»   » ವಿಕ್ರಂ ಆಸ್ಪತ್ರೆಯಿಂದ ಅಂಬರೀಶ್ ಡಿಸ್ಚಾರ್ಜ್.!

ವಿಕ್ರಂ ಆಸ್ಪತ್ರೆಯಿಂದ ಅಂಬರೀಶ್ ಡಿಸ್ಚಾರ್ಜ್.!

Posted by:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಫಿಟ್ ಅಂಡ್ ಫೈನ್ ಆಗಿದ್ದಾರೆ. ಆರೋಗ್ಯ ತಪಾಸಣೆಯ ನಂತರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಿಂದ ಅಂಬರೀಶ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಶ್ವಾಸಕೋಶದ ಸೋಂಕಿನ ಹಿನ್ನಲೆಯಲ್ಲಿ ಕಳೆದ ವರ್ಷದಿಂದ ಟ್ರೀಟ್ಮೆಂಟ್ ನಲ್ಲಿರುವ ಅಂಬರೀಶ್, ಮೊನ್ನೆ ರಾತ್ರಿ ಜನರಲ್ ಚೆಕಪ್ ಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.

ambareesh

ಬಿಪಿ, ಶುಗರ್ ಲೆವೆಲ್ ಸೇರಿದಂತೆ ಕಂಪ್ಲೀಟ್ ಬಾಡಿ ಸ್ಕ್ಯಾನ್ ಮತ್ತು ಇತರೆ ಟೆಸ್ಟ್ ಗಳು ಮುಗಿದ ಬಳಿಕ ಇಂದು ಅಂಬಿ ಮನೆಗೆ ತೆರಳಿದ್ದಾರೆ. ''ಅಂಬರೀಶ್ ಆರೋಗ್ಯ ಸ್ಥಿರವಾಗಿದೆ. ಯಾವುದೇ ಆತಂಕ ಪಡಬೇಕಾಗಿಲ್ಲ'' ಅಂತ ವಿಕ್ರಂ ಆಸ್ಪತ್ರೆ ವೈದ್ಯ ಡಾ.ಸತೀಶ್ ತಿಳಿಸಿದ್ದಾರೆ. [ವಿಕ್ರಂ ಆಸ್ಪತ್ರೆಗೆ ನಟ ಅಂಬರೀಶ್ ದಾಖಲು.!]

''ಅಂಬರೀಶ್ ಆರೋಗ್ಯವಾಗಿದ್ದಾರೆ. ಯಾವುದೇ ಗಾಸಿಪ್ ಸುದ್ದಿಗಳಿಗೆ ಕಿವಿಗೊಡಬೇಡಿ'' ಅಂತ ಪತ್ನಿ ಸುಮಲತಾ ಅಂಬರೀಶ್ ಕೂಡ ತಮ್ಮ ಟ್ವೀಟ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ.

English summary
Rebel Star Ambareesh got discharged from Vikram Hospital, Bengaluru, after general check-up.
Please Wait while comments are loading...
Best of 2016

Kannada Photos

Go to : More Photos