»   » ಪರಭಾಷೆ ಚಿತ್ರಗಳ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ ದರ್ಶನ್

ಪರಭಾಷೆ ಚಿತ್ರಗಳ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ ದರ್ಶನ್

Posted by:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ನಮ್ಮ ನಟರ ಮಧ್ಯೆ ಸ್ಟಾರ್ ವಾರ್ ಇದೆ. ಬಾಕ್ಸ್ ಆಫೀಸ್ ನಲ್ಲಿ ನಮ್ಮ ನಟರೇ ಕಿತ್ತಾಡುತ್ತಾರೆ ಎಂಬ ಸಂಪ್ರದಾಯವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುರಿದು ಹಾಕಿದ್ದಾರೆ.

ಅಷ್ಟೇ ಅಲ್ಲದೇ, ಪರಭಾಷೆ ಚಿತ್ರಗಳಿಗೆ 'ಚಕ್ರವರ್ತಿ' ಬಹಿರಂಗವಾಗಿ ಸವಾಲೆಸೆದಿದ್ದಾರೆ. ಕಾಂಪಿಟೇಶನ್ ಅಂತ ಬಂದಾಗ 'ನಾವು-ನೀವಾ' ನೋಡೇ ಬಿಡೋಣ ಅಂತ ತೊಡೆ ತಟ್ಟಿ ಘರ್ಜಿಸಿದ್ದಾರೆ.['ಚಕ್ರವರ್ತಿ' ಬಗ್ಗೆ ಇದ್ದ ಡೌಟ್ ಕ್ಲಿಯರ್!]

ಹೌದು, ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ದಾಸ ದರ್ಶನ್ ಪರಭಾಷೆ ಚಿತ್ರಗಳಿಗೆ ಈ ಚಾಲೆಂಜ್ ಹಾಕಿದ್ದಾರೆ? ಮುಂದೆ ಓದಿ....

ಬಹಿರಂಗ ಸವಾಲೆಸೆದ ದರ್ಶನ್!

ಬಹಿರಂಗ ಸವಾಲೆಸೆದ ದರ್ಶನ್!

ಕನ್ನಡ ಚಿತ್ರಗಳು ಇಂದು ಪರಭಾಷೆ ಚಿತ್ರಗಳು ಜೊತೆ ಹೆಚ್ಚು ಕಾಂಪಿಟೇಶನ್ ಮಾಡಬೇಕಿದೆ. ನಮ್ಮ ರಾಜ್ಯದಲ್ಲಿ ಕನ್ನಡ ಚಿತ್ರಗಳಿಗಿಂತ ಹೊರಾಜ್ಯಗಳ ಚಿತ್ರಗಳು ಹೆಚ್ಚು ಬಿಡುಗಡೆಯಾಗುತ್ತಿವೆ. ಇದು ಕನ್ನಡ ಸಿನಿಮಾಗಳಿಗೆ ಹಿನ್ನಡೆಯಾಗಲು ಕಾರಣವಾಗುತ್ತಿದೆ. ಈ ಸಂಪ್ರದಾಯದ ವಿರುದ್ಧ ನಟ ದರ್ಶನ್ ಬಹಿರಂಗವಾಗಿ ಸವಾಲೆಸಿದಿದ್ದಾರೆ.[ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ']

ಕಾಂಪಿಟೇಶನ್ ಗೆ ನಾವು ರೆಡಿ!

ಕಾಂಪಿಟೇಶನ್ ಗೆ ನಾವು ರೆಡಿ!

'' ಕಾಂಪಿಟೇಶನ್ ಅಂತ ಬಂದ್ಮೇಲೆ ನಾವು ಕಾಂಪಿಟೇಶನ್ ಗೆ ರೆಡಿ. ಆದ್ರೆ, ನಮ್ಮ ಕಾಂಪಿಟೇಶನ್ ನಮ್ಮ ಚಿತ್ರಗಳ ಜೊತೆಯಲ್ಲಿ ಅಲ್ಲ. ಪರಭಾಷೆ ಚಿತ್ರಗಳ ಜೊತೆ ಎಂದು'' ನೇರವಾಗಿ ಸವಾಲೆಸಿದ್ದಿದ್ದಾರೆ.['ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ']

ನೀನಾ....ನಾನಾ....ನೋಡೋಣ!

ನೀನಾ....ನಾನಾ....ನೋಡೋಣ!

''ಈ ಸಲ ಕಾಂಪಿಟೇಶನ್ ನಲ್ಲಿ ನೀನಾ....ನಾನಾ ನೋಡೇ ಬಿಡೋಣ'' ಎಂದ ದರ್ಶನ್, 'ಚಕ್ರವರ್ತಿ' ಸಿನಿಮಾ ಪರಭಾಷೆ ಚಿತ್ರಗಳಿಗೆ ತಕ್ಕ ಉತ್ತರ ನೀಡಲಿದೆ ಎಂದು ಸಮರ್ಥಿಸಿಕೊಂಡರು.['ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!]

ನಮ್ಮ ಜೊತೆ ನಮ್ಮ ಜನ ಇದ್ದಾರೆ!

ನಮ್ಮ ಜೊತೆ ನಮ್ಮ ಜನ ಇದ್ದಾರೆ!

''ನಮಗೆ ನಮ್ಮ ಮೇಲೆ ಅಭಿಮಾನ ಇದೆ. ನಮ್ಮ ಜನತೆಗೆ ಕನ್ನಡದ ಮೇಲೆ ಅಭಿಮಾನ ಜಾಸ್ತಿಯಿದೆ. ನಿರೀಕ್ಷೆ ಅಂತ ಬಂದಾಗ, ಈ ಎಕ್ಸ್ ಪೆಕ್ಟೇಶನ್ ನ ನಾವು ಕಮ್ಮಿ ಮಾಡಲ್ಲ. ಪರಭಾಷೆ ಚಿತ್ರಗಳು ಎಷ್ಟೆ ಎಗರಾಡಿದ್ರು ಅವರಿಗೆ ಉತ್ತರ ಕೊಡೊಕೆ ಈ ಸಿನಿಮಾ ಸಾಕು'' ಎಂದಿದ್ದಾರೆ.[ಕರ್ನಾಟಕದಾಚೆಯೂ ಸುನಾಮಿ ಎಬ್ಬಿಸಲು 'ಚಕ್ರವರ್ತಿ' ರೆಡಿ!]

English summary
Kannada Actor Challenging Star Darshan Challenge to Other Industry Films
Please Wait while comments are loading...

Kannada Photos

Go to : More Photos