»   » ಗೋಲ್ಡನ್ ಸ್ಟಾರ್ ತೋಳೊಳಗೆ ಮರಿ ಲಿಟಲ್ ಸ್ಟಾರ್...

ಗೋಲ್ಡನ್ ಸ್ಟಾರ್ ತೋಳೊಳಗೆ ಮರಿ ಲಿಟಲ್ ಸ್ಟಾರ್...

Posted by:
Subscribe to Filmibeat Kannada

ಭರವಸೆ ಚಾಟಿ ಹಿಡಿದು ಬುಗುರಿ ಆಡಿಸಲು ನಿಂತಿದ್ದ ಗೋಲ್ಡನ್ ಸ್ಟಾರ್ ಗೆ ಭರ್ಜರಿ ಧಮಾಕಾ ಒದಗಿ ಬಂದಿದೆ. ವರಮಹಾಲಕ್ಷ್ಮಿ ಹಬ್ಬದ ಹೊಸ್ತಿಲಲ್ಲಿ ಗಣೇಶ್ ಅವರ ಮನೆಗೆ ಮರಿ ಗಣೇಶನ ಆಗಮನವಾಗಿದೆ.

ಮಳೆ ಹುಡುಗ ಗಣೇಶ್ ಮತ್ತು ಶಿಲ್ಪಾ ದಂಪತಿಗೆ ಗಂಡು ಮಗು ಜನನವಾಗಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿನ ಜಯನಗರದಲ್ಲಿರುವ ಕ್ಲೌಡ್ 9 ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವಿಗೆ ಶಿಲ್ಪಾ ಗಣೇಶ್ ಜನ್ಮ ನೀಡಿದ್ದಾರೆ.

ganesh

ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಅಂತ ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಗಣೇಶ್ ಗೆ ಮಗು ಜನಿಸಿರುವ ವಿಷಯ ಗೊತ್ತಾಗಿಲ್ಲ. 'ಮುಂಗಾರು ಮಳೆ-2' ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿರುವ ಗಣೇಶ್ ಫೋನ್ ನಾಟ್ ರೀಚಬಲ್ ಆಗಿದೆ. ನಾಳೆ ಸಂಜೆ ಗಣೇಶ್ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. [ಗೋಲ್ಡನ್ ಸ್ಟಾರ್ ಗಣೇಶ್ ಮನೆ ಹೊಸ ಅತಿಥಿ ರಣ್ಬೀರ್!]

ಇತ್ತೀಚೆಗಷ್ಟೆ ತಮ್ಮ ಏಳನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಗಣೇಶ್-ಶಿಲ್ಪಾ ದಂಪತಿ ಆಚರಿಸಿಕೊಂಡಿದ್ದರು. ಗಣೇಶ್ ಮತ್ತು ಶಿಲ್ಪಾಗೆ ಐದು ವರ್ಷದ ಚಾರಿತ್ರ್ಯ ಎಂಬ ಮಗಳಿದ್ದಾಳೆ.

English summary
Kannada Actor Ganesh and his wife Shilpa are blessed with a baby boy today (August 27th).
Please Wait while comments are loading...

Kannada Photos

Go to : More Photos