»   » ಲೀಲಾ ಡಾರ್ಲಿಂಗ್ ಮಯೂರಿಯ ತೆಲುಗು ಫಿಲಂ ಶೂಟಿಂಗ್ ಚಿತ್ರಗಳು

ಲೀಲಾ ಡಾರ್ಲಿಂಗ್ ಮಯೂರಿಯ ತೆಲುಗು ಫಿಲಂ ಶೂಟಿಂಗ್ ಚಿತ್ರಗಳು

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಲೀಲಾ ಡಾರ್ಲಿಂಗ್ ಅಂತಾನೇ ಫೇಮಸ್ ಆಗಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಖ್ಯಾತಿಯ ಅಶ್ವಿನಿ ಅಲಿಯಾಸ್ ಮಯೂರಿಗೆ ಇತ್ತೀಚೆಗೆ ಚಿತ್ರರಂಗದಲ್ಲಿ ಸಖತ್ ಡಿಮಾಂಡ್ ಇದೆ.

ಅವರ ಅಭಿನಯದ ಮೊದಲ ಚಿತ್ರ 'ಕೃಷ್ಣಲೀಲಾ' ಬಾಕ್ಸಾಫೀಸ್ ಹಿಟ್ ಕಂಡಿದ್ದೇ ತಡ ಮಯೂರಿಗೆ ಇದೀಗ ಪರಬಾಷೆಗಳಿಂದ ಕೂಡ ಆಫರ್ ಬರೋಕೆ ಪ್ರಾರಂಭವಾಗಿದೆ.

ಇದೀಗ ಮಯೂರಿ ಅವರು ಇನ್ನೂ ಹೆಸರಿಡದ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಫಿಲಂ ಮೇಕರ್ ಶಿವಗಣಪತಿ ನಿರ್ದೇಶನ ಮಾಡುತ್ತಿರುವ ತೆಲುಗು ಚಿತ್ರವೊಂದರಲ್ಲಿ ಸಖತ್ ಸ್ಟಂಟ್ಸ್ ಗಳನ್ನು ಕೂಡ ಮಾಡಲಿದ್ದಾರಂತೆ [ತಮಿಳು-ತೆಲುಗಿನಲ್ಲಿ 'ಕೃಷ್ಣಲೀಲಾ' ರೀಮೇಕ್ ಪಕ್ಕಾ!]

Kannada actor Mayuri busy in new Tamil movie Shooting

ಈಗಾಗಲೇ ಫೈಟ್, ಸ್ಟಂಟ್ ಗಳಿಗೆ ತಯಾರಿ ನಡೆಸುತ್ತಿರುವ ಮಯೂರಿ ಸದ್ಯಕ್ಕೆ ಹೈದರಾಬಾದ್ ನ ಕಾಡೊಂದರಲ್ಲಿ ಚಿತ್ರದ ಶೂಟಿಂಗ್ ಮಾಡುತ್ತಿರುವ ಫೋಟೋಗಳನ್ನು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ. ['ಲೀಲಾ ಡಾರ್ಲಿಂಗ್' ಮಯೂರಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿ]

ಫೋಟೋ ನೋಡುತ್ತಿದ್ದಂತೆ ಈ ಸಲ ಮಯೂರಿ ಫೈಟ್ ಮಾಡೋದು ಗ್ಯಾರಂಟಿ ಅಂತ ಅನಿಸುತ್ತಿದೆ. ವಿಶೇಷವಾಗಿ ಈ ಚಿತ್ರ ಮಹಿಳಾ ಪ್ರಧಾನ ಕಥೆಯನ್ನು ಹೊಂದಿದೆಯಂತೆ. ಮಾತ್ರವಲ್ಲದೇ ನಿಜ ಜೀವನದಲ್ಲಾದ ಘಟನೆಯನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರಂತೆ ನಿರ್ದೇಶಕ ಶಿವಗಣಪತಿ.

ಈಗಾಗಲೇ ನಾಗತಿಹಳ್ಳಿ ಚಂದ್ರಶೇಖರ್ ಅವರ ಚಿತ್ರದಲ್ಲೂ ಬ್ಯುಸಿಯಾಗಿರುವ ಮಯೂರಿ, ಕೈ ತುಂಬಾ ಹೊಸ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿದ್ದಾರೆ. ಒಟ್ಟಿನಲ್ಲಿ ಮಯೂರಿ ಅವರು ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಘಳಿಗೆ ಚೆನ್ನಾಗಿತ್ತು ಅಂದರೂ ತಪ್ಪಾಗ್ಲಿಕ್ಕಿಲ್ಲ.

English summary
Kannada actor Mayuri busy shooting for a unnamed Tamil movie.After the success of Krishna Leela movie Mayuri has signed a Tamil flick and she has shared shooting pictures via her Facebook account
Please Wait while comments are loading...

Kannada Photos

Go to : More Photos