»   » 'ಕಿರಿಕ್ ಪಾರ್ಟಿ' ಮಾಡ್ತಾರೆ ರಿಶಬ್ ಮತ್ತು ರಕ್ಷಿತ್ ಶೆಟ್ಟಿ.!

'ಕಿರಿಕ್ ಪಾರ್ಟಿ' ಮಾಡ್ತಾರೆ ರಿಶಬ್ ಮತ್ತು ರಕ್ಷಿತ್ ಶೆಟ್ಟಿ.!

Posted by:
Subscribe to Filmibeat Kannada

''ಏನಪ್ಪಾ, ಮೊನೆಯಷ್ಟೇ 'ರಿಕ್ಕಿ' ಸಿನಿಮಾ ರಿಲೀಸ್ ಆಯ್ತು. ಎಲ್ಲೆಡೆ ಉತ್ತಮ ವಿಮರ್ಶೆ ಬಂತು. ಸಕ್ಸಸ್ ಖುಷಿಯಲ್ಲಿ ಪಾಟಿ ಮಾಡೋಕೆ ಹೋಗಿ ಕಿರಿಕ್ ಮಾಡ್ಕೊಂಡ್ರಾ ರಿಶಬ್ ಮತ್ತು ರಕ್ಷಿತ್ ಶೆಟ್ಟಿ?'' ಅಂತ ಶೀರ್ಷಿಕೆ ನೋಡಿದ ತಕ್ಷಣ ಕನ್ ಫ್ಯೂಸ್ ಆಗುವ ಅವಶ್ಯಕತೆ ಇಲ್ಲ.

ಯಾಕಂದ್ರೆ ರಿಶಬ್ ಮತ್ತು ರಕ್ಷಿತ್ 'ಕಿರಿಕ್ ಪಾರ್ಟಿ' ಮಾಡುವುದಕ್ಕೆ ಹೊರ್ಟಿರುವುದು ರೀಲ್ ನಲ್ಲಿ. ಹೌದು, ರಕ್ಷಿತ್ ಶೆಟ್ಟಿ ಅಭಿನಯದ ಮುಂದಿನ ಚಿತ್ರದ ಹೆಸರೇ 'ಕಿರಿಕ್ ಪಾರ್ಟಿ'.


kannada-actor-rakshit-shetty-turns-producer-for-kirik-party

'ಕಿರಿಕ್ ಪಾರ್ಟಿ'ಗೆ 'ರಿಕ್ಕಿ' ನಂತರ ಒನ್ಸ್ ಅಗೇನ್ ಆಕ್ಷನ್ ಕಟ್ ಹೇಳುವವರು ರಿಶಬ್ ಶೆಟ್ಟಿ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಈ 'ಕಿರಿಕ್ ಪಾರ್ಟಿ'ಗೆ ಬಂಡವಾಳ ಹಾಕುತ್ತಿರುವವರು ಯಾರು ಗೊತ್ತಾ? ಖುದ್ದು ರಕ್ಷಿತ್ ಶೆಟ್ಟಿ.! [ಪ್ರೀತಿ-ಸಮರಗಳ ನಡುವೆ ನಜ್ಜುಗುಜ್ಜಾಗುವ 'ರಿಕ್ಕಿ'ಗೆ ಸಲಾಂ]


ನಿರ್ದೇಶಕನಾಗಿ ರಕ್ಷಿತ್ ಶೆಟ್ಟಿ ಗೆದ್ದಿದ್ದಾಯ್ತು. ಗಾಂಧಿನಗರಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಹೋಮ್ ಪ್ರೊಡಕ್ಷನ್ ಶುರುಮಾಡಿ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಿರ್ಮಾಪಕ ಆಗಲು ಹೊರಟಿದ್ದಾರೆ ರಕ್ಷಿತ್ ಶೆಟ್ಟಿ.


'ರಿಕ್ಕಿ' ಸಿನಿಮಾದ ಸೂಪರ್ ಸಕ್ಸಸ್ ನಲ್ಲಿದ್ದ ರಕ್ಷಿತ್ ಸದ್ಯಕ್ಕೆ ಹಂಚಿಕೊಂಡಿರುವುದಿಷ್ಟು. ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

English summary
Kannada Actor Rakshit Shetty is all set to become Producer for Rishab Shetty directorial 'Kirik Party'.
Please Wait while comments are loading...
Best of 2016

Kannada Photos

Go to : More Photos