»   » ಹಸೆಮಣೆ ಏರಿದ ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ

ಹಸೆಮಣೆ ಏರಿದ ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ

Posted by:
Subscribe to Filmibeat Kannada

'ಪ್ರೇಮಿಸಂ' ಖ್ಯಾತಿಯ ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ನಟ ಚೇತನ್ ಚಂದ್ರ ನವ ಬಾಳಿಗೆ ಕಾಲಿಟ್ಟಿದ್ದಾರೆ.[ನಟ ಚೇತನ್ ಚಂದ್ರಗೆ ಮಲೆನಾಡ ಹುಡುಗಿ ಜೊತೆ ಕಂಕಣ ಭಾಗ್ಯ]

ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಚೇತನ್ ಚಂದ್ರ ಮತ್ತು ಮಲೆನಾಡ ಹುಡುಗಿ ರಚನಾ ಹೆಗಡೆ ಜೊತೆ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿದ್ದವು. ಈ ಹಿನ್ನಲೆಯಲ್ಲಿ ಕುಟುಂಬದ ಹಿರಿಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿದೆ.

ಶಿವಮೊಗ್ಗದಲ್ಲಿ ನೆರವೇರಿದ ಮದುವೆ

ಶಿವಮೊಗ್ಗದಲ್ಲಿ ನೆರವೇರಿದ ಮದುವೆ

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇರುವ ಭದ್ರಕಾಳಿ ಕಲ್ಯಾಣ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಚೇತನ್ ಚಂದ್ರ ಮದುವೆ ನಡೆಯಿತು. ಈ ಶುಭ ಸಂದರ್ಭಕ್ಕೆ ಎರಡೂ ಕುಟುಂಬಗಳ ಬಂಧುಗಳು ಹಾಗೂ ಸ್ನೇಹಿತರು ಸಾಕ್ಷಿಯಾದ್ರು.

ಸರಳ ವಿವಾಹ!

ಸರಳ ವಿವಾಹ!

ನಟ ಚೇತನ್ ಚಂದ್ರ ತಮ್ಮ ವಿವಾಹವನ್ನ ಅತ್ಯಂತ ಸರಳವಾಗಿ ಮಾಡಿಕೊಂಡಿದ್ದಾರೆ. ಯಾವುದೇ ಆಡಂಬರ, ವೈಭವವಿಲ್ಲದೆ ಕುಟುಂಬಸ್ಥರ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ.

ಪ್ರೀತಿಸಿದ ಹುಡುಗಿ ಕೈ ಹಿಡಿದ ಚೇತನ್

ಪ್ರೀತಿಸಿದ ಹುಡುಗಿ ಕೈ ಹಿಡಿದ ಚೇತನ್

ಅಂದ್ಹಾಗೆ, ಚೇತನ್ ಚಂದ್ರ ಮದುವೆ ಆಗಿರುವ ರಚನಾ ಹೆಗಡೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ತಮ್ಮ ಮಲೆನಾಡಿನ ಮೂಲದ ರಚನಾ ಹೆಗಡೆ ಮತ್ತು ಚೇತನ್ ಚಂದ್ರ ಸ್ನೇಹಿತರು ಕೂಡ ಹೌದು.

ಸ್ಯಾಂಡಲ್ ವುಡ್ ನ ಹ್ಯಾಂಡ್ಸಮ್ ನಟ

ಸ್ಯಾಂಡಲ್ ವುಡ್ ನ ಹ್ಯಾಂಡ್ಸಮ್ ನಟ

'ಪಿಯುಸಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಚೇತನ್ ಚಂದ್ರ ಬಳಿಕ ನಟ ಯಶ್ ರೊಂದಿಗೆ 'ರಾಜಧಾನಿ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಹುಚ್ಚುಡುಗ್ರು', 'ಕುಂಭರಾಶಿ', 'ಪ್ಲಸ್', 'ಜಾತ್ರೆ', 'ಪ್ರೇಮಿಸಂ' ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರು.

English summary
Kannada Actor Chethan Chandra weds Rachana on Monday (April 17th) at Shivamogga.
Please Wait while comments are loading...

Kannada Photos

Go to : More Photos