ಮಾತ್ನಾಡೋವಾಗ ಎಲ್ಲರೂ ಸೌಂಡ್ ಮಾಡೋ ಸಿನಿಮಾ ಅಂತಾರೆ. ಆದ್ರೆ ಸೌಂಡಲ್ಲೆ ಸಿನಿಮಾ ಮಾಡೋದನ್ನ ಇಡೀ ಇಂಡಿಯಾಗೆ ಹೇಳಿಕೊಟ್ಟಿದ್ದು ರಾಮ್ ಗೋಪಾಲ್ ವರ್ಮಾ ಅನ್ನೋ ಮಾತನ್ನ ಹೇಳಿದ್ದು ನಾವಲ್ಲ ಕನ್ನಡದ ಕ್ರೇಜಿ ಸ್ಟಾರ್ ರವಿಮಾಮ, ಐ ಮೀನ್ ರವಿಚಂದ್ರನ್.

ರಾಮ್ ಗೋಪಾಲ್ ವರ್ಮಾರ ಅಷ್ಟೂ ಸಿನಿಮಾಗಳನ್ನ ನೋಡಿದ್ದೀನಿ, ಅವ್ರ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಥ್ರಿಲ್ಲಾಗಿದ್ದೀನಿ ಅಂತ ಹೇಳಿದ್ದು ಕನ್ನಡದ ಹ್ಯಾಟ್ರಿಕ್ ಹೀರೋ 108 ಸಿನಿಮಾಗಳ ಸರದಾರ ಶಿವಣ್ಣ ಊರ್ಫ್ ಶಿವರಾಜ್ ಕುಮಾರ್. ಈ ಹಿಂದೆಯೂ ರಾಮ್ ಗೋಪಾಲ್ ವರ್ಮಾ ಕನ್ನಡಕ್ಕೆ ಬರುತ್ತಾರೆ ಅಂತ ಸುದ್ದಿ ಹಬ್ಬಿತ್ತು. ಆದರೆ, ಅದು ಸುದ್ದಿಯಾಗಿಯೇ ಉಳಿಯಿತು. ಈಗ ಅಂತೂ ಇಂತೂ ಕನ್ನಡಕ್ಕೆ ಬರುತ್ತಿದ್ದಾರೆ ಆರ್ಜಿವಿ.

'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನ ಕನ್ನಡದಲ್ಲಿ ಮಾಡೋಕೆ ರಾಮ್ ಗೋಪಾಲ್ ವರ್ಮಾ ಕನ್ನಡಕ್ಕೆ ಎಂಟ್ರಿ ಕೊಟ್ಟಿರೋದು ಗಾಂಧಿನಗರದಲ್ಲಿ ಕುತೂಹಲದ ಬಿರುಗಾಳಿ ಎಬ್ಬಿಸಿದೆ. ಆರ್ಜಿವಿ ಸಿನಿಮಾ ಅಂದ್ರೆ ಅದಕ್ಕೊಂದು ತೂಕವಿದೆ. ಪ್ರಯೋಗಾತ್ಮಕ ಚಿತ್ರ ಮಾಡುವುದರಲ್ಲಂತೂ ಅವರದು ಎತ್ತಿದ ಕೈ. ಈ ಸ್ಟಾರ್ ನಿರ್ದೇಶಕ ಕನ್ನಡದಲ್ಲಿ ವೀರಪ್ಪನ್ ಕೊಂದ ಕಥೆ ಹೇಳ್ತಿರೋದ್ರ ಇಂಟರೆಸ್ಟಿಂಗ್ ಕಥೆ ಇಲ್ಲಿದೆ ನೋಡಿ.. [ದಂತಚೋರ ವೀರಪ್ಪನ್ ನ ಕೊಂದವರು ಯಾರು?]

ಆರ್ಜಿವಿ ಹಾಟ್ ಡೈರೆಕ್ಟರ್

ಆರ್ಜಿವಿ ಹಾಟ್ ಡೈರೆಕ್ಟರ್

ನಮ್ಗೆಲ್ಲಾ ಗೊತ್ತೇ ಇದೆ. ಸಮಾಜದಲ್ಲಿ ನಡೀತಾ ಇರೋ ಹಾಟ್ ಟಾಪಿಕ್ಗಳನ್ನ ಎತ್ತಿಕೊಳ್ಳೋದು ಆರ್ಜಿವಿ ಜಾಯಮಾನ. ಯಾವುದಾದ್ರೂ ದೊಡ್ಡ ದುರ್ಘಟನೆ ನಡೆದ್ರೆ, ರಕ್ತಕ್ರಾಂತಿಯಾದ್ರೆ ಅದನ್ನ ಆರ್ಜಿವಿ ಸಿನಿಮಾ ಮಾಡೀನೇ ತೀರ್ತಾರೆ.

ಆದ್ರೆ 10 ವರ್ಷಗಳ ನಂತ್ರ ಯಾಕೆ?

ಆದ್ರೆ 10 ವರ್ಷಗಳ ನಂತ್ರ ಯಾಕೆ?

ಹಾಟ್ ಟಾಪಿಕ್ಗಳನ್ನ ಕೂಡಲೇ ಸಿನಿಮಾ ಮಾಡಿ ಮುಗಿಸೋ ಆರ್ಜಿವಿ ವೀರಪ್ಪನ್ ಹತ್ಯೆಯಾಗಿ ಹತ್ತು ವರ್ಷ ನಂತ್ರ ಆ ಸಬ್ಜೆಕ್ಟನ್ನ ಎತ್ತಿಕೊಳ್ತಿದ್ದಾರೆ. ಹಾಗಾದ್ರೆ ಅಂತಹದ್ದೇನನ್ನೋ ಮತ್ತೊಂದು ಆ್ಯಂಗಲ್ನ ತೆರೆದಿಡುವ ಕಥೆ ಇಲ್ಲಿದೆಯಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

ಪುನೀತ್ ರಾಜ್ ಕುಮಾರ್ ಹೇಳಿದ್ದೇನು..

ಪುನೀತ್ ರಾಜ್ ಕುಮಾರ್ ಹೇಳಿದ್ದೇನು..

ಪವರ್ಸ್ಟಾರ್ ಪುನೀತ್ ಆರ್ಜಿವಿಯವ್ರ ಕಥೆಯ ಒಂದೆರೆಡು ಸಾಲು ಕೇಳಿ ವಾವ್ ಅಂದ್ರಂತೆ. ಖಂಡಿತ ಇದು ಮೋಡಿ ಮಾಡುತ್ತೆ ಅನ್ನೋ ನಂಬಿಕೆ ಪುನೀತ್ಗೂ ಕೂಡ ಬಂದಿದೆಯಂತೆ. ಇನ್ನು ಚಿತ್ರದ ಕಾಡುವ ಥೀಮ್ ಮ್ಯೂಸಿಕ್ ರವಿಮಾಮ ರಿಲೀಸ್ ಮಾಡಿದ್ದು ನಿಜಕ್ಕೂ ಸೌಂಡಿಂಗ್ ಆಗಿದೆ ಅನ್ನೋ ಪ್ರಶಂಸೆ ಪಡ್ಕೊಳ್ತು.

ರಾಜ್ ಅಪಹರಣ ಇರುತ್ತಾ?

ರಾಜ್ ಅಪಹರಣ ಇರುತ್ತಾ?

ಚಿತ್ರದಲ್ಲಿ ರಾಜ್ ಅಪಹರಣ ಇರುತ್ತಾ ಅಂದ್ರೆ ಬಹುಷಃ ಇರೋದಿಲ್ಲ ಅಂತಿದ್ದಾರೆ ರಾಮ್ ಗೋಪಾಲ್ ವರ್ಮಾ. ರಾಜ್ ಅಪಹರಣದಂತಹ ಮುಖ್ಯ ವಿಷಯಾನೇ ಇಲ್ಲದೇ ರಾಮ್ ಗೋಪಾಲ್ ವರ್ಮಾ ಅದೇನನ್ನ ಹೇಳ್ತಾರೆ ಅನ್ನೋದು ಗೊತ್ತಿಲ್ಲ!

ಫಾರೆಸ್ಟ್ ಆಫೀಸರ್ ಆಗಿ ಶಿವಣ್ಣ

ಫಾರೆಸ್ಟ್ ಆಫೀಸರ್ ಆಗಿ ಶಿವಣ್ಣ

ವೀರಪ್ಪನ್ನನ್ನ ಕಾರ್ಯಾಚರಣೆ ನಡೆಸಿ ಕೊಂದ ಆಫೀಸರ್ ವಿಜಯ್ಕುಮಾರ್ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದು ಶಿವಣ್ಣನಿಗೆ ಜೋಡಿಯಾಗಿ 'ಪ್ಯಾರ್ಗೆ ಆಗ್ಬಿಟ್ಟೈತೆ' ಖ್ಯಾತಿಯ ಪರೂಲ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ.

ವೀರಪ್ಪನ್ ಪಾತ್ರಧಾರಿ ಯಾರು?

ವೀರಪ್ಪನ್ ಪಾತ್ರಧಾರಿ ಯಾರು?

ಈ ಹಿಂದೆ ಎಎಮ್ಆರ್ ರಮೇಶ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಅಟ್ಟಹಾಸ' ಚಿತ್ರದಲ್ಲಿ ಹುಲಿ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತಿದ್ರು. ಆದ್ರೆ ಇಲ್ಲಿ ಮುಂಬೈ ಮೂಲದ ಥಿಯೇಟರ್ ಆರ್ಟಿಸ್ಟ್ ವೀರಪ್ಪನ್ ಪಾತ್ರ ಮಾಡಲಿದ್ದಾರೆ.

ಮುತ್ತುಲಕ್ಷ್ಮಿಯಾಗಿ ಯಜ್ಞಾ ಶೆಟ್ಟಿ

ಮುತ್ತುಲಕ್ಷ್ಮಿಯಾಗಿ ಯಜ್ಞಾ ಶೆಟ್ಟಿ

ಚಿತ್ರದಲ್ಲಿ ಮುತ್ತುಲಕ್ಷ್ಮಿಯಾಗಿ ಪಾತ್ರ ಮಾಡ್ತಿರೋದು ಯಜ್ಞಾ ಶೆಟ್ಟಿ ಅನ್ನೋದು ಮೂಲಗಳ ಮಾಹಿತಿ. ಇತ್ತೀಚೆಗೆ ತಾನೆ ಅಂಬೇಡ್ಕರ್ ಪತ್ನಿ ರಮಾಬಾಯಿ ಪಾತ್ರ ಮಾಡಿರೋ ಯಜ್ಞಾ ಶೆಟ್ಟಿ ಈ ಡಿ ಗ್ಲಾಮರಸ್ ರೋಲ್ಗೆ ಚೆನ್ನಾಗಿಯೇ ಒಪ್ತಾರೆ. ಎದ್ದೇಳು ಮಂಜುನಾಥದಲ್ಲಿ ಅವರು ನಿಭಾಯಿಸಿದ್ದ ಪಾತ್ರವನ್ನೂ ನೆನಪಿಸಿಕೊಳ್ಳಿ.

English summary
Bollywood super star director Ram Gopal Varma is making his debut in Kannada movie industry by directing Killing Veerappan, with Shiva Rajkumar in the lead. Surprisingly, Rajkumar does not appear in this movie at. Some interesting facts are here.
Please Wait while comments are loading...

Kannada Photos

Go to : More Photos