»   » ಛೇ...ಪತ್ನಿ-ಪುತ್ರನ ಬಗ್ಗೆ ಇದೆಂಥಾ ಮಾತು ಆಡಿಬಿಟ್ಟರು ನಟ ದರ್ಶನ್..!?

ಛೇ...ಪತ್ನಿ-ಪುತ್ರನ ಬಗ್ಗೆ ಇದೆಂಥಾ ಮಾತು ಆಡಿಬಿಟ್ಟರು ನಟ ದರ್ಶನ್..!?

Posted by:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ನೋವಿನಲ್ಲಿದ್ದಾರೆ ನಿಜ. ಸೆಲೆಬ್ರಿಟಿ ಆಗಿರುವ ಕಾರಣ ನಮ್ಮ-ನಿಮ್ಮೆಲ್ಲರಿಗಿಂತ ದರ್ಶನ್ ಹೆಚ್ಚು ಒತ್ತಡದಲ್ಲಿದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ.

ಎಲ್ಲರ ಮನೆ ದೋಸೆ ತೂತೇ. ಆದ್ರೆ, ಸಾಮಾಜಿಕ ಜವಾಬ್ದಾರಿ ಹೊತ್ತಿರುವ ನಟ ದರ್ಶನ್ ರವರ ಕೌಟುಂಬಿಕ ಕಲಹ ಬೀದಿ ರಂಪಾಟವಾಗಬಾರದಿತ್ತು ಅನ್ನೋದು ಅವರ ಅಭಿಮಾನಿಗಳ ಕಾಳಜಿ. [ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

ಅದರಲ್ಲೂ ಮಾಧ್ಯಮಗಳ ಮುಂದೆಯೇ ಪತ್ನಿ ವಿಜಯಲಕ್ಷ್ಮಿ ನಡತೆ ಬಗ್ಗೆ ಗಂಭೀರ ಆರೋಪ ಮಾಡಿರುವ ದರ್ಶನ್, ತಮ್ಮ ಮಗುವಿನ ಡಿ.ಎನ್.ಎ ಟೆಸ್ಟ್ ಬಗ್ಗೆ ಮಾತನಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂದೆ ಓದಿ.....[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ಪತ್ನಿ ವಿಜಯಲಕ್ಷ್ಮಿ ಮೇಲೆ ಕಿಡಿ ಕಿಡಿ

ಪತ್ನಿ ವಿಜಯಲಕ್ಷ್ಮಿ ಮೇಲೆ ಕಿಡಿ ಕಿಡಿ

ಪತ್ನಿ ವಿಜಯಲಕ್ಷ್ಮಿ ಮೇಲೆ ಕಿಡಿಕಾರುತ್ತಾ ನಿನ್ನೆ ಸುದ್ದಿ ವಾಹಿನಿ ಜೊತೆ ಮಾತನಾಡುವಾಗ, ತಮ್ಮ ಮಗು ತಮಗೆ ಜನಿಸಿದ್ದು ಅಲ್ಲ ಅಂತ ನಟ ದರ್ಶನ್ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ರು. [ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

ಪತ್ನಿಗೆ ದರ್ಶನ್ ಸವಾಲು

ಪತ್ನಿಗೆ ದರ್ಶನ್ ಸವಾಲು

ಪತ್ನಿ ವಿಜಯಲಕ್ಷ್ಮಿ ಬಾಯ್ ಫ್ರೆಂಡ್ ವಿಚಾರದ ಕುರಿತು ಮಾತನಾಡುವಾಗ, ತಮ್ಮ ಮಗುವನ್ನೇ ಡಿ.ಎನ್.ಎ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಪತ್ನಿ ವಿಜಯಲಕ್ಷ್ಮಿಗೆ ಕನ್ನಡ ನ್ಯೂಸ್ ಚಾನೆಲ್ ಒಂದರಲ್ಲಿ ನಿನ್ನೆ ದರ್ಶನ್ ಸವಾಲು ಹಾಕಿದ್ದರು. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ಪ್ರತಿ ಸವಾಲು ಹಾಕಿದ ಪತ್ನಿ ವಿಜಯಲಕ್ಷ್ಮಿ

ಪ್ರತಿ ಸವಾಲು ಹಾಕಿದ ಪತ್ನಿ ವಿಜಯಲಕ್ಷ್ಮಿ

ದರ್ಶನ್ ರವರ ಮಾತಿಗೆ ಕೊಂಚ ಸಿಡುಕಿನಿಂದಲೇ ಅದೇ ವಾಹಿನಿಗೆ ಪ್ರತಿಕ್ರಿಯೆ ನೀಡಿದ ವಿಜಯಲಕ್ಷ್ಮಿ 'ಡಿ.ಎನ್.ಎ ಪರೀಕ್ಷೆಗೆ ಸಿದ್ಧ' ಅಂತ ಪ್ರತಿ ಸವಾಲು ಹಾಕಿದ್ದಾರೆ. ['ಗಲಾಟೆ ಸಂಸಾರ'; ದರ್ಶನ್ ಬೆಟ್ಟು ಮಾಡುತ್ತಿರುವ 'ಅವರು' ಯಾರು?]

ಇದೆಲ್ಲಾ ಯಾಕೆ?

ಇದೆಲ್ಲಾ ಯಾಕೆ?

ತಮ್ಮ ಮಗ ವಿನೀಶ್ ಬಗ್ಗೆ ಅಪಾರ ಪ್ರೀತಿ-ಕಾಳಜಿ ವ್ಯಕ್ತಪಡಿಸುವ ನಟ ದರ್ಶನ್, ಕೋಪದಲ್ಲಿ ಹೀಗೆಲ್ಲಾ ಮಾತನಾಡಿರುವುದು ಅಭಿಮಾನಿಗಳ ಮನಸ್ಸಲ್ಲಿ ನೋವುಂಟು ಮಾಡಿರುವುದು ಸತ್ಯ. [ಹೆಂಡತಿಯನ್ನು ಕೀಳು ಭಾಷೆಯಲ್ಲಿ ನಿಂದಿಸುವ "ದರ್ಶನ್" ಆಡಿಯೋ ಕ್ಲಿಪ್]

ಆಗಿದ್ದೆಲ್ಲಾ ಆಯ್ತು!

ಆಗಿದ್ದೆಲ್ಲಾ ಆಯ್ತು!

ಮಾಧ್ಯಮಗಳ ಮುಂದೆ ಇದ್ದ ಸಿಟ್ಟನ್ನೆಲ್ಲಾ ಹೊರಹಾಕಿರುವ ನಟ ದರ್ಶನ್ ಇಂದು ಎಸಿಪಿ ಕಛೇರಿಗೆ ಭೇಟಿ ಕೊಟ್ಟು ಪೊಲೀಸರಿಗೆ ವಿವರಣೆ ನೀಡಿದರು. ['ಇನ್ಮುಂದೆ ಪತ್ನಿ ಜೊತೆ ಗಲಾಟೆ ಮಾಡಲ್ಲ' ಎಂದ ನಟ ದರ್ಶನ್]

'ಇನ್ಮುಂದೆ ಗಲಾಟೆ ಮಾಡಲ್ಲ'

'ಇನ್ಮುಂದೆ ಗಲಾಟೆ ಮಾಡಲ್ಲ'

'ಇನ್ಮುಂದೆ ಪತ್ನಿ ಜೊತೆ ಗಲಾಟೆ ಮಾಡಲ್ಲ. ಕೌಟುಂಬಿಕ ಸಮಸ್ಯೆಯನ್ನ ಅಂಬರೀಶ್ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತೇವೆ'' ಅಂತ ನಟ ದರ್ಶನ್ ಪೊಲೀಸರಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. [ಕೌಟುಂಬಿಕ ಕಲಹ ; ದರ್ಶನ್ ಕಿವಿ ಹಿಂಡಿದ 'ಅಪ್ಪಾಜಿ' ಅಂಬರೀಶ್]

ಇನ್ನಾದರೂ ಸುಖ ಸಂಸಾರ ನಡೆಸಲಿ..

ಇನ್ನಾದರೂ ಸುಖ ಸಂಸಾರ ನಡೆಸಲಿ..

ಆಡಿರುವ ಮಾತುಗಳನ್ನ ಈಗ ವಾಪಸ್ ಪಡೆಯಲು ಸಾಧ್ಯವಿಲ್ಲ. ಆದ್ರೆ, ಆಗಿರುವುದನ್ನೆಲ್ಲಾ ಮರೆತು ಕೂಡಿ ಬಾಳಿದರೆ ಸ್ವರ್ಗ ಸುಖ ಸಾಧ್ಯ. ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಇದೇ ಸಲಹೆ ನೀಡಿದ್ದಾರೆ. ದರ್ಶನ್-ವಿಜಯಲಕ್ಷ್ಮಿ ಮನಸ್ಸು ಮಾಡಿದರೆ ಅಸಾಧ್ಯ ಯಾವುದೂ ಇಲ್ಲ. ಅಭಿಮಾನಿಗಳು ಎದುರು ನೋಡುತ್ತಿರುವುದು ಇದನ್ನೇ..ಅಲ್ಲವೇ?

English summary
While speaking to the media, Kannada Actor Darshan has demanded his son Vineesh's DNA test. Annoyed with Darshan's statement, Wife Vijayalakshmi has agreed for the medical procedure.
Please Wait while comments are loading...

Kannada Photos

Go to : More Photos