»   » 'ಕಬಾಲಿ' ಖಾಲಿ ಖಾಲಿ: ಟಿಕೆಟ್ ಕೇಳೋರೇ ಇಲ್ಲ.!

'ಕಬಾಲಿ' ಖಾಲಿ ಖಾಲಿ: ಟಿಕೆಟ್ ಕೇಳೋರೇ ಇಲ್ಲ.!

Posted by:
Subscribe to Filmibeat Kannada

ಮೂರು-ನಾಲ್ಕು ದಿನಗಳ ಹಿಂದೆ ಹೀಗಿರ್ಲಿಲ್ಲ. ಮಲ್ಟಿಪ್ಲೆಕ್ಸ್ ಬಿಟ್ಟುಬಿಡಿ, ಗಲ್ಲಿ ಗಲ್ಲಿಯಲ್ಲಿ ಇರುವ ಸಣ್ಣ ಪುಟ್ಟ ಥಿಯೇಟರ್ ಹುಡುಕಿದರೂ 'ಕಬಾಲಿ' ಚಿತ್ರಕ್ಕೆ 'ಟಿಕೆಟ್ ಸೋಲ್ಡ್ ಔಟ್' ಬೋರ್ಡ್ ಬಿದ್ದಿತ್ತು.

ಈಗ ಪರಿಸ್ಥಿತಿ ಬದಲಾಗಿದೆ. ಶತಾಯಗತಾಯ 'ಕಬಾಲಿ' ನೋಡಲೇಬೇಕು ಅಂದವರಿಗೆ ಯಾವ ಥಿಯೇಟರ್ ಬೇಕು ಹೇಳಿ...ಎಷ್ಟು ಟಿಕೆಟ್ ಬೇಕು ಕೇಳಿ....ನಿಮಗಾಗಿ ಸಾಲು ಸಾಲು ಚಿತ್ರಮಂದಿರಗಳು ಸರದಿಯಲ್ಲಿ ಕಾಯುತ್ತಿವೆ. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

ಇನ್ನೂ ಬಿಡಿಸಿ ಹೇಳ್ಬೇಕು ಅಂದ್ರೆ, 'ಕಬಾಲಿ' ಖಾಲಿ ಹೊಡೆಯುತ್ತಿದೆ. ಮೂರು ದಿನಗಳ ಹಿಂದೆ ಇದ್ದ 'ಕಬಾಲಿ' ಫೀವರ್ ಈಗ ಕಡಿಮೆ ಆಗಿದೆ. ಹೀಗಾಗಿ, ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ. ಮುಂದೆ ಓದಿ.....

ಮಿಶ್ರ ಪ್ರತಿಕ್ರಿಯೆ ಕಾರಣ.!

ಮಿಶ್ರ ಪ್ರತಿಕ್ರಿಯೆ ಕಾರಣ.!

'ಕಬಾಲಿ' ಚಿತ್ರಕ್ಕೆ ಮೊದಲ ಪೆಟ್ಟು ಬಿದ್ದದ್ದು ಮಿಶ್ರ ಪ್ರತಿಕ್ರಿಯೆಯಿಂದ. ಯಾವಾಗ ಫಸ್ಟ್ ಶೋ ಮುಗಿದು ಜನ ಸಪ್ಪೆ ಮೋರೆ ಹಾಕೊಂಡು ಹೊರಗೆ ಬಂದ್ರೋ, ಅಂದೇ ಇತರರು ಥಿಯೇಟರ್ ಕಡೆಗೆ ಮುಖ ಮಾಡಲು ಹಿಂದೇಟು ಹಾಕಲು ಶುರು ಮಾಡಿದರು. ['ಕಬಾಲಿ' ಇಡೀ ಸಿನಿಮಾ ಇಂದು ಆನ್ ಲೈನ್ ನಲ್ಲೂ ಬಿಡುಗಡೆ.!]

ಪೈರಸಿ ಭೂತ ಕಾಡ್ತಿದೆಯಲ್ಲ.!

ಪೈರಸಿ ಭೂತ ಕಾಡ್ತಿದೆಯಲ್ಲ.!

'ಕಬಾಲಿ' ಚಿತ್ರಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದು ಪೈರಸಿ.! 'ಕಬಾಲಿ' ತೆರೆಗೆ ಅಪ್ಪಳಿಸಿದ ಮರು ಕ್ಷಣದಲ್ಲೇ ಆನ್ ಲೈನ್ ನಲ್ಲೂ 'ಕಬಾಲಿ' ಇಡೀ ಸಿನಿಮಾ ಲೀಕ್ ಆಗೋಯ್ತು. ['ಕಬಾಲಿ' ಚಿತ್ರದಲ್ಲಿ ಮಿಸ್ ಆದ ಬಹುಮುಖ್ಯ ಡೈಲಾಗ್ ಇದು.!]

ಫ್ರೀ ಆಗೇ ನೋಡ್ಬಹುದಲ್ಲಾ.!

ಫ್ರೀ ಆಗೇ ನೋಡ್ಬಹುದಲ್ಲಾ.!

ನೂರಾರು ರೂಪಾಯಿ ಕೊಟ್ಟು 'ಸ್ಲೋ' ಸಿನಿಮಾ ನೋಡುವ ಬದಲು, ಆನ್ ಲೈನ್ ನಲ್ಲಿ 'ಕಬಾಲಿ' ಹೇಗಿದೆ ಅಂತ ಒಮ್ಮೆ ದರ್ಶನ ಆದ್ರೆ ಸಾಕು ಅಂತ ಅದೆಷ್ಟೋ ಮಂದಿ ಪೈರಸಿ ವಿಡಿಯೋ ನೋಡಿದ್ದಾರೆ ಹೊರತು ಚಿತ್ರಮಂದಿರಕ್ಕೆ ಬಂದು 'ಕಬಾಲಿ' ವೀಕ್ಷಿಸಿಲ್ಲ. ['ಕಬಾಲಿ' ಕಣ್ತುಂಬಿಕೊಂಡ ವಿಮರ್ಶಕರು ಮಾಡಿದ ಕಾಮೆಂಟ್ ಏನು.?]

ಬುಕ್ ಮೈ ಶೋ ನೋಡಿ..

ಬುಕ್ ಮೈ ಶೋ ನೋಡಿ..

'ಬುಕ್ ಮೈ ಶೋ' ನಲ್ಲಿ 'ಕಬಾಲಿ' ಈಗ ಟ್ರೆಂಡಿಂಗ್ ನಲ್ಲಿಲ್ಲ. ಮಲ್ಟಿಪ್ಲೆಕ್ಸ್ ಗಳಲ್ಲಿರುವ ಬಹುತೇಕ ಶೋಗಳು ಸದ್ಯಕ್ಕೆ ಖಾಲಿ ಹೊಡೆಯುತ್ತಿವೆ. ಬೇಕಾದರೆ ನೀವೇ 'ಬುಕ್ ಮೈ ಶೋ' ಚೆಕ್ ಮಾಡಿ....

ಟಿಕೆಟ್ ಬೆಲೆ ಇಳಿದಿದೆ.!

ಟಿಕೆಟ್ ಬೆಲೆ ಇಳಿದಿದೆ.!

500-600 ರೂಪಾಯಿಗೆ ಮಾರಾಟವಾಗುತ್ತಿದ್ದ 'ಕಬಾಲಿ' ಚಿತ್ರದ ಟಿಕೆಟ್ ಗಳು ಇದೀಗ ಬಹುತೇಕ ಮಲ್ಟಿಪ್ಲೆಕ್ಸ್ ಗಳಲ್ಲಿ 100, 150, 200, 250 ರೂಪಾಯಿಗಳಿಗೆ ಇಳಿದಿದೆ.

ಕೇವಲ 69% ಲೈಕ್ಸ್.!

ಕೇವಲ 69% ಲೈಕ್ಸ್.!

'ಬುಕ್ ಮೈ ಶೋ' ವೆಬ್ ತಾಣದಲ್ಲಿ 'ಕಬಾಲಿ' ಚಿತ್ರವನ್ನ ಲೈಕ್ ಮಾಡಿರುವವರು ಕೇವಲ 69% ಮಂದಿ ಮಾತ್ರ.

English summary
Tamil Movie 'Kabali' fever has decreased all over. Hence, 'Kabali' tickets are now available easily in all theaters.
Please Wait while comments are loading...

Kannada Photos

Go to : More Photos