»   » ನಟಿ ಸಂಜನಾ ಗಲ್ ರಾಣಿ ಕಾಲಿಗೆ ಹತ್ತು ಹೊಲಿಗೆ

ನಟಿ ಸಂಜನಾ ಗಲ್ ರಾಣಿ ಕಾಲಿಗೆ ಹತ್ತು ಹೊಲಿಗೆ

Posted by:
Subscribe to Filmibeat Kannada

ಚಿತ್ರೀಕರಣದಲ್ಲಿ ಸಿನಿಮಾ ತಾರೆಗಳು ಗಾಯಗೊಳ್ಳುವುದು, ಬಳಿಕ ಚಿಕಿತ್ಸೆ ಪಡೆಯುವುದು ಎಲ್ಲವೂ ಮಾಮೂಲಿ ಸುದ್ದಿಗಳು ಎಂಬಂತಾಗಿದೆ. ಏಕೆಂದರೆ ಇತ್ತೀಚೆಗೆ ಬಹಳಷ್ಟು ನಟರಿಗೆ ಈ ರೀತಿ ಆಗುತ್ತಿರುವುದೇ ಇದಕ್ಕೆ ಕಾರಣ. ಆದರೆ ಇದರ ನೇರ ಪರಿಣಾಮ ಆಗುವುದು ಮಾತ್ರ ಚಿತ್ರದ ನಿರ್ಮಾಪಕರ ಮೇಲೆ.

ಶೂಟಿಂಗ್ ಗೆ ಪ್ಯಾಕಪ್ ಹೇಳಿದರೆ ಲಕ್ಷಾಂತರ ಹಣ ನಷ್ಟವಾಗುತ್ತದೆ. ಇರಲಿ ಈಗ ವಿಷಯಕ್ಕೆ ಬರೋಣ. ನಟಿ ಸಂಜನಾ ಗಲ್ ರಾಣಿ ಅವರು ಚಿತ್ರೀಕರಣದಲ್ಲಿ ಗಾಯಗೊಂಡಿದ್ದಾರೆ. ಅವರ ಬಲಗಾಲಿನ ಬೆರಳಿಗೆ ತುಂಬಾ ಆಳವಾದ ಗಾಯವಾಗಿದೆ. [ನಟಿ ಸಂಜನಾ ಬಗ್ಗೆ ನಿಮಗೆ ತಿಳಿದಿರದ ರಹಸ್ಯಗಳು]

ಈಟಿವಿ ಕನ್ನಡದ ಅಶ್ವಿನಿ ನಕ್ಷತ್ರ ಧಾರಾವಾಹಿಯಲಿ ಅತಿಥಿ ಪಾತ್ರ ಪೋಷಿಸುತ್ತಿದ್ದು ಚಿತ್ರೀಕರಣದಲ್ಲಿ ಈ ಘಟನೆ ಸಂಭವಿಸಿದೆ. ಆದರೂ ಚಿತ್ರೀಕರಣಕ್ಕೆ ಹಾಜರಾಗಿ ತಮ್ಮ ಭಾಗವ ಸನ್ನಿವೇಶವನ್ನು ಮುಗಿಸಿಕೊಟ್ಟಿದ್ದಾರೆ. ಬಳಿಕ ಚಿಕಿತ್ಸೆ ಪಡೆದಿರುವ ಅವರ ಕಾಲಿನ ಬೆರಳಿಗೆ ಹತ್ತು ಹೊಲಿಗೆ ಹಾಕಲಾಗಿದೆ.

ಈ ಬಗ್ಗೆ ಟ್ವೀಟಿಸಿದ್ದು ತಮ್ಮ ನೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಸಂಜನಾ ಅವರು ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡದ 'ರೆಬೆಲ್', 'ಅಗ್ರಜ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗಿನಲ್ಲಿ 'ಒನ್ಸ್ ಅಪಾನ್ ಎ ಟೈಮ್' ಹಾಗೂ 'ಸರದಾ' ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actress Sanjjanaa was injured while performed a special guest role in the Etv Kannada television serial Ashwini Nakshatra. She Had 10 stitches deep inside yesterday,hit an anesthesia block.
Please Wait while comments are loading...

Kannada Photos

Go to : More Photos