»   » 'ಬಾಹುಬಲಿ-2' ಚಿತ್ರದಲ್ಲಿ ಸುದೀಪ್ ನಟಿಸಿದ್ದಾರಾ? ಅವರೇ ಕೊಟ್ಟ ಉತ್ತರ..

'ಬಾಹುಬಲಿ-2' ಚಿತ್ರದಲ್ಲಿ ಸುದೀಪ್ ನಟಿಸಿದ್ದಾರಾ? ಅವರೇ ಕೊಟ್ಟ ಉತ್ತರ..

Posted by:
Subscribe to Filmibeat Kannada

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರದಲ್ಲಿ ಇತ್ತೀಚೆಗೆ ಶಾರುಖ್ ಖಾನ್ ಗೆಸ್ಟ್ ರೋಲ್ ನಲ್ಲಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಊಹಾಪೋಹಗಳಿಗೆ ಸ್ವತಃ ಚಿತ್ರತಂಡ ಪ್ರತಿಕಿಯಿಸಿ ಇದೆಲ್ಲಾ ರೂಮರ್ಸ್ ಎಂದು ಹೇಳಿತ್ತು. ಆದರೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ 'ಬಾಹುಬಲಿ-2' ಚಿತ್ರದಲ್ಲಿ ಅಭಿನಯಿಸಿದ್ದಾರಾ? ಅಥವಾ ಇಲ್ಲವಾ? ಎಂಬುದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ.[ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2']

2015 ರಲ್ಲಿ ಬಿಡುಗಡೆ ಆಗಿದ್ದ 'ಬಾಹುಬಲಿ-ದಿ ಬಿಗಿನಿಂಗ್' ಚಿತ್ರದಲ್ಲಿ ಕಿಚ್ಚ ಸುದೀಪ್ 'ಅಸ್ಲಾಂ ಖಾನ್' ಎಂಬವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿಯೇ ಸುದೀಪ್ 'ಬಾಹುಬಲಿ-ದಿ ಕನ್ ಕ್ಲೂಶನ್' ನಲ್ಲಿಯೂ ಕಾಣಿಸಿಕೊಳ್ಳಬಹುದಾ? ಎಂಬ ಕುತೂಹಲ ಸಾಮಾನ್ಯವಾಗಿ ಸಿನಿ ಪ್ರಿಯರಲ್ಲಿ ಕಾಡುತ್ತಿತ್ತು. ಆದರೆ ಈ ಕ್ಯೂರಿಯಾಸಿಟಿಗೆಲ್ಲಾ ಸ್ವತಃ ಕಿಚ್ಚ ಸುದೀಪ್ ಅವರೇ ಬ್ರೇಕ್ ಹಾಕಿದ್ದಾರೆ.

ವಿಶೇಷ ಪಾತ್ರದಲ್ಲಿ ಮಿಂಚಿದ್ದ ಸುದೀಪ್

ವಿಶೇಷ ಪಾತ್ರದಲ್ಲಿ ಮಿಂಚಿದ್ದ ಸುದೀಪ್

ಎಸ್ ಎಸ್ ರಾಜಮೌಳಿ ನಿರ್ದೇಶನ 'ಈಗ' ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಟಾಲಿವುಡ್ ನಲ್ಲಿ ಸುದೀಪ್ ಮಿಂಚಿದ್ದರು. ತಮ್ಮ ಎರಡನೇ ತೆಲುಗು ಚಿತ್ರದಲ್ಲೂ ರಾಜಮೌಳಿ ಅವರ ಡೈರಕ್ಷನ್ ನಲ್ಲೇ ಕಾಣಿಸಿಕೊಂಡ ಸುದೀಪ್, 'ಬಾಹುಬಲಿ' ಯಲ್ಲಿ ಪರ್ಷಿಯಾದ ಯೋಧ 'ಅಸ್ಲಾಂ ಖಾನ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿದ್ದ ಸುದೀಪ್ ಪಾತ್ರ

ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿದ್ದ ಸುದೀಪ್ ಪಾತ್ರ

ಸುದೀಪ್ 'ಬಾಹುಬಲಿ' ಚಿತ್ರದಲ್ಲಿ 'ಅಸ್ಲಾಂ ಖಾನ್' ಪಾತ್ರದಲ್ಲಿ ಕತ್ತಿ ಹಿಡಿದು ಕಟ್ಟಪ್ಪನ ಜೊತೆ ತೋರಿಸಿದ ಕತ್ತಿ ವರಸೆ ಅಭಿಮಾನಿಗಳಲ್ಲಿ ಮೈನವಿರೇಳಿಸಿತ್ತು. ಹೀಗಾಗಿಯೇ ಕರ್ನಾಟಕದಲ್ಲಿ ಮಾತ್ರವಲ್ಲದೇ ಟಾಲಿವುಡ್ ನಲ್ಲೂ 'ಅಸ್ಲಾಂ ಖಾನ್' ಪಾತ್ರದ ಸುದೀಪ್ 'ಬಾಹುಬಲಿ-2' ಚಿತ್ರದಲ್ಲೂ ಕಾಣಿಸಿಕೊಳ್ಳಬಹುದಾ ಎಂಬ ಕುತೂಹಲ ಸಾಮಾನ್ಯವಾಗೇ ಎಲ್ಲರಲ್ಲೂ ಇತ್ತು. ಈ ಕ್ಯೂರಿಯಾಸಿಟಿಗೆ ಈಗ ಸುದೀಪ್ ಬ್ರೇಕ್ ಹಾಕಿದ್ದಾರೆ.

ಸುದೀಪ್ ಹೇಳಿದ್ದೇನು?

ಸುದೀಪ್ ಹೇಳಿದ್ದೇನು?

'ಬಾಹುಬಲಿ-ದಿ ಕನ್ ಕ್ಲೂಶನ್' ನಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರಬಹುದಾ ಎಂದು ಸಿನಿ ಪ್ರಿಯರಲ್ಲಿ ಕಾಡುತ್ತಿದ್ದ ಪ್ರಶ್ನೆಗೆ, ಸುದೀಪ್ ಅವರೇ ಉತ್ತರಿಸಿದ್ದು, ತಾವು 'ಬಾಹುಬಲಿ-2' ಚಿತ್ರದಲ್ಲಿ ನಟಿಸಿಲ್ಲ ಎಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಅಭಿಮಾನಿಗಳ ಅಭಿಮಾನಿ ಆಸೆ..

ಅಭಿಮಾನಿಗಳ ಅಭಿಮಾನಿ ಆಸೆ..

"ಅಭಿಮಾನಿ ಆಗಿ ನಾನು ಸಹ 'ಬಾಹುಬಲಿ-2' ಸಿನಿಮಾ ನೋಡಲು ನಿರೀಕ್ಷಿಸುತ್ತಿದ್ದೇನೆ' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

'ಬಾಹುಬಲಿ-2' ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?

'ಬಾಹುಬಲಿ-2' ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?

'ಬಾಹುಬಲಿ-ದಿ ಕನ್ ಕ್ಲೂಶನ್' ಸಿನಿಮಾ ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಅನುಷ್ಕಾ ಶೆಟ್ಟಿ, ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾ ಕೃಷ್ಣ ಮತ್ತು ಮುಂತಾದವರ ತಾರಾಬಳಗ ಇದೆ.

English summary
Kannada Actor Kiccha Sudeep has confirmed, he is not part of the Telugu film 'Baahubali-The Conclusion'.
Please Wait while comments are loading...

Kannada Photos

Go to : More Photos