»   » ಜಯಾ ಬಚ್ಚನ್ 'ಬೆಂಗಳೂರು ಆಗಲ್ಲ' ಅಂದಿದ್ದಕ್ಕೆ ರೆಬೆಲ್ ಸ್ಟಾರ್ ಏನಂದ್ರು

ಜಯಾ ಬಚ್ಚನ್ 'ಬೆಂಗಳೂರು ಆಗಲ್ಲ' ಅಂದಿದ್ದಕ್ಕೆ ರೆಬೆಲ್ ಸ್ಟಾರ್ ಏನಂದ್ರು

Posted by:
Subscribe to Filmibeat Kannada

ಈ ವರ್ಷದ 8ನೇ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವ ಬಹಳ ಅದ್ಧೂರಿಯಾಗಿ ವಿಧಾನ ಸೌಧದ ಪೂರ್ವದ್ವಾರದಲ್ಲಿ ಉದ್ಘಾಟನೆಗೊಂಡು ಈಗಾಗಲೇ ಚಿತ್ರೋತ್ಸವ ಆರಂಭವಾಗಿದೆ. ಚಲನಚಿತ್ರ ರಂಗದ ಹಿರಿಯ ನಟಿ ಹಾಗೂ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು.

ಅಷ್ಟಕ್ಕೂ ಹಿಂದಿ ಚಿತ್ರರಂಗದ ಖ್ಯಾತ ನಟಿ ಜಯಾ ಬಚ್ಚನ್ ಅವರು ಸಿನಿಮೋತ್ಸವ ಉದ್ಘಾಟನೆಗೆ ಬೆಂಗಳೂರಿಗೆ ಬರಲು ಕಾರಣ ಇತ್ತು ಅನ್ನೋದು ನಿಮಗೆ ಗೊತ್ತಾ?. ಹೌದು ಜಯಾ ಬಚ್ಚನ್ ಅವರು ನಮ್ಮ ರಾಜಧಾನಿ ಬೆಂಗಳೂರಿಗೆ ಬರಲು ಕಾರಣ, ತಮಗೂ ಬೆಂಗಳೂರಿಗೂ ಆಗಿ ಬರುವುದಿಲ್ಲ ಅನ್ನೋ ನಂಬಿಕೆಯನ್ನು ಸುಳ್ಳಾಗಿಸೋಕಂತೆ.[ಚಿತ್ರಗಳು: ಅದ್ಧೂರಿಯಾಗಿ ಉದ್ಘಾಟನೆಗೊಂಡ ಸಿನಿಮೋತ್ಸವ]

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವಾಗ ಜಯಾ ಬಚ್ಚನ್ ಅವರು 'ಬೆಂಗಳೂರಿಗೆ ಬಂದಾಗ ನಾನು ಮತ್ತು ಅಮಿತಾಭ್ ಅವರು ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸಿದ್ದೀವಿ. ಮೊದಲು 'ಕೂಲಿ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಏಟು ಬಿತ್ತು. ಆ ನಂತರ ಮಿಸ್ ವರ್ಲ್ಡ್ ಕಾರ್ಯಕ್ರಮವನ್ನು ಬೆಂಗಳೂರಲ್ಲಿ ಮಾಡಿ ಏನು ಅನಾಹುತ ಆಯ್ತು ಅಂತ ಎಲ್ಲರಿಗೂ ಗೊತ್ತಿದೆ.

ಆದ್ರಿಂದ ಬಚ್ಚನ್ ಕುಟುಂಬಕ್ಕೂ ರಾಜಧಾನಿ ಬೆಂಗಳೂರಿಗೂ ಆಗಿ ಬರುವುದಿಲ್ಲ ಅನ್ನೋ ಮಾತನ್ನು ಬ್ರೇಕ್ ಮಾಡೋಕೆ ಅಂತಾನೇ ನಾನಿವತ್ತು ಇಲ್ಲಿಗೆ ಬಂದೇ ಎಂದು ಜಯಾ ಬಚ್ಚನ್ ನುಡಿದಿದ್ದರು.[ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಯಲ್ಲಿರುವ ಕನ್ನಡ ಚಿತ್ರಗಳ ಲಿಸ್ಟ್]

ಆದರೆ ಕನ್ನಡದ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಾತ್ರ ಜಯಾ ಬಚ್ಚನ್ ಅವರ ಮಾತುಗಳನ್ನು ಸುತಾರಾಂ ಒಪ್ಪಲು ರೆಡಿ ಇರಲಿಲ್ಲ. ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಕುಟುಂಬಕ್ಕೂ ಬೆಂಗಳೂರಿಗೂ ಆಗಿ ಬರಲ್ಲ ಅನ್ನೋ ಮಾತನ್ನೆಲ್ಲಾ ನಾನು ನಂಬೋದಿಲ್ಲ.

'ಅವೆಲ್ಲಾ ಏನೂ ಇಲ್ಲ, 'ಶೋಲೆ' ಚಿತ್ರ ಮಾಡಿದ್ದು ಇದೇ ಬೆಂಗಳೂರಲ್ಲಿ. ಆ ಚಿತ್ರ ಅವರ ಕೆರಿಯರ್ ನಲ್ಲಿ ಮೈಲಿಗಲ್ಲಾಗಿತ್ತು. ಆ ಚಿತ್ರದಲ್ಲಿ ಜಯಾ ಬಚ್ಚನ್ ಅವರು ಕೂಡ ನಟಿಸಿದ್ದರು. ಹಾಗಾಗಿ ಆಗಿಬರಲ್ಲ ಅನ್ನೋದನ್ನೆಲ್ಲಾ ನಾನು ನಂಬುವುದಿಲ್ಲ ಎಂದು ಅಂಬರೀಶ್ ನುಡಿದರು.

English summary
Rebel Star Ambareesh's reactionn to Jaya Bachchan's statement about Bengaluru City.
Please Wait while comments are loading...

Kannada Photos

Go to : More Photos