»   » ಈ ವಾರ ತೆರೆಗೆ ಬರಲಿರುವ 'ಮೇಲುಕೋಟೆ ಮಂಜ' ನ ಸ್ಪೆಷಾಲಿಟಿಗಳು

ಈ ವಾರ ತೆರೆಗೆ ಬರಲಿರುವ 'ಮೇಲುಕೋಟೆ ಮಂಜ' ನ ಸ್ಪೆಷಾಲಿಟಿಗಳು

Posted by:
Subscribe to Filmibeat Kannada

ಜಗ್ಗೇಶ್ ಅವರ ಹೆಸರು ಕೇಳುತ್ತಿದಂತೆಯೇ ಹಲವರ ಮುಖದಲ್ಲಿ ನಗು ಹುಟ್ಟುತ್ತದೆ. ಕಾರಣ ಜಗ್ಗೇಶ್ ನಗೆಹೊನಲಿನ ಚಿಲುಮೆ. 'ಎದ್ದೇಳು ಮಂಜುನಾಥ' ಮತ್ತೆ ನಗಿಸಲು ಎದ್ದಿರುವಂತಹ 'ಮೇಲುಕೋಟೆ ಮಂಜ' ಚಿತ್ರ ಈ ವಾರ ತೆರೆ ಮೇಲೆ ಬರಲಿದೆ.[ನಟಿ ಐಂದ್ರಿತಾ ರೇ, 'ಮೇಲುಕೋಟೆ ಮಂಜ' ಮತ್ತು ಸಂಭಾವನೆ ಕಿರಿಕ್]

'ನೀರ್ ದೋಸೆ' ಚಿತ್ರದ ನಂತರ, ಜಗ್ಗೇಶ್ ಅವರು ಅಭಿನಯಿಸಿ ಆಕ್ಷನ್ ಕಟ್ ಹೇಳಿರುವ ಕಾರಣಕ್ಕೆ ಹೆಚ್ಚು ಸೆನ್ಸೇಷನಲ್ ಕ್ರಿಯೇಟ್ ಮಾಡಿರುವ 'ಮೇಲುಕೋಟೆ ಮಂಜ' ಚಿತ್ರದ ಹೈಲೈಟ್ ಏನಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಆದ್ದರಿಂದ ಇಂದಿನ ಲೇಖನದಲ್ಲಿ 'ಮೇಲುಕೋಟೆ ಮಂಜ' ಚಿತ್ರದ ಡೀಟೇಲ್ಸ್ ನಿಮಗಾಗಿ ಇಲ್ಲಿದೆ ಓದಿ..

'ಮೇಲುಕೋಟೆ ಮಂಜ' ಚಿತ್ರದ ಕಥೆ ಏನು?

'ಮೇಲುಕೋಟೆ ಮಂಜ' ಚಿತ್ರದ ಕಥೆ ಏನು?

ಚೀಟಿ ಹೆಸರಿನಲ್ಲಿ ಜನರಿಗೆ ವಂಚನೆ ಮಾಡಿ ಎಸ್ಕೇಪ್ ಆಗುವವನ ಕಥೆ ಇದು. ಪ್ರಸ್ತುತ ಸಮಾಜದ ಮೋಸಗಾರರ ಬಗೆಗಿನ ಅಂಶಗಳಿಗೆ ಕಮರ್ಷಿಯಲ್ ಮತ್ತು ರೋಚಕತೆ ಟಚ್ ನೀಡಲಾಗಿದೆಯಂತೆ.[ಫೆಬ್ರವರಿಯಲ್ಲಿ 'ಮೇಲುಕೋಟೆ ಮಂಜ' ಬರ್ತಿದ್ದಾರೆ! ನಗೋದಕ್ಕೆ ರೆಡಿಯಾಗಿ]

ಜಗ್ಗೇಶ್ (ಮಂಜ) ಅವರ ಪಾತ್ರ ಏನು?

ಜಗ್ಗೇಶ್ (ಮಂಜ) ಅವರ ಪಾತ್ರ ಏನು?

ಚಿತ್ರದಲ್ಲಿ ಜಗ್ಗೇಶ್ (ಮಂಜ) ಮಧ್ಯಮ ವರ್ಗದ ವ್ಯಕ್ತಿ. ಹಲವರಂತೆ ಅಪರಿಮಿತ ಕನಸುಗಳನ್ನು ಕಾಣುವ ಮಂಜ, ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಲ ಮಾಡುತ್ತಾನೆ. ಒಂದು ಸಾಲ ತೀರಿಸಲು ಇನ್ನೊಂದು ಸಾಲ ಮಾಡುತ್ತಾನೆ. ಹೀಗೆ ಸಾಗುವ ಜೀವನ ಪಯಣದಲ್ಲಿ ದೊಡ್ಡ ಅಪರಾಧಕ್ಕೆ ಸಿಲುಕಿಕೊಳ್ಳುತ್ತಾನೆ. ಆ ಅಪರಾಧವನ್ನು ಪ್ರೇಕ್ಷಕರು ತೆರೆ ಮೇಲೆ ನೋಡಬೇಕಂತೆ.[ಗೀತ ರಚನೆಕಾರರು ಆದ್ರು ನವರಸ ನಾಯಕ ]

ನಗುವವರಿಗೆ ಮಾತ್ರ

ನಗುವವರಿಗೆ ಮಾತ್ರ

ಜಗ್ಗೇಶ್ ಅವರು 'ಎದ್ದೇಳು ಮಂಜುನಾಥ' ನಂತರ ಈಗ ಮೇಲುಕೋಟೆ ಮಂಜನಾಗಿ ತಮ್ಮದೇ ನಿರ್ದೇಶನದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಸಖತ್ ಕಾಮಿಡಿ ಜೊತೆಗೆ ಈ ಚಿತ್ರದಲ್ಲಿ ಲವ್ ಸ್ಟೋರಿ ಜೊತೆಗೆ ಸೆಂಟಿಮೆಂಟ್ ಸಹ ಇದೆಯಂತೆ. ಆದರೂ ಸಹ ಜಗ್ಗೇಶ್ ಅವರು 'ನಗುವವರಿಗೆ ಮಾತ್ರ' ಎಂಬ ಎಕ್ಸ್ ಟ್ರಾ ಟೈಟಲ್ ಕೊಟ್ಟಿದ್ದಾರೆ.

'ಮೇಲುಕೋಟೆ ಮಂಜ' ನ ಸಂದೇಶ

'ಮೇಲುಕೋಟೆ ಮಂಜ' ನ ಸಂದೇಶ

ಜಗ್ಗೇಶ್ ಅವರು ಎಲ್ಲಾ ಚಿತ್ರಗಳಲ್ಲಿ ಕಾಮಿಡಿ ಕಿಂಗ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಅದರೆ ಅವರ ಈ ಚಿತ್ರದಲ್ಲಿ ಹಾಸ್ಯದ ಹೊನಲಿನ ಜೊತೆಗೆ ಮೋಸ ಹೋಗುವವರಿಗೆ ಒಂದು ಸಂದೇಶ ಹೇಳಿದ್ದಾರಂತೆ. ಅದೇನು ಎಂಬುದನ್ನು ಚಿತ್ರನೋಡಿ ಎಂದಿದ್ದಾರೆ.

ಡಿಗ್ಲಾಮರಸ್ ಲುಕ್ ನಲ್ಲಿ ಐಂದ್ರಿತಾ ರೇ

ಡಿಗ್ಲಾಮರಸ್ ಲುಕ್ ನಲ್ಲಿ ಐಂದ್ರಿತಾ ರೇ

ತಮ್ಮ ಗ್ಲಾಮರ್ ಲುಕ್‌ ನಿಂದ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿರುವ ಐಂದ್ರಿತಾ ರೇ, 'ಮೇಲುಕೋಟೆ ಮಂಜ' ಸಿನಿಮಾದಲ್ಲಿ ಡಿಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಜಗ್ಗೇಶ್ ನಿರ್ದೇಶನದಲ್ಲಿ ಸಿನಿಮಾ

ಜಗ್ಗೇಶ್ ನಿರ್ದೇಶನದಲ್ಲಿ ಸಿನಿಮಾ

ಸಹಜತೆಗೆ ಹತ್ತಿರವಾದ ಕಥೆಯೊಂದನ್ನು ಸಿದ್ದಪಡಿಸಿ ಜಗ್ಗೇಶ್ ಅವರೇ 'ಮೇಲುಕೋಟೆ ಮಂಜ' ಚಿತ್ರಕ್ಕೆ ಆಕ್ಷನ್ ಕೇಳಿದ್ದು, ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇವಿಷ್ಟು ಚಿತ್ರದ ಹೈಲೈಟ್ ಗಳಾಗಿದ್ದು, ಫೆಬ್ರವರಿ 10 ಕ್ಕೆ ತೆರೆ ಮೇಲೆ ಬರುತ್ತಿದೆ.

English summary
February 10th Releasing Jaggesh Starrer 'Melukote Manja' Movie Specialities.
Please Wait while comments are loading...

Kannada Photos

Go to : More Photos