»   » ಶೀರ್ಷಿಕೆಯ ವಿವಾದದಡಿಯಲ್ಲಿ ಶೆಟ್ಟಿಯ ಥಗ್ಸ್ ಆಫ್ ಮಾಲ್ಗುಡಿ

ಶೀರ್ಷಿಕೆಯ ವಿವಾದದಡಿಯಲ್ಲಿ ಶೆಟ್ಟಿಯ ಥಗ್ಸ್ ಆಫ್ ಮಾಲ್ಗುಡಿ

Written by: ಜೀವನರಸಿಕ
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ರಕ್ಷಿತ್ ಶೆಟ್ಟಿ ನಿರ್ದೇಶನದ ಸಿನಿಮಾ ಮುಂದಿನ ವರ್ಷ ಆರಂಭವಾಗುತ್ತೆ ಅನ್ನೋ ಸುದ್ದಿ ಸಿಕ್ಕಿದೆ. ಚಿತ್ರದ ಬಗ್ಗೆ ಈಗಾಗಲೇ ಸಣ್ಣದಾಗಿ ಚರ್ಚೆಗಳು ಶುರುವಾಗಿದೆ.

ಚಿತ್ರದಲ್ಲಿ ಸುದೀಪ್ ದರೋಡೆಕೋರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಈಗ ಚಿತ್ರ ನೋಡಿದ ನಂತ್ರ ಕಿಚ್ಚನನ್ನ ವಿಲನ್ ಶೇಡ್ನಲ್ಲಿ ತೋರಿಸಿದ್ರೆ ಮಜಾ ಇರುತ್ತೆ ಅಂತ ಡಿಸೈಡ್ ಮಾಡಿದ ರಕ್ಷಿತ್ ಶೆಟ್ಟಿ ಅವರಿಗೆ ನೆನಪಾಗಿದ್ದು ಈ ಟೈಟಲ್.[ಸುದೀಪ್ ಗಾಗಿ ಚೋರರ ಕಥೆ ಹೆಣೆಯುತ್ತಿರುವ ರಕ್ಷಿತ್]

ಕಿಚ್ಚನ ಈ ಸಿನಿಮಾ ಶುರುವಾಗೋಕೆ ಒಂದು ತಡೆ ಖಂಡಿತಾ ಇದೆ. ಹಾಂ ಹೌದಾ ಚಿತ್ರ ಶುರುವಾಗೋಕೆ ಇನ್ನೂ ಆರು ತಿಂಗಳು ಇರೋವಾಗ್ಲೆ ಇದೆಂಥಾ ವಿವಾದ? ಕಿಚ್ಚನ ಮೂಲಕ ಮಾಲ್ಗುಡಿಯ ದರೋಡೆಕೋರರ ಕಾಲ್ಪನಿಕ ಕಥೆಯನ್ನ ತೆರೆಗೆ ತರೋ ರಕ್ಷಿತ್ ಶೆಟ್ಟಿಯವರಿಗೆ ಇರೋ ಸಮಸ್ಯೆ ಏನು ಅನ್ನೋದನ್ನ ತಿಳಿಯೋದಕ್ಕೆ ಈ ಸ್ಲೈಡ್ ನೋಡಿ.

ಮಾಲ್ಗುಡಿ ಬಹುಭಾಷಾ ಚಿತ್ರ ?

ಥಗ್ಸ್ ಆಫ್ ಮಾಲ್ಗುಡಿಯನ್ನ ಕನ್ನಡದ ಜೊತೆ ತಮಿಳು ತೆಲುಗು ಮತ್ತು ಹಿಂದಿಯಲ್ಲೂ ತೆರೆಗೆ ತರೋ ಯೋಚನೆ ರಕ್ಷಿತ್ ಶೆಟ್ಟಿಯವ್ರ ಮನಸ್ಸಲ್ಲಿದೆ. ಇದಕ್ಕೆ ಕಾರಣ ಕಿಚ್ಚನಿಗಿರೋ ಮಾರ್ಕೆಟ್ ರೇಟ್ ಮತ್ತು ಮಾಲ್ಗುಡಿ ಅನ್ನೋ ಟೈಟಲ್.

ಶಂಕರಣ್ಣನ ಮಾಲ್ಗುಡಿಗೆ ಸಂಬಂಧವಿಲ್ಲ

ಇಲ್ಲಿ ಮಾಲ್ಗುಡಿ ಟೈಟಲ್ ಅಟ್ರ್ಯಾಕ್ಷನ್ ಅಷ್ಟೇ. ಶಿವಾಜಿನಗರ, ಮೆಜೆಸ್ಟಿಕ್, ಮಂಡ್ಯ ತರಹ. ಮಾಲ್ಗುಡಿಯಲ್ಲಿ ನಡೆದ ಘಟನೆ ಇದಲ್ಲ. ಇದೊಂದು ಕಾಲ್ಪನಿಕ ದರೋಡೆಕೋರರ ದಂಡು. ಅದ್ರ ನಾಯಕ ಕಿಚ್ಚ.

ಪುಲಿಯ ವಿಲನ್ ಹವಾ

ಕಿಚ್ಚ ತಮಿಳಿನ ಇಳೆಯದಳಪತಿ ವಿಜಯ್ ಸಿನಿಮಾ ಪುಲಿಯಲ್ಲಿ ವಿಲನ್ ಆಗಿರೋ ಕಾರಣಕ್ಕೆ ಸಧ್ಯ ಭರ್ಜರಿ ಸುದ್ದಿಯಲ್ಲಿದ್ದಾರೆ. ಟೀಸರ್ನಲ್ಲಿ 5 ಸೆಕೆಂಡ್ ಕಾಣಿಸಿಕೊಳ್ಳೋ ಕಿಚ್ಚು 25 ಸೆಕೆಂಡ್ ಕಾಣಿಸಿಕೊಳ್ಳೋ ವಿಜಯ್ಗಿಂತ ಮಿಂಚ್ತಿದ್ದಾರೆ. ಇಂತಹಾ ಹೈಲೈಟ್ ಕಿಚ್ಚನನ್ನ ವಿಲನ್ ಶೇಡ್ನಲ್ಲಿ ನೋಡೋಕೆ ಥ್ರಿಲ್ ಕೊಡಲಿವೆ

ಮಾಲ್ಗುಡಿ ಅರ್ಜುನ್ ಕೈಯ್ಯಲ್ಲಿದೆ

ಆದ್ರೆ ಮಾಲ್ಗುಡಿ ಅನ್ನೋ ಟೈಟಲ್ ಸದ್ಯ ನಿರ್ದೇಶಕ ಏಪಿ ಅರ್ಜುನ್ ಕೈಯ್ಯಲ್ಲಿದೆ. ಅರ್ಜುನ್ ಮಾಲ್ಗುಡಿ ಅನ್ನೋ ಟೈಟಲ್ನಲ್ಲಿ ಸಿನಿಮಾ ಮಾಡೋ ಪ್ಲಾನ್ನಲ್ಲಿದ್ದಾರೆ. ಇದ್ರಿಂದ ಕಿಚ್ಚನ ಸಿನಿಮಾಗೆ ಟೈಟಲ್ ಸಮಸ್ಯೆ ಬಂದ್ರೂ ಬರಬಹುದು.

ಕಿಚ್ಚ ಎಂಟ್ರಿಯಾದ್ರೆ ಸಮಸ್ಯೆ ಇಲ್ಲ

ಆದ್ರೆ ಸ್ವತಃ ಕಿಚ್ಚನೇ ಟೈಟಲ್ಗಾಗಿ ಅಖಾಡಕ್ಕಿಳಿದ್ರೆ ಟೈಟಲ್ ಸಿಗೋದು ಕಷ್ಟವಲ್ಲ. ಇನ್ನು ಈಗ ಅಡ್ಡ-ಪ್ರೇಮ್ ಅಡ್ಡಾ ಅನ್ನೋ ತರಹದ ಮಿಕ್ಸೆಡ್ ಟೈಟಲ್ಗಳ ಸಿನಿಮಾ ಬರ್ತಾನೇ ಇದ್ದು ವಿವಾದ ಆಗೋ ಸಾಧ್ಯತೆ ಕಡಿಮೆ

ಥಗ್ಸ್ ಆಫ್ ಮಾಲ್ಗುಡಿ ಬೇಡ

ಇಂಗ್ಲೀಷ್ನಲ್ಲಿ ಥಗ್ಸ್ ಅಂದ್ರೆ ಅಲ್ಪ ಸ್ವಲ್ಪ ಇಂಗ್ಲೀಷ್ ಬರೋರಿಗೆ ಅರ್ಥವಾಗೋದು ಕಷ್ಟ. ಹಾಗಾಗಿ ಈ ಥಗ್ಸ್ ಬಿಟ್ಟು ಸೊಗಸಾಗಿ ಕನ್ನಡದಲ್ಲಿ `ಮಾಲ್ಗುಡಿಯ ಮಾಲ್ಗಳ್ಳರು' (ಮಾಲುಕಳ್ಳರು) ಅಂತಿಟ್ರೆ ಸೂಪರ್ ಅಲ್ವಾ ಅನ್ನೋದು ನಮ್ಮ ಸಲಹೆ

English summary
Kannada Actor-Director Rakshit Shetty Begins work on his next film 'Thugs of Malgudi' with Kichcha Sudeep.
Please Wait while comments are loading...

Kannada Photos

Go to : More Photos