»   » ಸ್ಯಾಂಡಲ್ ವುಡ್ ಸ್ಟಾರ್ ಮೊಬೈಲ್ ಸಂಸ್ಥೆಯ ರಾಯಭಾರಿ

ಸ್ಯಾಂಡಲ್ ವುಡ್ ಸ್ಟಾರ್ ಮೊಬೈಲ್ ಸಂಸ್ಥೆಯ ರಾಯಭಾರಿ

Posted by:
Subscribe to Filmibeat Kannada

ತನ್ನ ಯಶಸ್ಸು ಮತ್ತು ಜನಪ್ರಿಯತೆಯ ಅಭಿಯಾನವನ್ನು ಮುಂದುವರಿಸಿರುವ ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಮೊಬೈಲ್ ಸಂಸ್ಥೆಯೊಂದರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

1996ರಲ್ಲಿ ಅಸ್ತಿತ್ವಕ್ಕೆ ಬಂದ ದೆಹಲಿ ಮೂಲದ ಇಂಟೆಕ್ಸ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ತನ್ನ 'ಇಂಟೆಕ್ಸ್'ಮೊಬೈಲ್ ಉತ್ಪನ್ನಕ್ಕೆ ಸುದೀಪ್ ಅವರನ್ನು ಬ್ರಾಂಡ್ ಅಂಬಾಡಸರ್ ಆಗಿ ಆಯ್ಕೆ ಮಾಡಿದೆ. (ಬೆಂಗಳೂರು ಟ್ರಾಫಿಕ್ ರಾಯಭಾರಿ ಕಿಚ್ಚ ಸುದೀಪ್)

ಚಿತ್ರೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಸುದೀಪ್ ಅವರನ್ನು ನಮ್ಮ ಸಂಸ್ಥೆಯ ರಾಯಭಾರಿಯನ್ನಾಗಿ ನೇಮಿಸಲು ನಮಗೆ ಸಂತೋಷವಾಗುತ್ತಿದೆ. ಸುದೀಪ್ ಅವರಿಂದ ನಮ್ಮ ಮೊಬೈಲ್ ಉತ್ಪನ್ನಗಳ ಬೇಡಿಕೆ ಹೆಚ್ಚಾಗಲಿದೆ ಎಂದು ಸಂಸ್ಥೆಯ ನಿರ್ದೇಶಕ ಕೇಶವ್ ಬನ್ಸಾಲ್ ಹೇಳಿದ್ದಾರೆ.

ಇಂಟೆಕ್ಸ್ ತನ್ನ ಮೊಬೈಲ್ ಉತ್ಪನ್ನಗಳ ಬ್ರಾಂಡ್ ರಾಯಭಾರಿಯಾಗಿ ಒಂದು ವರ್ಷದ ಅವಧಿಗೆ ಸುದೀಪ್ ಅವರನ್ನು ನೇಮಕ ಮಾಡಿಕೊಂಡಿದೆ ಎಂದು ಇಂಟೆಕ್ಸ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಕಲಾವಿದರು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಈ ಹಿಂದೆ ಡಾ.ರಾಜ್, ಉಪೇಂದ್ರ, ಪುನೀತ್, ರಾಗಿಣಿ 'ನಂದಿನಿ' ಉತ್ಪನ್ನಗಳಿಗೆ ಉಚಿತವಾಗಿ ರಾಯಭಾರಿಯಾಗಿ ಕೆಲಸ ಮಾಡಿದ್ದರು.

ಉತ್ತಮ ಬೆಲೆಗೆ ಮೊಬೈಲ್

ಉತ್ತಮ ಬೆಲೆಗೆ ಮೊಬೈಲ್

ಇಂಟೆಕ್ಸ್ ಸಂಸ್ಥೆಯ ರಾಯಭಾರಿಯಾಗಿ ನೇಮಕವಾಗಿರುವುದು ಸಂತಸ ತಂದಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಗೆ ಗುಣಮಟ್ಟದ ಮೊಬೈಲ್ ಅನ್ನು ಸಂಸ್ಥೆ ನೀಡಲಿದೆ - ಸುದೀಪ್

ಹೊಸ ಮೊಬೈಲ್ ಬಿಡುಗಡೆ

ಹೊಸ ಮೊಬೈಲ್ ಬಿಡುಗಡೆ

ಸುದ್ದಿಗೋಷ್ಠಿಯಲ್ಲಿ ಸುದೀಪ್ ಆರು ಸಾವಿರಕ್ಕೆ ಹತ್ತು ರೂಪಾಯಿ ಕಮ್ಮಿ (5990) ಮುಖಬೆಲೆಯ, ಹಲವು ಸೌಲಭ್ಯವನ್ನು ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದರು.

ಬೆಂಗಳೂರು ಟ್ರಾಫಿಕ್ ಪೊಲೀಸ್

ಬೆಂಗಳೂರು ಟ್ರಾಫಿಕ್ ಪೊಲೀಸ್

ಬೆಂಗಳೂರು ಟ್ರಾಫಿಕ್ ಪೊಲೀಸರು ಕಿಚ್ಚ ಸುದೀಪ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಸುದೀಪ್ ಆಟೋ ಡ್ರೈವರ್ ಆಗಿ ಯೂನಿಫಾರ್ಮ್ ಹಾಕಿಕೊಂಡು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಜಾಯ್ ಅಲುಕಾಸ್ ರಾಯಭಾರಿಯಾಗಿಯೂ ಸುದೀಪ್

ಜಾಯ್ ಅಲುಕಾಸ್ ರಾಯಭಾರಿಯಾಗಿಯೂ ಸುದೀಪ್

'ಜಾಯ್ ಅಲುಕಾಸ್'ಚಿನ್ನಾಭರಣ ತಯಾರಿಕಾ ಮತ್ತು ಮಾರಾಟ ಸಂಸ್ಥೆಯ ರಾಯಭಾರಿಯಾಗಿಯೂ ಸುದೀಪ್ ಕಾಣಿಸಿಕೊಂಡಿದ್ದರು. ಸುದೀಪ್ ಅವರ ಈ ಜಾಹೀರಾತು ಕಿರುತೆರೆಯಲ್ಲಿ ಭಾರೀ ಜನಪ್ರಿಯತೆಯನ್ನೂ ಪಡೆದಿತ್ತು.

ಪುನೀತ್, ರಾಧಿಕಾ, ರಮ್ಯಾ

ಪುನೀತ್, ರಾಧಿಕಾ, ರಮ್ಯಾ

ಪುನೀತ್ ರಾಜಕುಮಾರ್ ಮತ್ತು ರಾಧಿಕಾ ಪಂಡಿತ್, ಸರ್ವಶಿಕ್ಷಣ ಅಭಿಯಾನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಮಾಜಿ ಮಂಡ್ಯ ಸಂಸದೆ ರಮ್ಯಾ ಕೂಡಾ ಶೂ ಕಂಪೆನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಸಂಭಾವನೆಗೆ ಬದಲಾಗಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಶೂ ಕೊಡುವಂತೆ ರಮ್ಯಾ ಕೇಳಿಕೊಂಡಿದ್ದರು.

English summary
Intex Technologies ropes in Kannada Actor Kichcha Sudeep as Brand Ambassador for Karnataka for their Mobile product.
Please Wait while comments are loading...

Kannada Photos

Go to : More Photos