twitter
    For Quick Alerts
    ALLOW NOTIFICATIONS  
    For Daily Alerts

    ಸಂಚಾರ ನಿಯಮ ಉಲ್ಲಂಘಿಸಿ ದಂಡ ತೆತ್ತ ಚೇತನ್

    By Rajendra
    |

    'ಮೈನಾ' (ಚಿತ್ರ ವಿಮರ್ಶೆ ಓದಿ) ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನಟ ಚೇತನ್ ಕುಮಾರ್ ಸಂಚಾರ ನಿಯಮ ಉಲ್ಲಂಘಿಸಿ ದಂಡ ತೆತ್ತ ಘಟನೆ ಬೆಂಗಳೂರಿನ ಇಂದಿರಾನಗರದ 100 ಫೀಟ್ ರೋಡಲ್ಲಿ ನಡೆದಿದೆ. ಅವರು ಇಷ್ಟಕ್ಕೂ ಮಾಡಿದ ತಪ್ಪೇನೆಂದರೆ, ತಮ್ಮ ಕಾರಿಗೆ ಟಿಂಟೆಡ್ ಗ್ಲಾಸನ್ನು ಅಳವಡಿಸಿಕೊಂಡಿದ್ದು.

    1989ರ ವಾಹನ ಕಾಯಿದೆಯಲ್ಲಿ ಸೂಚಿಸಿದಂತೆ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಕೆಯನ್ನು ನಿಷೇಧಿಸಲಾಗಿದೆ. 2012ರ ಮೇ 4ರಿಂದ ಕಡ್ಡಾಯವಾಗಿ ಈ ಕಾನೂನನ್ನು ಅನುಷ್ಠಾನಗೊಳಿಸಲಾಗಿದೆ. ಆದರೂ ಸೆಲೆಬ್ರಿಟಿಗಳು ಇನ್ನೂ ಟಿಂಟೆಡ್ ಗ್ಲಾಸ್ ಹಾಕಿಕೊಂಡೇ ಓಡಾಡುತ್ತಿದ್ದಾರೆ.

    ಚೇತನ್ ಕುಮಾರ್ ಸಹ ಅಷ್ಟೇ ತಮ್ಮ ಕಾರಿಗೆ ಟಿಂಡೆಟ್ ಗ್ಲಾಸ್ ಹಾಕಿಕೊಂಡು ಓಡಾಡುತ್ತಿದ್ದರು. ಇಷ್ಟು ದಿನ ಅವರ ಕಾರನ್ನು ಯಾವ ಟ್ರಾಫಿಕ್ ಪೊಲೀಸ್ ತಡೆದು ನಿಲ್ಲಿಸಿರಲಿಲ್ಲ. ಆದರೆ ಮೊನ್ನೆ ಏನಾಯಿತೆಂದರೆ ಚೇತನ್ ಕಾರನ್ನು ಟ್ರಾಫಿಕ್ ಇನ್ಸ್ ಪೆಕ್ಟರ್ ಸಿ ಕವಿತಾ ತಡೆದಿದ್ದಾರೆ. ಟಿಂಡೆಡ್ ಗ್ಲಾಸ್ ತೆಗೆಯುವಂತೆ ಸೂಚಿಸಿದ್ದಾರೆ.

    ಆದರೆ ಚೇತನ್ ಅವರು, ಟಿಂಟೆಡ್ ಗ್ಲಾಸ್ ಇಲ್ಲದೆ ನಮ್ಮಂತಹ ಸೆಲೆಬ್ರಿಟಿಗಳು ಓಡಾಡಲು ಕಷ್ಟವಾಗುತ್ತದೆ, ಹಾಗೆ ಹೀಗೆ ಎಂದು ವಾದಿಸಿದ್ದಾರೆ. ಆದರೆ ಟ್ರಾಫಿಕ್ ಇನ್ಸ್ ಪೆಕ್ಟರ್ ಕೇಳಬೇಕಲ್ಲ. ರೀ ಮಿಸ್ಟರ್ ಯಾರಾದರೂ ಅಷ್ಟೇ, ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿ ತಮ್ಮ ಸಿಬ್ಬಂದಿ ಕೈಯಲ್ಲಿ ಟಿಂಟೆಡ್ ಗ್ಲಾಸ್ ತೆಗೆಸಿದ್ದಾರೆ. ಜೊತೆಗೆ ರು.100 ದಂಡವನ್ನೂ ವಸೂಲಿ ಮಾಡಿದ್ದಾರೆ.

    ಅಷ್ಟರಲ್ಲಾಗಲೇ ಅಲ್ಲಿ ಜನ ಜಂಗುಳಿ ಜಮಾಯಿಸಿದೆ. ಅವರಿಗೆಲ್ಲಾ ವಿಷಯ ಮನದಟ್ಟಾಗಿ ಟ್ರಾಫಿಕ್ ಇನ್ಸ್ ಪೆಕ್ಟರ್ ಕವಿತಾ ಅವರ ಕ್ರಮಕ್ಕೆ ಮೆಚ್ಚಿಕೊಂಡಿದ್ದಾರೆ. ಅಯ್ಯೋ ಹೀರೋ ಆದ್ರೆ ಏನು ಯಾರಾದರೆ ಏನು ಗುರು? ಕಾನೂನು ಎಲ್ಲರೂ ಒಂದೇ ಅಲ್ಲವೇ ಎಂಬ ಮಾತುಗಳು ಅಲ್ಲಿ ಧಾರಾಳವಾಗಿ ಕೇಳಿಬರುತ್ತಿದ್ದವು.

    ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಚೇತನ್, ಹೌದು ನಿಜ ನನ್ನ ಕಾರಿಗೆ ನಾನು ಸನ್ ಫಿಲಂ ತೆಗೆಸಿರಲಿಲ್ಲ. ಅದಕ್ಕಾಗಿ ದಂಡ ಕಟ್ಟಿದ್ದೇನೆ. ಟ್ರಾಫಿಕ್ ಪೊಲೀಸರು ತೆಗೆಯುವಂತೆ ಸೂಚಿಸಿದ್ದರು. ಆದರೆ ನಾನು ತೆಗೆದಿರಲಿಲ್ಲ ಅಷ್ಟೇ. ದಯವಿಟ್ಟು ಇದನ್ನೇ ದೊಡ್ಡ ವಿವಾದ ಮಾಡಬೇಡಿ. ಕಾನೂನು ಎಲ್ಲರಿಗೂ ಒಂದೆ. ತುಂಬಾ ಒಳ್ಳೆಯ ಕಾನೂನು. ಅಂದು ತುಂಬಾ ಎಮರ್ಜನ್ಸಿ ಕೆಲ ಇತ್ತು. ಕಾರನ್ನು ನಾನೇ ಡ್ರೈವ್ ಮಾಡುತ್ತಿದ್ದೆ ಎಂದಿದ್ದಾರೆ. (ಮೂಲ: ಬೆಂಗಳೂರು ಮಿರರ್)

    English summary
    Kannada actor Chetan Kumar has reportedly paid Rs 100 fine to the Indiranagar Traffic Police because his car has tinted glass windows. And, the actor refuses to remove it. Chetan admitted that the incident had taken place. “Yes, I paid the fine and removed the sun film,” Chetan said, reports Bangalore Mirror.
    Tuesday, February 26, 2013, 15:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X