»   » ಫೆಬ್ರವರಿಯಲ್ಲಿ 'ಮೇಲುಕೋಟೆ ಮಂಜ' ಬರ್ತಿದ್ದಾರೆ! ನಗೋದಕ್ಕೆ ರೆಡಿಯಾಗಿ

ಫೆಬ್ರವರಿಯಲ್ಲಿ 'ಮೇಲುಕೋಟೆ ಮಂಜ' ಬರ್ತಿದ್ದಾರೆ! ನಗೋದಕ್ಕೆ ರೆಡಿಯಾಗಿ

Written by:
Subscribe to Filmibeat Kannada

ರುಚಿ ರುಚಿಯಾದ 'ನೀರ್ ದೋಸೆ' ತಿನ್ನಿಸಿದ್ದ ನವರಸ ನಾಯಕ ಜಗ್ಗೇಶ್, ನಂತರ ಯಾವುದೇ ಹೊಸ ಸಿನಿಮಾ ಶುರು ಮಾಡದೇ ಇದ್ದಿದ್ದು ಅವರ ಅಭಿಮಾನಿ ಬಳಗದಲ್ಲಿ ಕುತೂಹಲ ಹುಟ್ಟುಹಾಕಿತ್ತು. ಆದ್ರೆ, 2 ವರ್ಷಗಳ ಹಿಂದೆ ಸೆಟ್ಟೇರಿ ಸೈಲಾಂಟ್ ಆಗಿದ್ದ 'ಮೇಲುಕೋಟೆ ಮಂಜ' ಚಿತ್ರವನ್ನ ತೆರೆಗೆ ತರುತ್ತಿದ್ದಾರೆ ಎಂದಾಗ ಮತ್ತೆ ಖುಷಿ ಹೆಚ್ಚಾಗಿತ್ತು.

ಹೌದು, 'ಮನಿ ಪ್ರಾಬ್ಲಂ'ನಿಂದ ಸ್ಥಗಿತಗೊಂಡಿದ್ದ 'ಮೇಲುಕೋಟೆ ಮಂಜ' ಇದೀಗ ರಿಲೀಸ್ ಗೆ ರೆಡಿಯಾಗಿದ್ದಾನೆ.[ಜಗ್ಗೇಶ್ ಸಾರಥ್ಯದ 'ಮೇಲುಕೋಟೆ ಮಂಜ' ಬರ್ತಾವ್ನೆ !]

'ಎದ್ದೇಳು ಮಂಜುನಾಥ', 'ಮಂಜುನಾಥ ಬಿ.ಎ.ಎಲ್.ಎಲ್.ಬಿ' ಚಿತ್ರಗಳ ನಂತರ ನವರಸ ನಾಯಕ ಜಗ್ಗೇಶ್ 'ಮೇಲುಕೋಟೆ ಮಂಜ'ನ ಅವತಾರವೆತ್ತಿದ್ದು, ಫೆಬ್ರವರಿಯಲ್ಲಿ 'ಮಂಜ'ನ ಮಸ್ತ್ ಮನರಂಜನೆ ನೋಡಬಹುದಾಗಿದೆ.

ಜಗ್ಗೇಶ್ ನಿರ್ದೇಶನದ ಸಿನಿಮಾ!

ಜಗ್ಗೇಶ್ ನಿರ್ದೇಶನದ ಸಿನಿಮಾ!

'ಮೇಲುಕೋಟೆ ಮಂಜ' ಚಿತ್ರದಲ್ಲಿ ಜಗ್ಗೇಶ್ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಡೈರೆಕ್ಷನ್ ಕ್ಯಾಪ್ ಕೂಡ ತೊಟ್ಟಿದ್ದಾರೆ. ಈ ಮೊದಲು ಜಗ್ಗೇಶ್ ಅವರ ಮಗ ಗುರುರಾಜ್ ಅಭಿನಯಿಸಿದ್ದ 'ಗುರು' ಚಿತ್ರವನ್ನ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದರು. ಈಗ 'ಗುರು' ಚಿತ್ರದ ನಂತರ ಮತ್ತೆ ಆಕ್ಷನ್ ಕಟ್ ಹೇಳಿದ್ದು, ಇದು ಜಗ್ಗೇಶ್ ನಿರ್ದೇಶನದ ಎರಡನೇ ಸಿನಿಮಾವಾಗಿದೆ.

ನವರಸ ನಾಯಕನ ಕೈಚಳಕ!

ನವರಸ ನಾಯಕನ ಕೈಚಳಕ!

'ಮೇಲುಕೋಟೆ ಮಂಜ' ಜಗ್ಗೇಶ್ ವೃತ್ತಿ ಜೀವನದಲ್ಲಿ ತುಂಬಾ ವಿಶೇಷವಾದ ಸಿನಿಮಾ. ಈ ಚಿತ್ರದಲ್ಲಿ ಜಗ್ಗೇಶ್ ನಟ ಹಾಗೂ ನಿರ್ದೇಶನ ಮಾತ್ರವಲ್ಲ, ಕಥೆ-ಚಿತ್ರಕಥೆ-ಸಂಭಾಷಣೆ ಹೀಗೆ ಎಲ್ಲವೂ ಜಗ್ಗೇಶ್ ಅವರ ಕೈ ಚಳಕದಲ್ಲಿ ಮೂಡಿದೆ.

ಐಂದ್ರಿತಾ ರೈ ನಾಯಕಿ!

ಐಂದ್ರಿತಾ ರೈ ನಾಯಕಿ!

ಇದೇ ಮೊದಲ ಬಾರಿಗೆ ನಟಿ ಐಂದ್ರಿತಾ ರೈ ಜಗ್ಗೇಶ್ ಅವರ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಔಟ್ ಅಂಡ್ ಔಟ್ ಕಾಮಿಡಿ ಸಬ್ಜೆಕ್ಟ್ ಹೊಂದಿರುವ ಈ ಚಿತ್ರದಲ್ಲಿ ಐಂದ್ರಿತಾ ರೈ ಅವರ ಗ್ಲಾಮರ್ ಇದೆ..

'ಪವರ್ ಸ್ಟಾರ್' ಸಾಂಗ್!

'ಪವರ್ ಸ್ಟಾರ್' ಸಾಂಗ್!

ಶ್ರೀಕೊಂಡದ ಬೀರೇಶ್ವರ ಫಿಲಂಸ್‌ ಲಾಂಛನದಲ್ಲಿ ಆರ್‌.ಕೃಷ್ಣ ಅವರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರು ಸಂಗೀತ ನೀಡಿದ್ದಾರೆ. ವಿಶೇಷ ಅಂದ್ರೆ 'ಮೇಲುಕೋಟೆ ಮಂಜ' ಚಿತ್ರದ ಒಂದು ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದ್ವನಿಯಾಗಿದ್ದಾರೆ.

ಉಳಿದವರು.....!

ಉಳಿದವರು.....!

ಜಗ್ಗೇಶ್, ಐಂದ್ರಿತಾ ರೈ ಜೊತೆ ರಂಗಾಯಣ ರಘು, ಸಾಧುಕೋಕಿಲ, ಕುರಿ ಪ್ರತಾಪ್ ಮುಂತಾದರು ಇದ್ದಾರೆ. ಇನ್ನೂ ದಾಸರಿ ಸೀನು ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನ, ತ್ರಿಭುವನ್, ಮಾಲೂರು ಶ್ರೀನಿವಾಸ್‌ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಫೆಬ್ರವರಿ 10ಕ್ಕೆ 'ಮಂಜ'ನ ಆಗಮನ!

ಫೆಬ್ರವರಿ 10ಕ್ಕೆ 'ಮಂಜ'ನ ಆಗಮನ!

'ಮೇಲುಕೋಟೆ ಮಂಜ' ಚಿತ್ರ ಸಂಪೂರ್ಣ ಚಿತ್ರೀಕರಣ ಮುಗಿಸಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಸದ್ಯ, ಟ್ರೈಲರ್ ಮೂಲಕ ಸೌಂಡ್ ಮಾಡ್ತಿರೋ ಮೇಲುಕೋಟೆ ಮಂಜ ಫೆಬ್ರವರಿ 10 ರಂದು ಬೆಳ್ಳಿತೆರೆಗೆ ಬರಲಿದ್ದಾನೆ.

English summary
Jaggesh and Aindrita Ray starrer 'Melukote Manja' which is in the making for the last two years is finally set to release on the 10th of February. 'Melukote Manja' is being directed by Jaggesh and this is his second film as director.
Please Wait while comments are loading...

Kannada Photos

Go to : More Photos