twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಸ್ಮಾರಕ ಸ್ಥಳಾಂತರ ಧರಣಿ ಬಗ್ಗೆ ದರ್ಶನ್ ಪ್ರತಿಕ್ರಿಯೆ

    By Suneetha
    |

    ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಾಂತರದ ಬಗ್ಗೆ ವಿಷ್ಣು ಅಭಿಮಾನಿಗಳು ಬೃಹತ್ ಪ್ರತಿಭಟನೆ ಕೈಗೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಯಾರೊಬ್ಬರೂ ತುಟಿಪಿಟಕ್ ಅನ್ನುತ್ತಿಲ್ಲ ಅಂತ ಎಲ್ಲರೂ ಮಾತನಾಡಿಕೊಂಡರು.

    ಅದಕ್ಕೆ ಸರಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ವಿಷ್ಣು ಸ್ಮಾರಕ ಸ್ಥಳಾಂತರದ ಬಗ್ಗೆ ಮಾತನಾಡಿ ಎಲ್ಲರ ಬಾಯಿಗೆ ಬೀಗ ಜಡಿದಿದ್ದರು.[ವಿಷ್ಣು ಸ್ಮಾರಕ ಸ್ಥಳಾಂತರ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸುದೀಪ್]

    Kannada Actor Darshan Tweets about Dr.Vishnuvardhan memorial

    ಇದೀಗ ವಿಷ್ಣು ಅಭಿಮಾನಿಗಳ ಅನಿರ್ದಿಷ್ಟಾವಧಿ ಧರಣಿಗೆ ನಟ ದರ್ಶನ್ ಅವರು ಸ್ಪಂದಿಸಿ, ಅಭಿಮಾನಿಗಳ ಹೋರಾಟಕ್ಕೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಮುಕ್ತ ಬೆಂಬಲ ಸೂಚಿಸಿದ್ದಾರೆ.

    Kannada Actor Darshan Tweets about Dr.Vishnuvardhan memorial

    "ಒಳ್ಳೆಯ ವಿಷಯಕ್ಕಾಗಿ ಹೋರಾಡುತ್ತಿರುವ ವಿಷ್ಣುದಾದಾ ಅಭಿಮಾನಿಗಳಿಗೆ ನನ್ನ ಸಹಕಾರ ಸದಾ ಕಾಲ ಇದ್ದೇ ಇರುತ್ತದೆ. ಎಲ್ಲರೂ ಜೊತೆಯಾಗಿಯೇ ಸಾಗೋಣ. ದೈಹಿಕವಾಗಿ ಧರಣಿ ಸ್ಥಳಕ್ಕೆ ಬರಲಿಲ್ಲ ಎಂದ ಮಾತ್ರಕ್ಕೆ ಅಭಿಮಾನ-ಬೆಂಬಲ ಇಲ್ಲ ಎಂದಲ್ಲ. ಎಲ್ಲಾ ಒಳ್ಳೆಯದಾಗ್ಲಿ. ಸುಖಾಂತ್ಯ ಕಾಣಲಿ" ಎಂದು ಚಾಲೆಂಜಿಂಗ್ ಸ್ಟಾರ್ ವಿಷ್ಣುಸೇನಾ ಅಭಿಮಾನಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    "ನನ್ನ ಸಹಕಾರ ವಿಷ್ಣುದಾದಾ ಅಭಿಮಾನಿಗಳಿಗೆ ಯಾವಾಗಲೂ ಇರುತ್ತದೆ. ಒಳ್ಳೆ ಕೆಲಸಕ್ಕೆ, ಸರಿಯಾದ ಸಮಯದಲ್ಲಿ ಯಾರು ಹೋರಾಟ ಮಾಡುತ್ತಾರೋ ಅವರ ಜೊತೆ ಯಾವಾಗಲೂ ನಾನಿರುತ್ತೇನೆ. ನಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಲು ಸಿದ್ಧ" ಎಂದು ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ಒಟ್ನಲ್ಲಿ ಮೊದಲು ಸುದೀಪ್ ಇದೀಗ ದರ್ಶನ್ ಅವರು ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದರಿಂದ ವಿಷ್ಣುಸೇನಾ ಅಭಿಮಾನಿಗಳಿಗೆ ಆನೆ ಬಲ ಬಂದಂತಾಗಿದ್ದು, ಸಾಹಸ ಸಿಂಹ ವಿಷ್ಣು ಅವರ ಸ್ಮಾರಕವನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳುವಲ್ಲಿ ಅಭಿಮಾನಿಗಳು ಯಶಸ್ವಿಯಾಗಲಿ ಅಂತ ನಾವೂ ಹಾರೈಸೋಣ.[ವಿಷ್ಣು ಸ್ಮಾರಕ ಸ್ಥಳಾಂತರ ಗುಲ್ಲು; ಅಭಿಮಾನಿಗಳ ಬೃಹತ್ ಪ್ರತಿಭಟನೆ]

    English summary
    Kannada Actor Darshan Tweets about against the shift of Dr.Vishnuvardhan memorial from Abhiman Studio, Bengaluru to Mysore (Mysuru).
    Thursday, June 16, 2016, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X