»   » ಪ್ರೇಮ್ 'ಡಿಕೆ' ಚಿತ್ರಕ್ಕೆ ಅಮೀರ್ 'ಪಿಕೆ' ಸ್ಫೂರ್ತಿನಾ?

ಪ್ರೇಮ್ 'ಡಿಕೆ' ಚಿತ್ರಕ್ಕೆ ಅಮೀರ್ 'ಪಿಕೆ' ಸ್ಫೂರ್ತಿನಾ?

Written by: ಉದಯರವಿ
Subscribe to Filmibeat Kannada

ಪ್ರೇಮ್ ಅವರ 'ಡಿಕೆ' ಚಿತ್ರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಚಿತ್ರದ ಶೀರ್ಷಿಕೆ ಬಗೆಗಿನ ಗುಟ್ಟು ಬಿಟ್ಟುಕೊಡದ ಪ್ರೇಮ್ ಇದೀಗ ಇನ್ನೊಂದು ಟ್ರಿಕ್ ಮಾಡಿದ್ದಾರೆ. ಖಳನಟ ಶೋಭಾರಾಜ್ ಅವರನ್ನು ಅರೆಬೆತ್ತಲಾಗಿಸಿದ್ದಾರೆ.

ಇತ್ತೀಚೆಗೆ ಡಿಕೆ ಚಿತ್ರದಲ್ಲಿ ಬಾಗಿಲು ತೆಗೆಯೆ ಸೇಸಮ್ಮ ಎಂದು ಸ್ಟೆಪ್ ಹಾಕಿ ಹೋಗಿದ್ದರು ಸನ್ನಿ ಲಿಯೋನ್. ಅದಾದ ಸ್ವಲ್ಪ ದಿನಕ್ಕೆ ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಫೋಟೋ ರಿಲೀಸ್ ಮಾಡಿದ್ದಾರೆ ಪ್ರೇಮ್. ಶೋಭಾರಾಜ್ ಅವರು ತಮ್ಮ ಮಾನವನ್ನು ತಲೆಬುರುಡೆ ಮೂಲಕ ಮುಚ್ಚಿಕೊಂಡಿದ್ದಾರೆ. [ಡಿಕೆ 'ರಾ' ಲವ್ ಸ್ಟೋರಿಯ ಅಚ್ಚರಿ ಸೀಕ್ರೆಟ್ ಗಳು]

ಇಷ್ಟಕ್ಕೂ ಚಿತ್ರದಲ್ಲಿ ಶೋಭಾರಾಜ್ ಪಾತ್ರ ಮಾಟ ಮಂತ್ರ ಮಾಡುವ ಮಂತ್ರವಾದಿ. 'ಪಿಕೆ' ಚಿತ್ರದಲ್ಲಿ ಅಮೀರ್ ಖಾನ್ ಅರೆಬೆತ್ತಲಾಗಿದ್ದರು. ಇದೀಗ ಅದೇ ರೀತಿ ಶೋಭಾರಾಜ್ 'ಡಿಕೆ' ಚಿತ್ರದಲ್ಲಿ ಅರೆಬೆತ್ತಲಾಗಿದ್ದಾರೆ. ಆದರೆ ಇದು 'ಪಿಕೆ'ಯ ಚಿತ್ರದ ಕಾಪಿ ಅಲ್ಲ ಎಂದಿದ್ದಾರೆ ಪ್ರೇಮ್.

ಇದು ಪಬ್ಲಿಸಿಟಿ ಗಿಮ್ಮಿಕ್ ಅಲ್ಲ ಎಂದಿರುವ ಪ್ರೇಮ್

ಇದು ಪಬ್ಲಿಸಿಟಿ ಗಿಮ್ಮಿಕ್ ಅಲ್ಲ ಎಂದಿರುವ ಪ್ರೇಮ್

ಶೋಭಾರಾಜ್ ಅವರ ಪಾತ್ರವೇ ಆ ರೀತಿ ಇದ್ದು ಅದಕ್ಕೆ ತಕ್ಕಂತೆ ಅವರ ಗೆಟಪ್ ಇರುತ್ತದೆ ಎಂದಿದ್ದಾರೆ. ಇದು ಪಬ್ಲಿಸಿಟಿ ಗಿಮ್ಮಿಕ್ ಅಲ್ಲವೇ ಅಲ್ಲ ಎಂದಿದ್ದಾರೆ ಪ್ರೇಮ್. ಒಟ್ಟಾರೆಯಾಗಿ 'ಡಿಕೆ' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಇದು ರಾ ಲವ್ ಸ್ಟೋರಿ ಅಂತೆ

ಇದು ರಾ ಲವ್ ಸ್ಟೋರಿ ಅಂತೆ

ಡಿ ಕೆ ಸಿನಿಮಾದ ಟ್ಯಾಗ್ ಲೈನ್ ಆಗಿರೋದು ರಾ ಲವ್ ಸ್ಟೋರಿ ಅಂತ. ಇದು ಯಾಕೆ Raw ಅಂದ್ರೆ ರಕ್ಷಿತಾ ಪ್ರೇಮ್ ಲವ್ ಸ್ಟೋರಿ ಆಗಿರ್ಬಾರ್ದು ಅನ್ನೋ ಕುತೂಹಲ ನಮ್ಮದು.

ಇದು ರಾಧಿಕಾ ಕುಮಾರಸ್ವಾಮಿ ಪ್ರೇಮಕಥೆನಾ?

ಇದು ರಾಧಿಕಾ ಕುಮಾರಸ್ವಾಮಿ ಪ್ರೇಮಕಥೆನಾ?

ಡಿ ಕೆ ಶಿವಕುಮಾರನ್ನು ಆಹ್ವಾನಿಸಿರೋದು ನೋಡಿದ್ರೆ ಇದು ರಾಧಿಕಾ ಕುಮಾರಸ್ವಾಮಿಯವರ ಪ್ರೇಮಕಥೆನಾ ಅನ್ನೋ ಮತ್ತೊಂದು ಕುತೂಹಲವೂ ಮೂಡ್ತಿದೆ.

ಅಬ್ ಕಿ ಬಾರ್ ಮೇರಾ ಸರ್ಕಾರ್

ಅಬ್ ಕಿ ಬಾರ್ ಮೇರಾ ಸರ್ಕಾರ್

ಡಿ ಕೆ ಟ್ಯಾಗ್ ಲೈನ್ ರಾ ಲವ್ ಸ್ಟೋರಿಯಾದ್ರೆ ಟಾಪ್ ಲೈನ್ "ಅಬ್ ಕಿ ಬಾರ್ ಮೇರಾ ಸರ್ಕಾರ್" ಅಂತ. ಇದು ರಾಜಕೀಯಕ್ಕೂ ಲಿಂಕ್ ಇರೋ ಸ್ಟೋರಿ. ಹಾಗಾಗೀನೇ ಹಿಂದಿನ ಎರಡೂ ಲವ್ ಸ್ಟೋರಿಗಳಿಗೆ ಲಿಂಕ್ ಸಿಗ್ತಿದೆ.

ಇದೊಂದು ರಿಯಲ್ ಲವ್ ಸ್ಟೋರಿ

ಇದೊಂದು ರಿಯಲ್ ಲವ್ ಸ್ಟೋರಿ

ರಿಯಲ್ ಲವ್ ಸ್ಟೋರಿಯಂತೆ. ಇದೊಂದು ರಿಯಲ್ ಲವ್ ಸ್ಟೋರಿ ಅಂತ ನಿರ್ದೇಶಕ ಉದಯಪ್ರಕಾಶ್ ಉಸುರಿದ್ದಾರೆ. ಹಾಗೆ ನೋಡಿದ್ರೆ ಚಿತ್ರತಂಡ ಬಾಯ್ಬಿಟ್ಟಿರೋದು ಇದೊಂದು ವಿಷಯವನ್ನ ಮಾತ್ರ. ಹಾಗಾಗೀನೇ ಹಿಂದಿನ ರಾ ಲವ್ ಸ್ಟೋರಿ ಅನ್ನೋದು ಮತ್ತೆ ಮತ್ತೆ ಹೊಸ ಹೊಸ ಕುತೂಹಲ ಮೂಡಿಸ್ತಿದೆ.

English summary
Is Prem's Kannada movie DK is inspired by Aamir Khan's PK? Shobharaj's semi-nude photo from 'DK' is very similar to that of Amir Khan's 'PK'. But Prem rubbishes such claims.
Please Wait while comments are loading...

Kannada Photos

Go to : More Photos