»   » ಅನಿವಾಸಿ ಭಾರತೀಯನ ಕೈಹಿಡಿದ ಜಗಪತಿಬಾಬು ಪುತ್ರಿ

ಅನಿವಾಸಿ ಭಾರತೀಯನ ಕೈಹಿಡಿದ ಜಗಪತಿಬಾಬು ಪುತ್ರಿ

Written by: ಅನಂತರಾಮು, ಹೈದರಾಬಾದ್
Subscribe to Filmibeat Kannada

ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಕನ್ನಡದ 'ಬಚ್ಚನ್' ಚಿತ್ರದಲ್ಲಿ ವಿಶೇಷ ಪಾತ್ರ ಪೋಷಿಸಿರುವ ಜಗಪತಿಬಾಬು ಅವರ ಹಿರಿಯ ಪುತ್ರಿ ಮೇಘನಾ ದಾಂಪತ್ಯಜೀವನಕ್ಕೆ ಅಡಿಯಿಟ್ಟಿದ್ದಾರೆ. ಹೈದರಾಬಾದ್ ನ ವೆಸ್ಟಿನ್ ಹೋಟೆಲ್ ನಲ್ಲಿ ಅವರ ಮದುವೆ ಭಾನುವಾರ (ಮಾ.8) ಅದ್ದೂರಿಯಾಗಿ ನೆರವೇರಿತು.

ತನ್ನ ಅನಿವಾಸಿ ಭಾರತೀಯ ಗೆಳೆಯನ ಕೈಹಿಡಿದ್ದಾರೆ ಮೇಘನಾ. ಯುಎಸ್ ನಲ್ಲಿ ಶಿಕ್ಷಣ ಪಡೆಯುತ್ತಿರಬೇಕಾದರೆ ಇಬ್ಬರ ನಡುವೆ ಪರಿಚಯ ಏರ್ಪಟ್ಟು ಅದು ಪ್ರೇಮಕ್ಕೆ ತಿರುಗಿ ಈಗ ಮದುವೆ ಮೂಲಕ ಇನ್ನಷ್ಟು ಹತ್ತಿರವಾಗಿದ್ದಾರೆ ಮೇಘನಾ.

Jagapathi Babu Daughter Marriage in hyderabad

ಮೇಘನಾ ಅವರು ಯುಎಸ್ ನಲ್ಲಿ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಮಾಡುತ್ತಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮೇಘನಾ ಅವರ ಮದುವೆಗೆ ಟಾಲಿವುಡ್ ತಾರೆಗಳು, ರಾಜಕೀಯ ಮುಖಂಡರು ಆಗಮಿಸಿದ ಶುಭಕೋರಿದರು.

ಆರಂಭದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಜಗಪತಿಬಾಬು ಆ ಬಳಿಕ ಪೋಷಕನಟನಾಗಿ ಗಮನಸೆಳೆದವರು. ಹೀರೋ ಪಾತ್ರಗಳಲ್ಲಿ ಮಿಂಚಿದ್ದಕ್ಕಿಂತ ಹೆಚ್ಚಾಗಿ ಈಗ ಖಳನಟನಾಗಿ ಎಲ್ಲರ ಗಮನಸೆಳೆಯುತ್ತಿದ್ದಾರೆ.

ರಜನಿಕಾಂತ್ ಅವರ 'ಲಿಂಗಾ' ಚಿತ್ರದಲ್ಲೂ ಖಳನಟನಾಗಿ ಜಗಪತಿಬಾಬು ಮಿಂಚಿದ್ದಾರೆ. ಈಗವರು ಟಾಲಿವುಡ್, ಕೋಲಿವುಡ್ ನಲ್ಲಿ ಬಲು ಬೇಡಿಕೆಯ ಖಳನಟ. ಒಟ್ಟಾರೆಯಾಗಿ ತಮ್ಮ ಪುತ್ರಿ ಪ್ರೇಮವಿವಾಹಕ್ಕೆ ಜಗಪತಿಬಾಬು ಒಪ್ಪಿರುವುದೇ ವಿಶೇಷ.

English summary
Tollywood noted actor Jagapathi Babu’s (Acted in Kannada movie Bachchan) elder daughter Meghana’s marriage was held on grand note in a Westin Hotel, Hyderabad on yesterday (March 8th, 2015). Meghana tied the knot to her NRI Boyfriend and it is a love cum arranged marriage.
Please Wait while comments are loading...

Kannada Photos

Go to : More Photos