»   » 'ಆಕ್ಟರ್' ನವೀನ್ ಕೃಷ್ಣ ಬರೆದಿರುವ ಪತ್ರದಲ್ಲಿ ಏನಿದೆ?

'ಆಕ್ಟರ್' ನವೀನ್ ಕೃಷ್ಣ ಬರೆದಿರುವ ಪತ್ರದಲ್ಲಿ ಏನಿದೆ?

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಡಿಫರೆಂಟ್ ಸ್ಟೈಲ್, ವಿಭಿನ್ನ ಡೈಲಾಗ್ ಡೆಲಿವರಿಯಿಂದ ಗುರುತಿಸಿಕೊಂಡಿರುವ ನಟ ನವೀನ್ ಕೃಷ್ಣ. ಆನ್ ಸ್ಕ್ರೀನ್ ನಲ್ಲಿ ತಮ್ಮ 'ಧಿಮಾಕಿ'ನಿಂದಲೇ ಹೆಸರುವಾಸಿ ಆಗಿರುವ ನವೀನ್ ಕೃಷ್ಣ, ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಕ್ರಾಂತಿ ಮಾಡಿಲ್ಲ.

'ಹಗ್ಗದ ಕೊನೆ' ಅಂತಹ ಪ್ರಯೋಗಾತ್ಮಕ ಚಿತ್ರ ಮಾಡಿದರೂ, ನವೀನ್ ಕೃಷ್ಣಗೆ ಗೆಲುವಿನ ಸಿಹಿ ಸಿಗ್ಲಿಲ್ಲ. ಇದೀಗ ನವೀನ್ ಕೃಷ್ಣ ಅಭಿನಯದ ದಯಾಳ್ ಪದ್ಮನಾಭನ್ ನಿರ್ದೇಶನದ 'ಆಕ್ಟರ್' ಸಿನಿಮಾ ತೆರೆ ಕಾಣುತ್ತಿದೆ.


ಚಲನಚಿತ್ರ ನಟನೊಬ್ಬನ ಸುತ್ತ ಹೆಣೆದಿರುವ ಕಥೆ 'ಆಕ್ಟರ್'. ಒಂದೇ ಮನೆಯಲ್ಲಿ ಎರಡು ಪಾತ್ರಗಳೊಂದಿಗೆ 'ಆಕ್ಟರ್' ಸಿನಿಮಾ ಚಿತ್ರೀಕರಣಗೊಂಡಿದೆ. ಹೊಸ ಪ್ರಯೋಗದೊಂದಿಗೆ 'ಆಕ್ಟರ್' ಈ ವಾರ ನಿಮ್ಮ ಮುಂದೆ ಬರುತ್ತಿದ್ದಾನೆ. ['ಆಕ್ಟರ್' ಆದ ನವೀನ್ ಕೃಷ್ಣ ಕಥೆ ಏನು?]


'ಆಕ್ಟರ್' ಸಿನಿಮಾ ಬಿಡುಗಡೆ ಪ್ರಯುಕ್ತ ನಟ ನವೀನ್ ಕೃಷ್ಣ ನಿಮಗೆಲ್ಲಾ ಒಂದು ಪತ್ರ ಬರೆದಿದ್ದಾರೆ. ಪತ್ರದಲ್ಲಿ ನವೀನ್ ಕೃಷ್ಣ ಉಲ್ಲೇಖಿಸಿರುವ ಅಂಶಗಳೇನು ಎನ್ನುವುದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....


'ಕಪಾಲಿ' ಮುಖ್ಯ ಚಿತ್ರಮಂದಿರ!

'ಕಪಾಲಿ' ಮುಖ್ಯ ಚಿತ್ರಮಂದಿರ!

''ದಿನಾಂಕ 19/02/2016 ರಂದು ನನ್ನ ಚಿತ್ರ 'ಆಕ್ಟರ್' ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಕಪಾಲಿ ಹಾಗೂ ರಾಜ್ಯಾದ್ಯಂತ ತಾವೆಲ್ಲರೂ ದಯಮಾಡಿ ಈ ಚಿತ್ರವನ್ನು ವೀಕ್ಷಿಸಿ, ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ''


'ಆಕ್ಟರ್' ಚಿತ್ರ ನೋಡಲು ಮೂರು ಕಾರಣಗಳು!

'ಆಕ್ಟರ್' ಚಿತ್ರ ನೋಡಲು ಮೂರು ಕಾರಣಗಳು!

''ಕಾರಣ ಒಂದು : ಇದು ನಮ್ಮ, ನಿಮ್ಮ, ನಮ್ಮೆಲ್ಲರ ಜೀವನದ ಕಥೆಯ ಒಂದು ಅಂಕಣ.''


ಎರಡನೇ ಕಾರಣ

ಎರಡನೇ ಕಾರಣ

''ಹೇಳುವುದು ಸುಲಭ; ಮಾಡುವುದು ಕಷ್ಟ ಎಂದು ಭಾವಿಸುವವರಿಗೆ ಒಂದು ಸ್ಫೂರ್ತಿ.''


ಮೂರನೇ ಕಾರಣ

ಮೂರನೇ ಕಾರಣ

''ಮನುಷ್ಯನಾಗಿ ಬಂದದ್ದು ದೇವರು ಕೊಟ್ಟವರ, ಈ ಜನ್ಮವನ್ನು ನಾವೇ ಕಳೆದುಕೊಳ್ಳುವುದು ಮಹಾಪಾಪ. ಅಂತಹ ಕತ್ತಲ ಮನಸ್ಸಿನ ಆಲೋಚನೆಯಿಂದ ಬೆಳಕಿನೆಡೆಗೆ ನಡೆಯಲು ಹಂಸಲೇಖ ರವರ ''ಹುಟ್ಟೋದ್ ಯಾಕೆ, ಸಾಯೋದ್ ಯಾಕೆ, ಏನಾದರೂ ಸಾಧಿಸಿ ಹೋಗೋಕೆ..''ನೀವು ಕೈ ಹಿಡಿದರೆ ನಾನು ಸಾಧಿಸುವೆ.''


ಅದೃಷ್ಟ!

ಅದೃಷ್ಟ!

''ಕಪಾಲಿ' ಅಂತಹ ದೊಡ್ಡ ಚಿತ್ರಮಂದಿರ ದೊರೆತಿರುವುದು ನಮ್ಮ ಅದೃಷ್ಟ. ಅದು ತುಂಬಿದ ಗೃಹದಲ್ಲಿ ಪ್ರದರ್ಶನಗೊಳ್ಳಬೇಕೆಂದು ನಮ್ಮ ಆಸೆ ಮಾತ್ರ ಅಲ್ಲ ಅನಿವಾರ್ಯ ಕೂಡ, ಯಾಕೆಂದರೆ ಹಾಗಾಗದ ಸಂದರ್ಭದಲ್ಲಿ ನಮಗೆ ಮುಂದಿನ ವಾರ ಚಿತ್ರಮಂದಿರ ಸಿಗುವುದಿಲ್ಲ.''


ಅತ್ಯದ್ಭುತ ಚಿತ್ರ

ಅತ್ಯದ್ಭುತ ಚಿತ್ರ

''ನಾನು ಮಾಡಿರುವ ಎಷ್ಟೋ ಚಿತ್ರಗಳು ಬಂದಿವೆ, ಹೋಗಿವೆ. 'ಆಕ್ಟರ್' ಕನ್ನಡದಲ್ಲಿ ಒಂದು ಅತ್ಯದ್ಭುತ ಚಿತ್ರ. ಅದಕ್ಕಾಗಿ ಈ ರೀತಿ ಪತ್ರ ಬರೆದು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ.''


ಥಿಯೇಟರ್ ಸಮಸ್ಯೆ

ಥಿಯೇಟರ್ ಸಮಸ್ಯೆ

''ಕೊನೆಯದಾಗಿ ಥಿಯೇಟರ್ ಸಮಸ್ಯೆಯಿರುವುದರಿಂದ ನಮಗೆ ನೀಡಿರುವ ಚಿತ್ರಮಂದಿರಗಳಲ್ಲಿ ನಿಮಗೆ ಅತಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಊರುಗಳಲ್ಲಿ ಮುಂದಿನ ವಾರ ಬಿಡುಗಡೆ ಆಗುತ್ತದೆ. ನಿಮ್ಮ ಕುತೂಹಲ ಹಾಗೇ ಇರಲಿ''
ಧನ್ಯವಾದಗಳು,
ನವೀನ್ ಕೃಷ್ಣ


English summary
Kannada Actor Naveen Krishna of Dhimaku fame, has written letter to Kannada Audience requesting to watch his film 'Actor' which is releasing this Friday (February 19th)
Please Wait while comments are loading...

Kannada Photos

Go to : More Photos