twitter
    For Quick Alerts
    ALLOW NOTIFICATIONS  
    For Daily Alerts

    ಮಿಸ್ಟರ್ ಐರಾವತನ ಬಗ್ಗೆ ಚಾಲೆಂಜಿಂಗ್ ಸ್ಟಾರ್ಗೇ ಡೌಟು!

    By ಜೀವನರಸಿಕ
    |

    'ಮಿಸ್ಟರ್ ಐರಾವತ'! ಈ ಹೆಸರು ಕೇಳಿದ್ರೇ ಸ್ಯಾಂಡಲ್ವುಡ್ನ ಹೊಸಬರ ಚಿತ್ರಗಳು ಬೆಚ್ಚಿ ಬೀಳ್ತಿವೆ. ಐರಾವತ ಬಂದ ಒಂದು ತಿಂಗಳ ನಂತ್ರ ಥಿಯೇಟರ್ ಕಡೆ ಮುಖ ಮಾಡೋದು ಒಳ್ಳೇದು ಅಂತ ಅದೆಷ್ಟೋ ಚಿತ್ರಗಳು ಲೆಕ್ಕಾಚಾರ ಹಾಕ್ತಿವೆ. ಆದ್ರೆ ಸ್ವತಃ ದರ್ಶನ್ ಅವ್ರೇ ಚಿತ್ರದ ರಹಸ್ಯವನ್ನ ಬಾಯಿಬಿಟ್ಟಿದ್ದಾರೆ.

    "ಮಿಸ್ಟರ್ ಐರಾವತ ಚಿತ್ರ ಶತದಿನೋತ್ಸವ ಆಚರಿಸುತ್ತೆ.... ಅಂತೆಲ್ಲಾ ಕನಸು ಕಾಣೋಲ್ಲ. ಐರಾವತ ಅಂತಹ ಚಿತ್ರವಲ್ಲ. ಈಗಿನ ಬಾಕ್ಸಾಫೀಸ್ ಲೆಕ್ಕಾಚಾರಗಳೂ ದಿನದ ಲೆಕ್ಕದಲ್ಲಿಲ್ಲ. ಶೋಗಳ ಲೆಕ್ಕದಲ್ಲಿದೆ. ಸ್ಕ್ರೀನ್ ಮತ್ತು ಥಿಯೇಟರ್ಗಳ ಲೆಕ್ಕಾಚಾರದಲ್ಲಿದೆ" ಅಂದಿದ್ದಾರೆ. ಏನಿದರ ಅರ್ಥ? ನಿರ್ದೇಶಕ ಎಪಿ ಅರ್ಜುನ್ ಅವರೇ, ನೀವೇನು ಹೇಳುತ್ತೀರಿ? ['Mr.ಐರಾವತ' ಟಿಕೆಟ್ ಬೆಲೆ ಅಬ್ಬಬ್ಬಾ...ಅಷ್ಟೊಂದಾ.?!]

    ಮಿಸ್ಟರ್ ಐರಾವತ ಚಿತ್ರ ತಯಾರಿಸೋಕೆ ಚಿತ್ರತಂಡ ಹೆಚ್ಚೂ ಕಡಿಮೆ ಒಂದೂವರೆ ವರ್ಷವಾಗಿದೆ. ದರ್ಶನ್ ಅವ್ರೇ ನಾಲ್ಕು ತಿಂಗಳಷ್ಟು ದೀರ್ಘವಾದ ಡೇಟ್ಸ್ ಕೊಟ್ಟಿದ್ದಾರೆ. ಚಿತ್ರ ಅದ್ಧೂರಿಯಾಗಿರುತ್ತೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಇನ್ನು 100 ಡೇಸ್ ಮಾಡೋದು ದರ್ಶನ್ಗಿರೋ ದೊಡ್ಡ ಅಭಿಮಾನಿ ಬಳಗಕ್ಕೆ ಕಷ್ಟವೇನೂ ಅಲ್ಲ. ಆದ್ರೆ ದರ್ಶನ್ಗೇ ಐರಾವತದ ಬಗ್ಗೆ ಅಂಥಾ ಹೋಪ್ ಇಲ್ವಾ? ಏನಿದರ ಮರ್ಮ ಅನ್ನೋದನ್ನ ಸ್ಲೈಡ್ನಲ್ಲಿ ನೋಡ್ತಾ ಹೋಗಿ...

    ಬೃಂದಾವನ ಕೊಟ್ಟ ಶಾಕ್

    ಬೃಂದಾವನ ಕೊಟ್ಟ ಶಾಕ್

    ಬೃಂದಾವನ ಚಿತ್ರ ತೆಲುಗಿನ ಬೃಂದಾವನಂನ ರೀಮೇಕ್. ತೆಲುಗಿಗಿಂತ ಒಂದು ಪಟ್ಟು ಅದ್ಧೂರಿಯಾಗಿ ಚಿತ್ರವನ್ನ ಮಾಡಿದ್ದೀವಿ ಅಂತ ಸ್ವತಃ ದರ್ಶನ್ ಹೇಳಿದ್ರು. ಚಿತ್ರ ಥಿಯೇಟರ್ಗೆ ಬಂದಾಗ ಅದು ಪ್ರತೀ ಫ್ರೇಂನಲ್ಲು ಕಾಣಿಸುತ್ತೆ ಅಂದಿದ್ರು. ದರ್ಶನ್ ಮಾತು ನಂಬಿ ಬಂದಿದ್ದ ಜನ್ರಿಗೆ ನಿರಾಶೆಯಾಗಿತ್ತು. ಚಿತ್ರ ಮಕಾಡೆ ಮಲಗ್ತು.

    ಅಂಬರೀಷ ಕೂಡ ಹಾಗೇ

    ಅಂಬರೀಷ ಕೂಡ ಹಾಗೇ

    ಅಂಬರೀಷ ಸಿನಿಮಾ ಬಗ್ಗೆ ಮಾತಾಡಲ್ಲ. ಮಾಡಿ ತೋರಿಸ್ತೀವಿ ಅಂದಿದ್ದ ದರ್ಶನ್ಗೆ ಅಂಬರೀಷನ ಮೂಲಕಾನೂ ವಿಜಯದ ವಿಶೇಷ ಹಬ್ಬ ದಕ್ಕಲಿಲ್ಲ. ಬುಲ್ ಬುಲ್ ನಂತ್ರ ದರ್ಶನ್ ಮಾಡಿದ ಸಿನಿಮಾಗಳು ಬಾಕ್ಸಾಫೀಸಲ್ಲಿ ಭರ್ಜರಿ ಬೆಳೆ ಬೆಳೀಲಿಲ್ಲ.

    ಗೊಂದಲಕ್ಕೆ ಬಿದ್ದ ದರ್ಶನ್

    ಗೊಂದಲಕ್ಕೆ ಬಿದ್ದ ದರ್ಶನ್

    ಇವೆರೆಡೂ ಆದ ನಂತ್ರ ದರ್ಶನ್ ಚಿತ್ರದ ಬಗ್ಗೆ ಮಾತಾಡಿದ್ರೂ ಕಷ್ಟ, ಮಾತಾಡದೇ ಇದ್ರೂ ಕಷ್ಟ ಅನ್ನೋ ಗೊಂದಲಕ್ಕೆ ಬಿದ್ದ ಹಾಗಿದ್ರು. ಹಾಗಾಗೀನೇ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಮಾಧ್ಯಮದವ್ರ ಜೊತೆ ಮಾತಾಡಿರಲಿಲ್ಲ. ಆದ್ರೆ ಈಗ ಚಿತ್ರದ ಬಗ್ಗೆ ಸುಮ್ಮನೇ ನಿರೀಕ್ಷೆಗಳು ಗರಿಗೆದರೋದು ಮಾಧ್ಯಮಗಳು ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟುಹಾಕಿ ಮಕಾಡೆಯಾಗೋದು ಬೇಡ ಅಂತ ದರ್ಶನ್ ನಿರ್ಧಾರ ಮಾಡಿದಂತಿದೆ.

    ಚಾಲೇಂಜಿಂಗ್ ಸ್ಟಾರ್ ಈಗ ನಿರಾಳ

    ಚಾಲೇಂಜಿಂಗ್ ಸ್ಟಾರ್ ಈಗ ನಿರಾಳ

    ಈಗ ದರ್ಶನ್ ನಿರಾಳರಾಗಿದ್ದಾರೆ. ಅವ್ರ ಪತ್ರಿಕಾಗೋಷ್ಠಿಯ ಮಾತುಗಳಲ್ಲೊಂದು ಪ್ರಬುದ್ಧತೆ ಕಾಣಿಸ್ತಿದೆ. ಮಿಸ್ಟರ್ ಐರಾವತ ನೂರು ದಿನ ಓಡುತ್ತೆ ಅನ್ನೋ ನಿರೀಕ್ಷೆ ನನಗಿಲ್ಲ, ಆದ್ರೆ ಒಳ್ಳೆಯ ಮಾಸ್ ಎಂಟರ್ಟೈನರ್ ಪೈಸಾ ವಸೂಲ್ ಅನ್ನೋದನ್ನ ಸ್ಪಷ್ಟವಾಗಿ ಹೇಳಿದ್ದಾರೆ ಚಾಲೆಂಜಿಂಗ್ಸ್ಟಾರ್.

    ದಾಖಲೆ ಬರೆಯಲಿದೆ ಐರಾವತ

    ದಾಖಲೆ ಬರೆಯಲಿದೆ ಐರಾವತ

    ರಾಜ್ಯಾದ್ಯಂತ 350 ಚಿತ್ರಮಂದಿರಗಳಲ್ಲಿ ಐರಾವತನ ಆರ್ಭಟ ಶುರುವಾಗಲಿದೆಯಂತೆ. ಮಿಸ್ಟರ್ ಐರಾವತ ಚಿತ್ರಪ್ರೇಮಿಗಳಿಗೆ ರಾಜ್ಯಾದ್ಯಂತ ಮೋಡಿ ಮಾಡೋಕೆ ರಾಜ್ಯದ 40% ಥಿಯೇಟರ್ಗಳಲ್ಲಿ ಬರಲಿದ್ದಾನೆ ಅನ್ನೋದು ವಿಶೇಷ ಜೊತೆಗೆ ಸ್ಯಾಂಡಲ್ವುಡ್ನಲ್ಲಿ ಹೊಸ ದಾಖಲೆ.

    ವರ್ಲ್ಡ್ ವೈಡ್ 450 ಥಿಯೇಟರು?

    ವರ್ಲ್ಡ್ ವೈಡ್ 450 ಥಿಯೇಟರು?

    ಮಿಸ್ಟರ್ ಐರಾವತವನ್ನ ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿರೋ ಸಂದೇಶ್ ನಾಗರಾಜ್ ಕಲೆಕ್ಷನ್ನನ್ನ ಒಂದು ವಾರದಲ್ಲಿ ಬಾಚಿಕೊಳ್ಳೋ ಪ್ಲಾನ್ನಲ್ಲಿದ್ದು ಚಿತ್ರವನ್ನ ವಿಶ್ವದಾದ್ಯಂತ 450 ಚಿತ್ರಮಂದಿರದಲ್ಲಿ ತೆರೆಗೆ ತರೋ ಯೋಜನೆ ಹಾಕ್ತಿದ್ದಾರಂತೆ.

    ದರ್ಶನ್ ಅಭಿಮಾನಿಗಳಿಗೆ ಹಬ್ಬ

    ದರ್ಶನ್ ಅಭಿಮಾನಿಗಳಿಗೆ ಹಬ್ಬ

    ಒಟ್ಟಾರೆ ಐರಾವತನ ಆಗಮನಕ್ಕೆ ದಿನಗಣನೆ ಆರಂಭವಾಗಿದ್ದು ಇನ್ನು 9 ದಿನದಲ್ಲಿ ಅಂದ್ರೆ ಅಕ್ಟೋಬರ್ ಒಂದಕ್ಕೆ ಐರಾವತನ ಆಟ ಶುರುವಾಗಲಿದೆ. ದರ್ಶನ್ ಕಟ್ಟುಮಸ್ತ್ ಬಾಡಿಯನ್ನ ಈ ಚಿತ್ರದಲ್ಲಿ ಮೊದಲಬಾರಿಗೆ ನೋಡಬಹುದು..

    English summary
    Is Challenging Star Darshan not so hopeful about Mr Airavatha? No doubt, it is one of the biggest movies made in Kannada and making lot of noise in Kannada film industry. But, if you analyse the words of Darshan, it is clear does not like to create big hype. Mister Airavatha is directed by AP Arjun. Urvas
    Monday, September 21, 2015, 11:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X