twitter
    For Quick Alerts
    ALLOW NOTIFICATIONS  
    For Daily Alerts

    ಜೂ.ನರಸಿಂಹರಾಜು ಕೊಟ್ಟ ಹಾಸ್ಯ ರಸಾಯನ

    By Rajendra
    |
    <ul id="pagination-digg"><li class="next"><a href="/news/my-favourite-film-beedi-basavanna-jr-narasimharaju-076053.html">Next »</a></li></ul>

    ಕಾಲಿಗೆ ಹಳೆ ಚಪ್ಪಲಿ. ದೊಗಲು ದೊಗಲಾದ ಪಟ್ಟೆಪಟ್ಟೆ ಅಂಗಿ. ಅದರ ಮೇಲೆ ಮಾಸಲು ಬಣ್ಣದ ಕೋಟು. ಇವರನ್ನು ಎಲ್ಲೋ ನೋಡಿದಂತಿದೆಯಲ್ಲಾ. ಹಾಸ್ಯನಟ ಡಿಂಗ್ರಿ ನಾಗರಾಜ್ ಇರಬಹುದೇ? ಎಂಬ ಅನುಮಾನವೂ ಬರುತ್ತದೆ. ಕಣ್ಣ ಮುಂದೆ ಹಳೆ ಕನ್ನಡ ಚಿತ್ರಗಳ ಮಸುಕು ಮಸುಕು ಚಿತ್ರಗಳೂ ಹಾದುಹೋಗುತ್ತವೆ.

    ಒಂದು ಸಣ್ಣ ಬ್ರೇಕ್ ಕೊಟ್ಟು ಮುಂದೆ ಹೋಗೋಣ. ಇಂದು (ಜುಲೈ 24) ಹಾಸ್ಯ ಚಕ್ರವರ್ತಿ ಟಿ.ಆರ್.ನರಸಿಂಹರಾಜು ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಜೂ.ನರಸಿಂಹರಾಜು ಅವರನ್ನು ನಮ್ಮ ಕಚೇರಿಗೆ ಆಹ್ವಾನಿಸಲಾಗಿತ್ತು. ಐವತ್ತೈದರ ವಯಸ್ಸಿನಲ್ಲೂ ಅವರು ಹೊಸ ಹುರುಪಿನಿಂದ ಬಂದು ಗಂಟೆಗಟ್ಟಲೆ ಮಾತನಾಡಿದರು.

    ಇಂದಿನ ಚಿತ್ರರಂಗ, ಹಾಸ್ಯ ಕಲಾವಿದರ ಬದುಕು ಬವಣೆಗಳ ಬಗ್ಗೆ ಹೇಳುತ್ತಾ ಸಾಗಿದರು. ಜೂನಿಯರ್ ನರಸಿಂಹರಾಜು ಎಂದೇ ಗುರುತಿಸಿಕೊಂಡಿರುವ ಗುರುಸ್ವಾಮಿ ತಮ್ಮ ಹಳೆಯ ನೆನಪುಗಳನ್ನು ಹರವಿಕೊಂಡರು. ಈ ವಯಸ್ಸಿನಲ್ಲೂ ಅವರ ಮುಖದಲ್ಲಿ ತಿಳಿಹಾಸ್ಯ ಲಾಸ್ಯವಾಡುತ್ತಿತ್ತು. ಓವರ್ ಟೂ ಜೂ. ನರಸಿಂಹರಾಜು....

    Junior Narasimha Raju Interview

    ನಮ್ಮ ಊರು ಮೈಸೂರು. ಹೆಸರು ಗುರುಸ್ವಾಮಿ. ಜನ ನನ್ನನ್ನು ಜೂನಿಯರ್ ನರಸಿಂಹರಾಜು ಎಂದೇ ಗುರುತಿಸುತ್ತಾರೆ. ಮೈಸೂರು ಮರಿಮಲ್ಲಪ್ಪ ಶಾಲೆಯಲ್ಲಿ ಓದಬೇಕಾದರೆ ಸುಬ್ಬಣ್ಣ ಅಂತ ಒಬ್ಬರಿದ್ರು. ಯೂನಿಯನ್ ಡೇಗೆ ನಾಟಕ ಮಾಡಬೇಕಾಗಿತ್ತು. ಆಗ ನನಗೆ ಒಂದು ಪಾರ್ಟ್ ಕೊಟ್ರು. ಎಲ್ಲರೂ ನರಸಿಂಹರಾಜು ತರಹ ಇದ್ದೀಯಾ ಎಂದು ಚುಡಾಯಿಸುತ್ತಿದ್ದರು.

    ಅಲ್ಲಿಯವರೆಗೂ ಈ ನರಸಿಂಹರಾಜು ಯಾರು ಎಂಬುದೇ ಗೊತ್ತಿರಲಿಲ್ಲ. ಆಗಲೇ ಸಿನಿಮಾ ನೋಡಕ್ಕೆ ಹೋಗಿದ್ದು. ನಮ್ಮ ಮನೆ ಪಕ್ಕ ಪದ್ಮ ಚಿತ್ರಮಂದಿರ, ಇವತ್ತಿಗೂ ಇದೆ. ಅಲ್ಲೇ ಕನ್ನಡ ಸಿನಿಮಾಗಳು ಬರುತ್ತಿದ್ದವು ಅದು ನೋಡಿದಾಗಲೇ ಗೊತ್ತಾಗಿದ್ದು. ಓ ಇವರೇ ನರಸಿಂಹರಾಜು ಎಂದು.

    ಅಲ್ಲಿಂದ ನಾನೂ ನರಸಿಂಹರಾಜು ಅವರ ಅಭಿಮಾನಿ ಆದೆ. ಓದಿನ ಜೊತೆಗೆ ಸಿನಿಮಾ ರಂಗದ ನಂಟು ಇತ್ತು. ಬಿಎ ಡಿಎಫ್ ಟಿ ಮಾಡಿದ್ದೇನೆ. ನಮಗೆ ನಾಟಕದ ಸಹವಾಸ ಕಮ್ಮಿ. ಇದಾದ ಮೇಲೆ ಸಿನಿಮಾಗೆ ಅಡಿಯಿಟ್ಟೆವು. ಸಿನಿಮಾ ಕೋರ್ಸ್ ಮಾಡಿ ಬಂದಕಾರಣ ಕ್ಯಾಮೆರಾ ಎದುರಿಸುವುದೇನು ಕಷ್ಟವಾಗಲಿಲ್ಲ.

    ಆ ಸಂದರ್ಭದಲ್ಲಿ ನರಸಿಂಹರಾಜು ಅವರನ್ನು ಭೇಟಿ ಮಾಡಬೇಕು ಅನ್ನಿಸಿತು, ಮಾಡಿದೆವು. "ಓ ನನ್ನ ಹಾಗೇ ಇದ್ದೀಯ ಕಣಯ್ಯ. ನಮ್ಮ ಜೊತೆಗೇ ಇದ್ದು ಬಿಡು" ಎಂದು ಹೇಳಿದರು. ಆಗ ಅವರ ಜೊತೆ ಉತ್ತರ ಕರ್ನಾಟದಲ್ಲೆಲ್ಲಾ ಬಹಳಷ್ಟು ಸುತ್ತಾಟ ಮಾಡಿದ್ದೇನೆ. 1977-78ರಲ್ಲಿ ಅವರು ನಾಟಕಗಳಲ್ಲಿ ಬಹಳ ಬಿಜಿಯಾಗಿದ್ದರು.

    ಆಗ ಅವರ ಜೊತೆಗೆ ಹೋಗುತ್ತಿದ್ದಾಗ ಎಲ್ಲರೂ ನನ್ನನ್ನು ನರಸಿಂಹರಾಜು ಅವರ ಮಗ ಎಂದು ತಿಳಿದುಕೊಳ್ಳುತ್ತಿದ್ದರು. ಅವರು ನಮ್ಮ ಮಗ ಇದ್ದಂತೆ ಎಂದು ಹೇಳುತ್ತಿದ್ದರು. ಮುದ್ದೆಬಿಹಾಳದಲ್ಲಿ ಒಂದು ಘಟನೆ ನಡೆಯಿತು. ನಾವು ಬೀಳಗಿಯಲ್ಲಿ ಕ್ಯಾಂಪ್ ಹಾಕಿದ್ದೆವು. ರಾತ್ರಿ ನಾಟಕ ಮಾಡಿ ಬಂದಿದ್ದ ನರಸಿಂಹರಾಜು ಮಲಗಿದ್ದರು. ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದ ಅವರ ರಕ್ಷಣೆಗೆ ಪೊಲೀಸ್ ಪೇದೆಯನ್ನೂ ನೇಮಿಸಲಾಗಿತ್ತು.

    ಮುಂಚೆಯಿಂದಲೂ ಪೇಪರ್ ಏಜೆನ್ಸಿ ತೆಗೆದುಕೊಂಡು ಮನೆಮನೆಗೆ ಪೇಪರ್ ಹಾಕುತ್ತಿದ್ದೆ. ಹಾಗಾಗಿ ನನಗೆ ಮುಂಜಾನೆ ಬೇಗನೆ ಏಳುವ ಅಭ್ಯಾಸ ಇತ್ತು. ಅಂದು ಎದ್ದು ಮುಖ ತೊಳೆದುಕೊಳ್ಳುತ್ತಿದ್ದೆ. ಯಾರೋ ಒಬ್ಬ ಕಾಂಪೌಂಡ್ ಎಗರಿ ಬಂದು ಹೂಮಾಲಿ ಹಾಕಿ. ಸಾರ್ ನಾನು ನಿಮ್ಮ ಅಭಿಮಾನಿ ಎಂದು ಹೇಳಿ ಅಷ್ಟೇ ವೇಗವಾಗಿ ಕಾಂಪೌಂಡ್ ಜಿಗಿದು ಹೋಗಿಬಿಟ್ಟ. ಅವನು ನನ್ನನ್ನೇ ನರಸಿಂಹರಾಜು ಎಂದು ಭಾವಿಸಿದ್ದ. ಈ ತರಹ ಬಹಳ ಘಟನೆಗಳಾಗಿವೆ.

    ಮಂಜುಳಾ, ಶ್ರೀನಾಥ್, ಅಂಬರೀಶ್, ವಜ್ರಮುನಿ ತಾರಾಬಳಗದ 'ಪಕ್ಕಾ ಕಳ್ಳ' (1979) ಎಂಬ ಚಿತ್ರ. ಡೈರೆಕ್ಟರ್ ವೈಆರ್ ಸ್ವಾಮಿ. ಈ ಚಿತ್ರದಲ್ಲಿ ನರಸಿಂಹರಾಜು ಹಾಗೂ ನಾನು ಇಬ್ಬರೂ ಅಪ್ಪಮಗನಾಗಿ ಅಭಿನಯಿಸಿದ್ದೇವೆ. ಇದು ನನ್ನ ಮೊದಲ ಸಿನಿಮಾ. ಈ ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಹೊಸಪರಿಚಯ ಜೂ.ನರಸಿಂಹರಾಜು ಎಂದೇ ತೋರಿಸಿದ್ದಾರೆ.

    <ul id="pagination-digg"><li class="next"><a href="/news/my-favourite-film-beedi-basavanna-jr-narasimharaju-076053.html">Next »</a></li></ul>

    English summary
    Junior Narasimharaju aka Guru Swamy visited Oneindia for the ocassion of Narasimharaju birthday. He acted in several Kannada films including Dr Rajkumar and also with Haasya Chakravarty, Haasya Bramha & Charlie Chaplin of Kannada cinema industry Narasimharaju in a film 'Pakka Kalla' (1979). Here are the excerpts from the interview.
    Friday, July 26, 2013, 13:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X