»   » ಸ್ಯಾಂಡಲ್ ವುಡ್ಡಿಗೆ ಕಾಜಲ್ ಅಗರ್ವಾಲ್ ಎಂಟ್ರಿ ಕನ್ಫರ್ಮ್

ಸ್ಯಾಂಡಲ್ ವುಡ್ಡಿಗೆ ಕಾಜಲ್ ಅಗರ್ವಾಲ್ ಎಂಟ್ರಿ ಕನ್ಫರ್ಮ್

Posted by:
Subscribe to Filmibeat Kannada

ಹೊಸವರ್ಷದ ಆದಿಯಲ್ಲಿ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಪಕ್ಕದ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಶಾಣೆ ಬ್ಯೂಸಿಯಾಗಿರುವ ಕಾಜಲ್ ಅಗರ್ವಾಲ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆನ್ನುವ confirm ಸುದ್ದಿ ಹೊರಬಿದ್ದಿದೆ.

ಮುಂಬೈನಲ್ಲಿ ಹುಟ್ಟಿ ಬೆಳೆದು 'ಕ್ಯೂಂ ಹೋಗಯಾ' ಎನ್ನುವ ಹಿಂದಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅಡಿಯಿಟ್ಟ ಕಾಜಲ್ ಭದ್ರ ನೆಲೆ ಕಂಡಿದ್ದು ಮಾತ್ರ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ಕಾಜಲ್ ಕನ್ನಡ ಚಿತ್ರದಲ್ಲಿ ನಟಿಸಲು ಕಾಲ್ಸೀಟ್ ನೀಡಿದ್ದಾರೆ ಎನ್ನುವುದು ಅಧಿಕೃತ ಮಾಹಿತಿ.

ತೆಲುಗಿನ ಮಗಧೀರ ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ತನ್ನ ಸಂಭಾವನೆಯನ್ನು ಗಗನಕ್ಕೇರಿಸಿರುವ ಕಾಜಲ್ ಅಗರ್ವಾಲ್ ಕನ್ನಡ ಚಿತ್ರದಲ್ಲಿ ನಟಿಸಲೂ ಭರ್ಜರಿ ಸಂಭಾವನೆ ಪಡೆದಿದ್ದಾರೆನ್ನುವ ಸುದ್ದಿಯಿದೆ.

ಮೂರು ಬಾರಿ ಫಿಲಂಫೇರ್ ಸೌತ್ ಪ್ರಶಸ್ತಿ ಪಡೆದಿರುವ ಕಾಜಲ್ ಅಗರ್ವಾಲ್, ತೆಲುಗಿನ ರಿಮೇಕ್ ಚಿತ್ರದ ಮೂಲಕ ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರಿಗೆ ನಾಯಕಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸ್ಲೈಡ್ ಕ್ಲಿಕ್ಕಿಸಿ

ತೆಲುಗಿನ ಯಾವ ಚಿತ್ರದ ರಿಮೇಕ್
  

ತೆಲುಗಿನ ಯಾವ ಚಿತ್ರದ ರಿಮೇಕ್

'ಗುಂಡೆ ಜಾರಿ ಗಲ್ಲಂತಾಯಿದೆ' ಎನ್ನುವ ತೆಲುಗು ಚಿತ್ರ ಕನ್ನಡದಲ್ಲಿ ರಿಮೇಕ್ ಆಗಲಿದೆ. ಎಪ್ರಿಲ್ 2013ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಹನ್ನೊಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಸುಮಾರು 65 ಕೋಟಿ ವಹಿವಾಟು ನಡೆಸಿತ್ತು. ನಿತಿನ್, ನಿತ್ಯಾ ಮೆನನ್, ಇಶಾ ತಲ್ವಾರ್, ಆಲಿ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ವಿಜಯ್ ಕುಮಾರ್ ಕೊಂಡ ನಿರ್ದೆಶಿಸಿದ್ದರು.

ನಾಯಕನಾಗಿ ಪುನೀತ್ ರಾಜಕುಮಾರ್
  

ನಾಯಕನಾಗಿ ಪುನೀತ್ ರಾಜಕುಮಾರ್

ಒಂದು ವರ್ಷದ ಗ್ಯಾಪಿನ ನಂತರ ಪುನೀತ್ ರಾಜಕುಮಾರ್ ಅವರ ನಿನ್ನಿಂದಲೇ ಚಿತ್ರ ಬರುವ ಗುರುವಾರ (ಜ 16) ತೆರೆ ಕಾಣಲಿದೆ. ಮೈತ್ರಿ ಮತ್ತು ತೆಲುಗು ದೂಕುಡು ಕನ್ನಡ ರಿಮೇಕ್ ಚಿತ್ರದ ನಂತರ ಪುನೀತ್ ಈ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕರಾರು?
  

ಈ ಚಿತ್ರಕ್ಕೆ ನಿರ್ದೇಶಕರಾರು?

ಇನ್ನೂ ಹೆಸರಿಡದ ಮತ್ತು ಮಹೂರ್ತ ಕಾಣದ ಈ ಚಿತ್ರಕ್ಕೆ ನಾಯಕನಾಗಿ ಪುನೀತ್ ಮತ್ತು ನಾಯಕಿಯಾಗಿ ಕಾಜಲ್ ಅಗರ್ವಾಲ್ ಮಾತ್ರ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಎ ಪಿ ಅರ್ಜುನ್ ಅಥವಾ ಎಂ ಡಿ ಶ್ರೀಧರ್ ಆಯ್ಕೆಯಾಗುವ ಸಾಧ್ಯತೆಯಿದೆ.

ಚಿತ್ರಕ್ಕೆ ನಿರ್ಮಾಪಕರು ತೆಲುಗಿನವರು
  

ಚಿತ್ರಕ್ಕೆ ನಿರ್ಮಾಪಕರು ತೆಲುಗಿನವರು

ಈ ಚಿತ್ರವನ್ನು ಎಚ್ಪಿಆರ್ ಎಂಟರ್ಟೈನ್ಮೆಂಟ್ ಬ್ಯಾನರಿನಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ನಿರ್ಮಾಪಕರು ಎ ಹರಿಪ್ರಸಾದ್ ರಾವ್ ಮತ್ತು ಎ ಪ್ರಸಾದ್ ಚೌಧುರಿ. ಈ ಚಿತ್ರ ಇದೇ ಮೇ ತಿಂಗಳಲ್ಲಿ ಸೆಟ್ಟೇರಲಿದೆ.

ಪುನೀತ್ ಮತ್ತು ಕಾಜಲ್ ಇಬ್ಬರೂ ಬ್ಯೂಸಿ
  

ಪುನೀತ್ ಮತ್ತು ಕಾಜಲ್ ಇಬ್ಬರೂ ಬ್ಯೂಸಿ

ಪುನೀತ್ 'ನಿನ್ನಿಂದಲೇ' ಚಿತ್ರ ಬರುವ ವಾರ ತೆರೆ ಕಾಣಲಿದೆ. ಇನ್ನೆರಡು ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇತ್ತ ಕಾಜಲ್ ಅಗರ್ವಾಲ್ ಪ್ರಮುಖ ಭೂಮಿಕೆಯಲ್ಲಿರುವ ತಮಿಳು ಚಿತ್ರ ಜಿಲ್ಲಾ ಮತ್ತು ತೆಲುಗು ಚಿತ್ರ ಎವಡು ಈ ವಾರ ಬಿಡುಗಡೆಯಾಗಿಲಿದೆ.

English summary
Kajal Aggarwal entry into Kannada film with Puneeth Rajkumar. This film will be produced by A Hari Prasad Rao and A Prasad Chowdhury.
Please Wait while comments are loading...

Kannada Photos

Go to : More Photos