»   » 'ಕಂಬಳ ನಮ್ಮ ಪದ್ಧತಿ, ನಿಲ್ಲಿಸಲು ಯಾರಿಗೂ ಹಕ್ಕಿಲ್ಲ..': ಜಗ್ಗೇಶ್

'ಕಂಬಳ ನಮ್ಮ ಪದ್ಧತಿ, ನಿಲ್ಲಿಸಲು ಯಾರಿಗೂ ಹಕ್ಕಿಲ್ಲ..': ಜಗ್ಗೇಶ್

Posted by:
Subscribe to Filmibeat Kannada

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ 'ಜಲ್ಲಿಕಟ್ಟು' ಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ನಂತರ, ದಕ್ಷಿಣ ಕನ್ನಡದ ಗ್ರಾಮೀಣ ಕ್ರೀಡೆ 'ಕಂಬಳ' ಕ್ಕೂ ನಿಷೇಧದ ಬೀತಿ ಕಾಡುತ್ತಿದೆ. ಆದ್ದರಿಂದ ಈಗಾಗಲೇ 'ಕಂಬಳ' ಕ್ರೀಡೆ ಪರವಾಗಿ ಕೂಗು ಕೇಳಿಬರುತ್ತಿದೆ.['ಕಂಬಳ ನಮ್ಮ ಪದ್ಧತಿ, ನಿಲ್ಲಿಸಲು ಯಾರಿಗೂ ಹಕ್ಕಿಲ್ಲ..': ಜಗ್ಗೇಶ್]

ಸ್ಯಾಂಡಲ್‌ ವುಡ್ ಸೆಲೆಬ್ರಿಟಿಗಳು ನಮ್ಮ ಸಹಕಾರಕ್ಕೆ ಬರುವುದಿಲ್ಲ ಎಂದು ಕರ್ನಾಟಕ ಜನತೆ ಹಲವು ಪ್ರತಿಭಟನೆಗಳಲ್ಲಿ ಹೇಳುತ್ತಿದ್ದರು. ಆದ್ರೆ ಈಗ 'ಕಂಬಳ' ಕ್ರೀಡೆ ಪರವಾಗಿ ಅಂತಹ ದನಿ ಕೇಳುವ ಮೊದಲೇ, ಜಗ್ಗೇಶ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲದೇ 'ಕಂಬಳ' ಕ್ರೀಡೆಗೆ ಸಪೋರ್ಟ್ ಮಾಡುವ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಒಗ್ಗಟಿನ ಕೊರತೆ ಇದೆ ಎಂದು ಹೇಳಿದ್ದಾರೆ. ಅವರು 'ಕಂಬಳ' ಕ್ರೀಡೆ ಬಗ್ಗೆ ಹೇಳಿದ್ದಾದರೂ ಏನು? ಇಲ್ಲಿದೆ ಮಾಹಿತಿ..

ಹಿಂದುಗಳ ಆಚರಣೆಗೆ ಇವೆಲ್ಲವೂ ಇವೆ..

ಹಿಂದುಗಳ ಆಚರಣೆಗೆ ಇವೆಲ್ಲವೂ ಇವೆ..

ಕಂಬಳ ಕ್ರೀಡೆ ಪರವಾಗಿ ಸ್ಯಾಂಡಲ್ ವುಡ್ ನಿಂದ ಮೊದಲು ದನಿ ಎತ್ತಿರುವ ಜಗ್ಗೇಶ್ ಅವರು, "ಈ ದೇಶದಲ್ಲಿ ' ತಡೆ, ಅನುಮಾನ, ಚರ್ಚೆ, ವಿರೋಧ' ಏನೇ ಇದ್ದರು ಅದು ನಮ್ಮ ಹಿಂದುಗಳ ಆಚರಣೆಗೆ ಮಾತ್ರ! ಮುಂದೆ ಇಂಥ ನಿರ್ಣಯದಿಂದ ಹಿಂದುಗಳು ಅನಾಥರಾಗುವುದು ನಿಶ್ಚಿತ! ದೌರ್ಭಾಗ್ಯ!", ಎಂದು ಟ್ವೀಟ್ ಮಾಡಿದ್ದಾರೆ.

ಕಂಬಳ ನಮ್ಮ ಸನಾತನ ಕ್ರೀಡೆ

ಕಂಬಳ ನಮ್ಮ ಸನಾತನ ಕ್ರೀಡೆ

"ಯಾಕೆ? ತಿಲಾಂಜಲಿ! ಜಲ್ಲಿಕಟ್ಟುವಿನಂತೆ ಕಂಬಳವು ನಮ್ಮ ದಕ್ಷಿಣ ಕರ್ನಾಟಕದ ಸನಾತನ ಕ್ರೀಡೆ. ತಮಿಳರಂತೆ ಒಗ್ಗಟ್ಟಿನ ಮಂತ್ರ ಜಪಿಸಲು ಕೈಜೋಡಿಸಿ ಇಡಿ ವಿಶ್ವದ ಕನ್ನಡಿಗರು ಒಂದಾಗಿ' ಎಂದು ಸಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಅಪ್‌ಲೋಡ್ ಮಾಡಿದ್ದಾರೆ.

ಕನ್ನಡಿಗರಿಗೆ ಒಗ್ಗಟಿನ ಕೊರತೆ

ಕನ್ನಡಿಗರಿಗೆ ಒಗ್ಗಟಿನ ಕೊರತೆ

"#ಕಂಬಳ ಕನ್ನಡಿಗರಿಗೆ ಒಗ್ಗಟ್ಟಿನ ಕೊರತೆ ಇದೆ! ಈಗಲಾದರು ಒಂದಾಗಿ! ಕನ್ನಡಿಗರು ಯಾವುದರಲ್ಲು ಕಮ್ಮಿಯಿಲ್ಲಾ! ಶುರುವಾಗಲಿ ಒಗ್ಗಟ್ಟಿನ ಮಂತ್ರ! ಒಂದಾಗಿ ಹೋರಾಡಲಿ ನ್ಯಾಯಕ್ಕೆ!" ಎಂದು ಕಂಬಳ ಪರ ಕರೆ ಕೊಟ್ಟಿದ್ದಾರೆ.

ಸ್ವಾಭಿಮಾನ ಇರಲಿ

ಸ್ವಾಭಿಮಾನ ಇರಲಿ

"#ಕನ್ನಡಿಗರು ಉತ್ತರ ದಕ್ಷಿಣ ಹಳೆಮೈಸೂರು ಅನ್ನದೆ ಅಕಂಡಕರ್ನಾಟಕ ಅಂತ ಒಗ್ಗಟ್ಟಿನಿಂದ ಒಂದಾಗಿ ಕೂಗಿ! ವಿಶ್ವಕ್ಕೆ ಕೇಳುವುದು ಕನ್ನಡಿಗನ ಕೂಗು! ಇದಕ್ಕೆ ಬೇಕಿರುವುದು ಸ್ವಾಭಿಮಾನ" ಎಂದು ಹೇಳುವುದರ ಮೂಲಕ ತಮ್ಮ ಸ್ವಾಭಿಮಾನ ಮೆರೆದಿದ್ದಾರೆ ಜಗ್ಗೇಶ್.

ಕಂಬಳ ಬೇಕು ಅಂತ ನಾನು ಕೂಗುತ್ತೇನೆ..

ಕಂಬಳ ಬೇಕು ಅಂತ ನಾನು ಕೂಗುತ್ತೇನೆ..

"ಯಾರು ಒಪ್ಪುತ್ತಾರೊ ಬಿಡುತ್ತಾರೊ ನಾನು ದಕ್ಷಿಣ ಕನ್ನಡದ ಸನಾತನ ಗ್ರಾಮೀಣ ಕ್ರೀಡೆ #ಕಂಬಳ ಬೇಕು ಅಂತ ಕೂಗಾಕುತ್ತೇನೆ. ನಮ್ಮ ಹಕ್ಕು. ನಮ್ಮ ಪದ್ಧತಿ. ನಿಲ್ಲಿಸಲು ಯಾರಿಗು ಹಕ್ಕಿಲ್ಲಾ". ಎಂದು ಜಗ್ಗೇಶ್ ಸಾಂಪ್ರದಾಯಿಕ ಹಕ್ಕುಗಳ ಬಗ್ಗೆ ದನಿ ಎತ್ತಿ ಟ್ವೀಟ್ ಮಾಡಿದ್ದಾರೆ.

English summary
Navarasa Nayak Jaggesh Says traditional sport is our Right. In the wake of suport for traditional sport Kambala. Here is What he said related to Kambala sport.
Please Wait while comments are loading...

Kannada Photos

Go to : More Photos