twitter
    For Quick Alerts
    ALLOW NOTIFICATIONS  
    For Daily Alerts

    'ಕಬಾಲಿ' ಫೀವರ್: ಅಪ್ಪಟ ಕನ್ನಡ ಪ್ರೇಮಿ ಬರೆದಿರುವ ಪತ್ರ, ತಪ್ಪದೆ ಓದಿ.!

    By Harshitha
    |

    ಕನ್ನಡ ಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳಲ್ಲಿ ತಮಿಳಿನ 'ಕಬಾಲಿ' ಚಿತ್ರಕ್ಕೆ ಅತಿಯಾದ ಪ್ರಚಾರ ನೀಡಲಾಗುತ್ತಿದೆ ಅಂತ ಬೇಸರ ವ್ಯಕ್ತಪಡಿಸಿರುವ ಬೆಂಗಳೂರಿನ ಅಪ್ಪಟ ಕನ್ನಡ ಪ್ರೇಮಿ ಸಂಪಿಗೆ ಶ್ರೀನಿವಾಸ, ನಿಮ್ಮ 'ಒನ್ ಇಂಡಿಯಾ/ಫಿಲ್ಮಿಬೀಟ್'ಗೆ ಒಂದು ಪತ್ರ ಬರೆದಿದ್ದಾರೆ. ಅದನ್ನ ಯಥಾವತ್ತಾಗಿ ಪ್ರಕಟಿಸುತ್ತಿದ್ದೇವೆ. ಓದಿರಿ - ಸಂಪಾದಕ.

    ***

    ನಮಸ್ಕಾರ ಸರ್,

    'ಕಬಾಲಿ' ಸಿನಿಮಾ ಬಗ್ಗೆ ನಮ್ಮ ಕನ್ನಡ ವಾಹಿನಿಗಳಲ್ಲಿ ಕೊಡುತ್ತಿರುವ ಅತಿಯಾದ ಪ್ರಚಾರದ ಬಗ್ಗೆ ನನ್ನ ಒಂದು ಅನಿಸಿಕೆ. ದಯವಿಟ್ಟು ನನ್ನ ಈ ಅನಿಸಿಕೆ ವಾಹಿನಿಗಳಿಗೆ, ಚಿತ್ರರಂಗದವರಿಗೆ ಮುಟ್ಟಲು ಕನ್ನಡ ಒನ್ ಇಂಡಿಯಾದಲ್ಲಿ ವೇದಿಕೆ ಕಲ್ಪಿಸಿ ಕೊಡಿ. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

    ಕಳೆದ ಕೆಲವು ವಾರಗಳಿಂದ ನಮ್ಮ ಕನ್ನಡ ಟಿ.ವಿ ವಾಹಿನಿಗಳಲ್ಲಿ, ಕೆಲವು ಕನ್ನಡ ಪತ್ರಿಕೆಗಳಲ್ಲಿ ರಜನಿಕಾಂತ್ ಅವರ ತಮಿಳಿನ 'ಕಬಾಲಿ' ಸಿನಿಮಾ ಬಗ್ಗೆ ಅತಿಯಾದ ಪ್ರಚಾರ ಕೊಟ್ಟು ಹೈಪ್ ಮಾಡುತ್ತಿರುವುದು ಕನ್ನಡಾಭಿಮಾನಿಗಳಲ್ಲಿ ಮತ್ತು ಕನ್ನಡ ಚಿತ್ರ ರಸಿಕರಲ್ಲಿ ತುಂಬಾ ಬೇಸರ, ವಾಕರಿಕೆ ಹಾಗೂ ಕೋಪ ತರಿಸಿದೆ. ['ಕಬಾಲಿ' ನೋಡಲು ಹೋಗಿ 'ಕುರಿ' ಆದ ಕನ್ನಡಿಗರು.!]

    Kabali promotion in Karnataka irks kannadiga

    ಹಿಂದೆ ತೆಲುಗಿನ 'ಬಾಹುಬಲಿ' ಚಿತ್ರ ತೆರೆಕಂಡಾಗಲೂ ಇದೇ ರೀತಿ ಬಿಟ್ಟಿ ಪ್ರಚಾರ ಮಾಡಿದ್ದರು. ನಮ್ಮ ವಾಹಿನಿಗಳಲ್ಲಿ, ಎಫ್.ಎಂ ರೇಡಿಯೋಗಳಲ್ಲಿ, ಪತ್ರಿಕೆಗಳಲ್ಲಿ ಪರಭಾಷೆಯ ಚಿತ್ರಗಳಿಗೆ ಕೊಡುವ ಬಿಟ್ಟಿ ಪ್ರಚಾರವನ್ನು ಪರರಾಜ್ಯದವರು ನಮ್ಮ ಕನ್ನಡ ಚಿತ್ರಗಳಿಗೆ ಅವರ ವಾಹಿನಿ, ಪತ್ರಿಕೆಗಳಲ್ಲಿ ಕೊಡುತ್ತಾರೆಯೇ? ಖಂಡಿತ ಇಲ್ಲ. ನಮ್ಮವರೇಕೆ ಸ್ವಾಭಿಮಾನ ಬಿಟ್ಟು ಪರಭಾಷಾ ಚಿತ್ರಗಳಿಗೆ ಪ್ರಚಾರ ಕೊಡಬೇಕು? [ಟ್ವಿಟ್ಟರ್ ವಿಮರ್ಶೆ: ರಜನಿ ಓಕೆ ಆದ್ರೆ 'ಕಬಾಲಿ' ಅಷ್ಟಕಷ್ಟೆ.!]

    ನಮ್ಮ ವಾಹಿನಿಗಳು, ಸಿನಿಮಾ ಪತ್ರಿಕೆಯವರು ತಮಿಳು, ತೆಲುಗು, ಹಿಂದಿ ಚಿತ್ರಗಳ ಬಗ್ಗೆ ಅತಿಯಾಗಿ ಪ್ರಚಾರ ಕೊಟ್ಟು ಪರಭಾಷಾ ಚಿತ್ರಗಳ ಮಾರುಕಟ್ಟೆ ಕನ್ನಡ ನಾಡಿನಲ್ಲಿ ಬೆಳೆಯಲು ಕಾರಣರಾಗಿದ್ದಾರೆ ಎಂದರೆ ತಪ್ಪಲ್ಲ.

    ಇದರಿಂದಾಗಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಂತೆ ಮಾಡಿದ್ದಾರೆ. ಇದಕ್ಕೆ ನಮ್ಮ ಕನ್ನಡದ ಕೆಲವು ನಿರ್ಮಾಪಕರು, ವಿತರಕರ ಸಹಕಾರವೂ ಇದೆ. [ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!]

    ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಒದಗಿಸುವ ಬದಲು, ನೆರೆ ರಾಜ್ಯದಲ್ಲಿ ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತರಿಸುವ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಲಿ ಕಾರ್ಯಪ್ರವೃತ್ತರಾಗುವುದು ಯಾವಾಗ?

    ನಮ್ಮ ಕನ್ನಡ ಚಿತ್ರ ರಸಿಕರು, ಹೋರಾಟಗಾರರು ಕನ್ನಡ ವಾಹಿನಿಗಳ, ಎಫ್.ಎಂ ಗಳ ಪರಭಾಷಾ ಚಿತ್ರಗಳ ವ್ಯಾಮೋಹದ ಬಗ್ಗೆ ಎಚ್ಚೆತ್ತು ಹೋರಾಟ ಮಾಡಿ ಕನ್ನಡ ಚಿತ್ರರಂಗವನ್ನು ಉಳಿಸಬೇಕೆಂದು ಕೋರುತ್ತೇನೆ. [ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್]

    ಇಂತಿ,
    ಸಂಪಿಗೆ ಶ್ರೀನಿವಾಸ

    English summary
    'Kabali' has become popular all over the world as Super Star Rajinikanth starrer Tamil Movie has hit the screens today (June 22nd). Meanwhile, 'Kabali' promotions in Karnataka has irked Kannadigas. Here is a letter written to Filmibeat Kannada/Oneindia Kannada Editor by Kannada Reader.
    Friday, July 22, 2016, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X