»   » ಅಪ್ಪು 'ಚಕ್ರವ್ಯೂಹಕ್ಕೆ' ಕಾಜಲ್ ಸಖತ್ತಾಗಿ ಹಾಡಿದ್ರು

ಅಪ್ಪು 'ಚಕ್ರವ್ಯೂಹಕ್ಕೆ' ಕಾಜಲ್ ಸಖತ್ತಾಗಿ ಹಾಡಿದ್ರು

Posted by:
Subscribe to Filmibeat Kannada

ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ 'ಚಕ್ರವ್ಯೂಹ' ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟ ಎನ್.ಟಿ ಆರ್ ಧ್ವನಿ ನೀಡಿದ ನಂತರ ನಟಿ ಕಾಜಲ್ ಅಗರ್ ವಾಲಾ ಅವರು ಧ್ವನಿ ನೀಡುತ್ತಾರೆ ಎಂದು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ. ಇದೀಗ ನಟಿ ಕಾಜಲ್ ಅವರು ಹೈದ್ರಾಬಾದ್ ನಲ್ಲಿರುವ ಸಂಗೀತ ನಿರ್ದೇಶಕ ಎಸ್.ತಮನ್ ಅವರ ಸ್ಟುಡಿಯೋದಲ್ಲಿ ಹಾಡಿದ್ದಾರೆ.[ಪುನೀತ್ ಜೊತೆ ಡ್ಯುಯೆಟ್ ಸಾಂಗ್ ಹಾಡ್ತಾರಂತೆ ಕಾಜಲ್]

ಪವರ್ ಸ್ಟಾರ್ ಪುನೀತ್ ಮತ್ತು ನಟಿ ಕಾಜಲ್ ಅಗರ್ ವಾಲಾ ಅವರು ಹಾಡಿರುವ ಡ್ಯುಯೆಟ್ ಸಾಂಗ್ ಗೆ ಸಂಗೀತ ಮಾಂತ್ರಿಕ ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಪುನೀತ್ ಅವರು ಹಾಡಿ ಮುಗಿಸಿದ್ದರು. ಇದೀಗ ಕಾಜಲ್ ಅವರೂ ಕೂಡ ಯಶಸ್ವಿಯಾಗಿ ಹಾಡಿ ಮುಗಿಸಿದ್ದಾರೆ.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

ಕನ್ನಡ ಸಿನಿಮಾಗೆ ತಮಿಳು ನಿರ್ದೇಶಕರ ಆಕ್ಷನ-ಕಟ್, ನೆಗೆಟಿವ್ ಪಾತ್ರದಲ್ಲಿ ತಮಿಳು ನಟ ಅರುಣ್ ವಿಜಯ್, ಚಿತ್ರದ ಹಾಡೊಂದಕ್ಕೆ ತೆಲುಗು ನಟ ಜ್ಯೂನಿಯರ್ ಎನ್.ಟಿ ಆರ್ ಮತ್ತು ನಟಿ ಕಾಜಲ್ ಅಗರ್ ವಾಲಾ ತಮ್ಮ ಧ್ವನಿ ನೀಡಿರುವುದರಿಂದ ಈ ಸಿನಿಮಾ ಗಾಂಧಿನಗರದಲ್ಲಿ ಸದ್ಯಕ್ಕೆ ಟಾಕ್ ಆಫ್ ದ ಟಾಪಿಕ್ ಆಗಿದೆ.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿ ರಚಿತಾ ರಾಮ್ ಅವರು ಕಾಣಿಸಿಕೊಂಡಿದ್ದು, ಅರುಣ್ ವಿಜಯ್ ಮತ್ತು ಅಭಿನವ್ ಸಿಂಗ್ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಎನ್.ಕೆ ಲೋಹಿತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದೆ.

English summary
Telugu actress Kajal Aggarwal will make her singing debut in Chakravyuha. Today, Jan 7, the long legged goegeous actress has already started singing for the movie.
Please Wait while comments are loading...

Kannada Photos

Go to : More Photos