»   » ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್..!

ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್..!

Posted by:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈಗಾಗಲೇ ಎರಡು ಬಿಗ್ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದು, ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ 'ಮುಡಿಂಜ ಇವನ ಪುಡಿ' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಕನ್ನಡ ವರ್ಷನ್ ನಲ್ಲಿಯೂ ಮೂಡಿಬರಲಿದೆ. ಇದೇ ಮೊದಲ ಬಾರಿಗೆ ಬಹುಭಾಷಾ ತಾರೆ ನಿತ್ಯಾ ಮೆನನ್ ಅವರು ಕಿಚ್ಚ ಸುದೀಪ್ ಅವರೊಂದಿಗೆ ಡ್ಯುಯೆಟ್ ಹಾಡುತ್ತಿದ್ದಾರೆ.

ಇದೀಗ ಕಿಚ್ಚ ಸುದೀಪ್ ಅವರ ಕಡೆಯಿಂದ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ನಿರ್ದೇಶಕ ಕೃಷ್ಣ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದ್ದು, ಸದ್ಯದಲ್ಲೆ ಚಿತ್ರದ ಪ್ರೋಮೋ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.[ರಿಲೀಸ್ ಗೂ ಮುನ್ನ ದಾಖಲೆ ಮೊತ್ತಕ್ಕೆ ಮಾರಾಟವಾದ ಕಿಚ್ಚನ ಚಿತ್ರ]

ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದಾರೆ. 'ಹೆಬ್ಬುಲಿ ಚಿತ್ರದ ಪ್ರೋಮೋ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಕೃಷ್ಣ ಅವರು ಒಳ್ಳೆ ದೃಶ್ಯ ಪರಿಕಲ್ಪನೆಯೊಂದಿಗೆ ತಯಾರಾಗಿದ್ದಾರೆ. ನಾನು ಮುಂದಿನ ವಾರದಿಂದಲೇ ಚಿತ್ರತಂಡದೊಂದಿಗೆ ಸೇರಿಕೊಳ್ಳುತ್ತೇನೆ. ಇಡೀ ಚಿತ್ರತಂಡ ಖುಷಿಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.

'ರನ್ನ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಕಿಚ್ಚ ಸುದೀಪ್ ಅವರು ಎರಡು ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ದ್ವಿಭಾಷಾ ಚಿತ್ರ ರಿಲೀಸ್ ಗೂ ಮುನ್ನವೇ ಇತಿಹಾಸ ಸೃಷ್ಟಿಸಿದೆ.[ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು' ಎಂದಾಗ...]

ಇನ್ನು 'ಹೆಬ್ಬುಲಿ' ಸರದಿ, ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಿರ್ದೇಶಕ ಕೃಷ್ಣ ಅವರು ಆಕ್ಷನ್-ಕಟ್ ಹೇಳಿದ್ದು, ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನು ನಿರ್ಧಾರವಾಗಿಲ್ಲ.

ಕೆ.ಎಸ್ ರವಿಕುಮಾರ್ ಅವರು ತಮ್ಮ ಸಿನಿಮಾವನ್ನು ಜನವರಿ ತಿಂಗಳು ಹೊಸ ವರ್ಷಕ್ಕೆ ತರುವ ಯೋಜನೆ ಹಾಕಿಕೊಂಡಿದ್ದಾರೆ. ಆದರೆ 'ಹೆಬ್ಬುಲಿ' ಯಾವಾಗ ಎಂಬುದು ಇನ್ನು ನಿರ್ಧಾರವಾಗಿಲ್ಲ. ಒಟ್ನಲ್ಲಿ ಎರಡು ಚಿತ್ರಗಳು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದು, ಚಿತ್ರ ಯಾವಾಗ ತೆರೆಗೆ ಬರುತ್ತೋ ಎಂದು ಪ್ರೇಕ್ಷಕರು ಕಾತರದಿಂದ ಕಾಯುವಂತೆ ಮಾಡಿದೆ.

English summary
'Ranna' Actror Sudeep himself has revealed the happy news to his fans and followers by tweeting on his official Twitter account. "Hebbuli' promo shoot to go on floor soon. Director Krishna has come out wth a gudd visual concept. Wil b joining em next week
Please Wait while comments are loading...

Kannada Photos

Go to : More Photos