twitter
    For Quick Alerts
    ALLOW NOTIFICATIONS  
    For Daily Alerts

    ತುಳು ಚಿತ್ರಕ್ಕೆ ಹೊಸ 'ರಂಗ್' ತಂದ ಜಾನಿ ಲೀವರ್

    By Rajendra
    |

    ಬಾಲಿವುಡ್ ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ತೊಡಗಿಕೊಂಡು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹಾಸ್ಯ ನಟ ಜಾನಿ ಲೀವರ್ ಇದೇ ಮೊದಲ ಬಾರಿಗೆ ತುಳು ಚಿತ್ರಕ್ಕೆ ರಂಗು ತುಂಬಿದ್ದಾರೆ. ಈ ಯೂತ್ ಸೆಂಟ್ರಿಕ್ ಚಿತ್ರದ ಹೆಸರೇ 'ರಂಗ್'.

    ಮಂಗಳೂರಿನಲ್ಲಿ ನನಗೆ ಬಹಳಷ್ಟು ಮಂದಿ ಗೆಳೆಯರಿದ್ದಾರೆ. ನೆರೆಹೊರೆಯವ ಮೂಲಕ ನಾನು ಆ ಭಾಷೆ ಕಲಿತೆ. ಮರಾಠಿ ಮತ್ತು ಗುಜರಾತಿ ಬಳಿಕ ನಾನು ಯಾವುದೇ ಪ್ರಾದೇಶಿಕ ಭಾಷಾ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಆಂಧ್ರಪ್ರದೇಶ ಮೂಲದ ನನಗೆ ಇದುವರೆಗೂ ತೆಲುಗಿನಲ್ಲೂ ಚಾನ್ಸ್ ಸಿಕ್ಕಿಲ್ಲ ಎನ್ನುತ್ತಾರೆ ಜಾನಿ. [ಬೆಂಗಳೂರಿನಲ್ಲಿ 'ಜಾನಿ ಲೀವರ್ ಲೈವ್' ಕಾಮಿಡಿ ಶೋ]

    ತುಳು ಚಿತ್ರದಲ್ಲಿ ಅಭಿನಯಿಸಿರುವ ಬಗ್ಗೆ ಜಾನಿ ಅವರಿಗೆ ಸಿಕ್ಕಾಪಟ್ಟೆ ಹೆಮ್ಮೆ ಇದೆ. ಕೆ ದೇವದಾಸ್ ಕುಮಾರ್ ಅವರು ಈ ಚಿತ್ರವನ್ನು ಸುಮಾರು ರು. 2 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ತುಳು ಚಿತ್ರ ಎಂದರೆ ಕಡಿಮೆ ಬಜೆಟ್ ಎಂದೇ ಭಾವಿಸುತ್ತಾರೆ. ಆದರೆ ಚಿತ್ರದ ಮೇಕಿಂಗ್ ನೋಡಿದರೆ ಯಾವುದೇ ಬಿಗ್ ಬಜೆಟ್ ಚಿತ್ರಕ್ಕಿಂತಲೂ ಕಡಿಮೆ ಇಲ್ಲದಂತೆ ತೆರೆಗೆ ತರಲಾಗಿದೆ.

    ಆಗಸ್ಟ್ 8ರ ಶುಕ್ರವಾರ ಚಿತ್ರ ಬಿಡುಗಡೆಯಾಗಿದೆ

    ಆಗಸ್ಟ್ 8ರ ಶುಕ್ರವಾರ ಚಿತ್ರ ಬಿಡುಗಡೆಯಾಗಿದೆ

    ಕಟೀಲೇಶ್ವರಿ ಕಂಬೈನ್ಸ್ ನಿರ್ಮಾಣದ ಈ ತುಳು ಸಿನಿಮಾ ಆಗಸ್ಟ್ 8ರ ಶುಕ್ರವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುಖ್ ಪಾಲ್ ಪೊಳಲಿ ನಗರದ ಸಿಟಿಸೆಂಟರ್ ನಲ್ಲಿರುವ ಸಿನಿಪೋಲಿಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

    ತುಳು ಚಿತ್ರವೊಂದರ ಹೊಸ ಸಾಧನೆ

    ತುಳು ಚಿತ್ರವೊಂದರ ಹೊಸ ಸಾಧನೆ

    ಮಂಗಳೂರಿನ ಸುಚಿತ್ರಾ ಸೇರಿದಂತೆ ಬಿಗ್ ಸಿನಿಮಾ,ಸಿನಿಪೊಲಿಸ್ ಮತ್ತು ಪಿವಿಆರ್ ಮಲ್ಟಿಪ್ಲೆಕ್ಸ್ ಥೀಯೇಟರ್, ಉಡುಪಿಯ ಕಲ್ಪನಾ, ಮಣಿಪಾಲದ ಐನಾಕ್ಸ್ ,ಬಿ.ಸಿ.ರೋಡ್ ನಕ್ಷತ್ರ, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್, ಕಾರ್ಕಳದ ರಾಧಿಕಾ ಹಾಗೂ ಪ್ಲಾನೆಟ್, ಮೂಡಬಿದಿರೆಯ ಅಮರಶ್ರೀಯಲ್ಲಿ ತೆರೆಕಾಣಲಿದ್ದು. ಇದೇ ಪ್ರಥಮ ಬಾರಿಗೆ ತುಳು ಚಿತ್ರವೊಂದು 12 ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡಿದೆ.

    ನಾಯಕನಟನಾಗಿ ಅರ್ಜುನ್ ಕಾಪಿಕಾಡ್

    ನಾಯಕನಟನಾಗಿ ಅರ್ಜುನ್ ಕಾಪಿಕಾಡ್

    ಸುಹಾನ್ ಪ್ರಸಾದ್,ವಿಸ್ಮಯ ವಿನಾಯಕ್ ನಿರ್ದೇಶನದ ಈ ತುಳು ಸಿನಿಮಾದಲ್ಲಿ ಬಾಲಿವುಡ್ ಕಾಮಿಡಿಕಿಂಗ್ ಜಾನಿ ಲಿವರ್ ಪ್ರಥಮ ಬಾರಿಗೆ ಹಿಂದಿಯೇತರ ಸಿನಿಮಾ ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನಟ ಅರ್ಜುನ್ ಕಾಪಿಕಾಡ್ ಅವರಿಗೆ ಇದು ಎರಡನೇ ಸಿನಿಮವಾದರೂ 'ರಂಗ್'ನಲ್ಲಿ ಅವರು ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.

    ಹಾಸ್ಯದ ಜೊತೆಗೆ ರೋಚಕ ಸನ್ನಿವೇಶಗಳ ಚಿತ್ರ

    ಹಾಸ್ಯದ ಜೊತೆಗೆ ರೋಚಕ ಸನ್ನಿವೇಶಗಳ ಚಿತ್ರ

    ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್,ಭೋಜರಾಜ್ ವಾಮಂಜೂರ್, ಸತೀಶ್ ಬಂದಲೆ ಅವರ ಹಾಸ್ಯಭರಿತ ಸಂಭಾಷಣೆ ಮತ್ತು ನಟನೆ ರಂಗ್ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ. ತುಳುನಾಡಿನ ಒಂದು ವಿಶಿಷ್ಠ ಕತೆಯನ್ನು ಒಳಗೊಂಡಿರುವ ರಂಗ್ ಹಾಸ್ಯದ ಜೊತೆಗೆ ರೋಚಕ ಸನ್ನಿವೇಶಗಳನ್ನೂ ಒಳಗೊಂಡಿದೆ.

    ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ

    ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ

    ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದ 5 ಹಾಡುಗಳೂ ಈಗ ಜನಜನಿತಗೊಂಡಿದೆ. ಭಾಸ್ಕರ ನೆಲ್ಲಿತೀರ್ಥ ಮತ್ತು ಶಶಿರಾಜ್ ರಾವ್ ಕಾವೂರ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಪ್ರೇಮನಾಥೆ ಪಾಸ್ ಆತೆ....ಹಾಡು ಈಗ ಎಲ್ಲಡೆ ಖ್ಯಾತಿ ಪಡೆದಿದೆ.

    ಪಾತ್ರವರ್ಗದಲ್ಲೂ ಹೊಸ ರಂಗ್

    ಪಾತ್ರವರ್ಗದಲ್ಲೂ ಹೊಸ ರಂಗ್

    'ವೀರಮದಕರಿ' ಖ್ಯಾತಿಯ ಗೋಪಿನಾಥ್ ಭಟ್ ಅವರ ಖಳನಾಯಕನ ಪಾತ್ರ ಸಂತೋಷ್ ಶೆಟ್ಟಿ, ಚಂದ್ರಹಾಸ್ ಉಳ್ಳಾಲ್, ವಿಸ್ಮಯವಿನಾಯಕ್, ದಿಕ್ಷಿತಾ ಆಚಾರ್ಯ ಮುಂತಾದವರ ಪಾತ್ರಗಳಿಂದಲೂ ರಂಗ್ ಗಮನಸೆಳೆದಿದೆ.

    ಇದೊಂದು ಯೂತ್ ಫುಲ್ ಸಿನಿಮಾ

    ಇದೊಂದು ಯೂತ್ ಫುಲ್ ಸಿನಿಮಾ

    ಕಾಲೇಜ್ ಕ್ಯಾಂಪಸ್ ನ ಹುಡುಗಾಟಿಕೆಯ ರಂಗ್ ನಲ್ಲಿ ಇತ್ತೀಚೆಗೆ ಕಾಲೇಜು ಮುಗಿಸಿದ ಯುವ ಉದಯೋನ್ಮುಖ ನಟರುಗಳೂ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಪ್ರಮೀಳಾ ದೇವ್ ಅರ್ಪಿಸುವ ಈ ಚಿತ್ರದ ನಿರ್ಮಾಪಕರು ದೇವದಾಸ್ ಕುಮಾರ್ ಪಾಂಡೇಶ್ವರ್ ಮತ್ತು ಕಾರ್ಯಕಾರಿ ನಿರ್ಮಾಪಕರು ಸುಖ್ ಪಾಲ್ ಪೊಳಲಿ.

    ಪತ್ರಿಕಾಗೋಷ್ಠಿಯಲ್ಲಿ ಯಾರೆಲ್ಲಾ ಇದ್ದರು

    ಪತ್ರಿಕಾಗೋಷ್ಠಿಯಲ್ಲಿ ಯಾರೆಲ್ಲಾ ಇದ್ದರು

    ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಸುಹಾನ್ ಪ್ರಸಾದ್,ವಿಸ್ಮಯವಿನಾಯಕ್, ನಿರ್ಮಾಪಕ ದೇವ್ ದಾಸ್ ಕುಮಾರ್ ಪಾಂಡೇಶ್ವರ, ಪ್ರಮೀಳಾ ದೇವ್, ನಟರಾದ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಮೈಮ್ ರಾಂದಾಸ್ ಉಪಸ್ಥಿತರಿದ್ದರು.

    English summary
    Bollywood comdey actor Johny Levere after working in Hindi films for more than three decades and over 400 films he did a Tulu film named 'Rang'. Suhan Prasad and Vismaya Vinayak directed movie also focus on the culture of Mangalore.
    Friday, August 8, 2014, 15:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X