»   » ವಿವಾದಗಳಿಗೆ ಕುಗ್ಗದೆ ಇಟಲಿಯತ್ತ ಪಯಣ ಬೆಳೆಸಿದ ದರ್ಶನ್

ವಿವಾದಗಳಿಗೆ ಕುಗ್ಗದೆ ಇಟಲಿಯತ್ತ ಪಯಣ ಬೆಳೆಸಿದ ದರ್ಶನ್

Posted by:
Subscribe to Filmibeat Kannada

ಕುಟುಂಬದ ಕಲಹಗಳಿಂದ ಒಂಚೂರು ವಿಚಲಿತರಾಗದೇ ಎಂದಿನಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೆ 'ಜಗ್ಗುದಾದ' ಶೂಟಿಂಗ್ ಸೆಟ್ ಗೆ ಹಾಜರಾಗುತ್ತಿದ್ದಾರೆ. ಬುಧವಾರ(ಮಾರ್ಚ್ 16) ದಿಂದ ಶೂಟಿಂಗ್ ಆರಂಭವಾಗಲಿದ್ದು, ದರ್ಶನ್ ಅವರ ಆಗಮನದಿಂದ ಶೂಟಿಂಗ್ ಸೆಟ್ ಗೂ ಕಳೆ ಬಂದಂತಾಗಿದೆ.

ದರ್ಶನ್ ಅವರ ಫ್ಯಾಮಿಲಿಯಲ್ಲಿ ಕೆಲವು ಕಲಹಗಳು ಉಂಟಾಗಿದ್ದರಿಂದ ರಾಘವೇಂದ್ರ ಹೆಗಡೆ ನಿರ್ದೇಶನದ 'ಜಗ್ಗುದಾದ' ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಎಪ್ರಿಲ್ 10ಕ್ಕೆ ಶೂಟಿಂಗ್ ಮುಗಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶಾಲ ಹೃದಯವುಳ್ಳವರಂತೆ]

ಇನ್ನು ಒಂದಿಷ್ಟು ಚಿತ್ರದ ಮಾತಿನ ಭಾಗ ಸೇರಿದಂತೆ ಹಾಡಿನ ಚಿತ್ರೀಕರಣ ನಡೆಯಬೇಕಿದೆ. ಅಂದಹಾಗೆ ದರ್ಶನ್ ಅವರ ಚಿತ್ರದ ಹಾಡುಗಳನ್ನು ಮಲೇಷ್ಯಾ ಅಥವಾ ಸ್ವಿಟ್ಜರ್ಲ್ಯಾಂಡ್ ನಲ್ಲಿ ಸಾಮಾನ್ಯವಾಗಿ ಶೂಟಿಂಗ್ ಮಾಡಿದರೆ, ಈ ಬಾರಿ ಸ್ವಲ್ಪ ಚೇಂಜ್ ಇರಲಿ ಅಂತ ಇಟಲಿಯತ್ತ ಪ್ರಯಾಣ ಬೆಳೆಸಲು ನಿರ್ದೇಶಕ ರಾಘವೇಂದ್ರ ಅವರು ಯೋಜನೆ ಹಾಕಿಕೊಂಡಿದ್ದಾರೆ.[ಮತ್ತೆ ಮೈಸೂರಿಗೆ ಧಾವಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

ಇನ್ನೇನು ವೀಸಾ ಸಿಕ್ಕಿದ ತಕ್ಷಣ ಮಾರ್ಚ್ ಕೊನೆಯ ವಾರದಲ್ಲಿ ಇಟಲಿಯತ್ತ 'ಜಗ್ಗುದಾದ' ಚಿತ್ರತಂಡ ಹಾರಲಿದೆ. ಅಲ್ಲಿ ಎಪ್ರಿಲ್ 6ರ ವರೆಗೆ ಹಾಡುಗಳ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾಗಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.

ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಕೂಡ ಬಹಳ ವಿಭಿನ್ನವಾಗಿ ಮಾಡಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ 5 ದಿನಗಳನ್ನು ಮೀಸಲಿಟ್ಟಿದ್ದಾರೆ. ಮಾರ್ಚ್ 21 ರಿಂದ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಲಿದೆ.[ಚಿತ್ರಗಳು ; ಯಾರ ಮದುವೆಯಲ್ಲಿ ದರ್ಶನ್ ಕುಣಿದು ಕುಪ್ಪಳಿಸಿದ್ರು?]

ಪಕ್ಕಾ ಕಾಮಿಡಿ ಚಿತ್ರವಾಗಿರುವ 'ಜಗ್ಗುದಾದ' ದಲ್ಲಿ ದರ್ಶನ್ ಅವರ ಜೊತೆ ರವಿಶಂಕರ್, ಸೃಜನ್ ಲೋಕೇಶ್ ಮತ್ತು ಅಚ್ಯುತ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಅವರ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಅವರು ಇದೇ ಮೊದಲ ಬಾರಿಗೆ ಡ್ಯುಯೆಟ್ ಹಾಡುತ್ತಿದ್ದಾರೆ.

English summary
After Controversy over his troubled Marriage Kannada Actor Darshan Back to shooting set his upcoming movie 'Jaggu Dada'. The movie is directed by Raghavendra Hegde.
Please Wait while comments are loading...

Kannada Photos

Go to : More Photos