twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರು ನನ್ನ ಪಾದ ಮುಟ್ಟಿದ ಆ ಕ್ಷಣ ನಾ ಮರೆಯುಲಾರೆ

    |

    ಸಿನಿಮಾ ಜೀವನದಲ್ಲಿ ನನಗೆ ಹೊಸ ಬದುಕು ನೀಡಿದವರು ಪುಟ್ಟಣ್ಣ ಕಣಗಾಲ್ . ಕಲಾ ಜಗತ್ತಿನಲ್ಲಿ ನಾನು ಇಂದು ಎನು ಸಾಧಿಸಿದೆನೋ ಅದೆಲ್ಲಾ ಪುಟ್ಟಣ್ಣ ಅವರಿಂದ.

    ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅಂದಿನ ಕನ್ನಡ ಚಿತ್ರ ಜಗತ್ತಿನ ಪ್ಲೇ ಬಾಯ್ ಎಂದೇ ಖ್ಯಾತರಾಗಿದ್ದ ರಾಮಕೃಷ್ಣ ತನ್ನ ಮನದಾಳದ ಮಾತನ್ನು ಬಿಚ್ಚಿಟ್ಟು ಮಾತನಾಡುತ್ತಿದ್ದರು.

    ನನಗೆ ಡಾ.ರಾಜಕುಮಾರ್ ಜೊತೆ ನಟಿಸುವ ಒಂದು ಅವಕಾಶ ಸಿಕ್ಕಿತ್ತು. ಆ ಸಮಯದಲ್ಲಿ ಪುಟ್ಟಣ್ಣ ತನ್ನ ಹೊಸ ಚಿತ್ರಕ್ಕೆ ನನ್ನನ್ನು ಹೀರೋ ಆಗಿ ಆಯ್ಕೆ ಮಾಡಿದ್ದರು. ನಾಯಕನಾಗಿ ನಟಿಸ ಬೇಕಾಗಿದ್ದ ನನ್ನ ಮೊದಲ ಚಿತ್ರ ಅದಾಗಿತ್ತು.

    ರಾಜ್ ಜೊತೆ ನಟಿಸ ಬೇಕೆನ್ನುವ ನನ್ನ ಆಶೆಯನ್ನು ಪುಟ್ಟಣ್ಣ ಅವರಲ್ಲಿ ಹೇಳಿಕೊಂಡೆ. ಅದಕ್ಕೆ ಅವರು ನನಗೆ ಒಪ್ಪಿಗೆ ನೀಡಿ ತನ್ನ ಮುಂದಿನ ಚಿತ್ರಕ್ಕೆ ಮತ್ತೆ ನನ್ನನ್ನು ನಾಯಕನನ್ನಾಗಿ ಅಯ್ಕೆ ಮಾಡಿಕೊಂಡರು.

    ಕನ್ನಡ ಚಿತ್ರ ಜಗತ್ತಿನ ಅದ್ಭುತ ಶಕ್ತಿ ಅಣ್ಣಾವ್ರು. ಸರಳತೆ, ಸಹ ಕಲಾವಿದರು ಮತ್ತು ನಿರ್ಮಾಪಕರ ಮೇಲೆ ಅವರಿಗೆ ಇದ್ದ ಗೌರವ ಎಲ್ಲಾ ಪೀಳಿಗೆಗೂ ಒಂದು ಉದಾಹರಣೆ.

    ರಾಜ್ ಮತ್ತು ಬಗ್ಗೆ ಪುಟ್ಟಣ್ಣ ಬಗ್ಗೆ ರಾಮಕೃಷ್ಣ ಹೇಳಿದ ಕೆಲವು ಪ್ರಮುಖ ಅಂಶಗಳು ಸ್ಲೈಡಿನಲ್ಲಿ...

    ಬಭ್ರುವಾಹನ

    ಬಭ್ರುವಾಹನ

    ಅಣ್ಣಾವ್ರ ಜೊತೆ ಸಹ ನಟನಾಗಿ ನನಗೆ ಸಿಕ್ಕ ಅವಕಾಶವೆಂದರೆ ಬಭ್ರುವಾಹನ ಚಿತ್ರದಲ್ಲಿ. ನನಗೆ ಕೃಷ್ಣನ ಪಾತ್ರವನ್ನು ನೀಡಲಾಗಿತ್ತು. ಅರ್ಜುನ ಪಾತ್ರಧಾರಿಯಾಗಿದ್ದ ರಾಜಕುಮಾರ್ ಅವರು ದ್ವಾರಕೆಯಲ್ಲಿ ನನ್ನನ್ನು ಭೇಟಿ ಮಾಡುವ ಸನ್ನಿವೇಶ. ನನ್ನನ್ನು ನೋಡಿದಾಕ್ಷಣ ಅವರು ನನ್ನ ಪಾದ ಮುಟ್ಟಿ ನಮಸ್ಕರಿಸುವ ಸನ್ನಿವೇಶವನ್ನು ನಾನು ಎಂದಿಗೂ ಮರೆಯಲಾರೆ. ಅಂಥಹ ಮೇರು ನಟ ನನ್ನ ಪಾದ ಮುಟ್ಟುವಾಗ ನನಗೆ ಒಂದು ಕಡೆ ಭಯ ಇನ್ನೊಂದು ಕಡೆ ರೋಮಾಂಚನಕಾರಿ ಅನುಭವ.

    ಡಾ. ರಾಜಕುಮಾರ್

    ಡಾ. ರಾಜಕುಮಾರ್

    ಅಬ್ಬಬ್ಬಾ.. ಬಭ್ರುವಾಹನ ಚಿತ್ರದಲ್ಲಿ ರಾಜಣ್ಣ, ಅರ್ಜುನ ಮತ್ತು ಬಭ್ರುವಾಹನ ಪಾತ್ರದಲ್ಲಿ ಯಾವ ರೀತಿ ಆವರಿಸಿ ಕೊಂಡಿದ್ದರೆಂದರೆ ನನ್ನಂತಃ ಹಲವು ಕಲಾವಿದರಿಗೆ ಮೈನವಿರೇಳುತ್ತದೆ.

    ಪುಟ್ಟಣ್ಣ ಕಣಗಾಲ್

    ಪುಟ್ಟಣ್ಣ ಕಣಗಾಲ್

    ನನ್ನ ಸಿನಿಮಾರಂಗದ ಗುರು ಪುಟ್ಟಣ್ಣ ಕಣಗಾಲ್ ಅವರ ಐದು ಚಿತ್ರದಲ್ಲಿ ನಾನು ನಟಿಸಿದ್ದೆ. ಪಡುವಾರಹಳ್ಳಿ ಪಾಂಡವರು, ರಂಗನಾಯಕಿ, ಮಾನಸ ಸರೋವರ, ಅಮೃತ ಘಳಿಗೆ ಮತ್ತು ಖುಣಮುಕ್ತಳು. ಇದರಲ್ಲಿ ನನಗೆ ರಂಗನಾಯಕಿ ಚಿತ್ರದ ಪಾತ್ರಕ್ಕೆ ಪ್ರಶಸ್ತಿ ಲಭಿಸಿತು. ಆ ಪ್ರಶಸ್ತಿಯಿಂದಾಗಿ ನಿವೇಶನವೂ ಲಭಿಸಿತು.

    ಯಕ್ಷಗಾನದ ಹುಚ್ಚು

    ಯಕ್ಷಗಾನದ ಹುಚ್ಚು

    ಚಿಕ್ಕವನಾಗಿದ್ದಾಗ ನನಗೆ ಯಕ್ಷಗಾನದ ಹುಚ್ಚು. ನಾನು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೀರ್ನಹಳ್ಳಿ ಗ್ರಾಮದವನು. ನನಗೆ ಯಕ್ಷಗಾನದ ಮೇಲಿದ್ದ ಅಭಿಮಾನ ಮುಂದಿನ ದಿನದಲ್ಲಿ ನಾಟಕದತ್ತ ತಿರುಗಿತು. ನನ್ನ ಚಿಕ್ಕಪ್ಪ ನಾಟಕ ಕಂಪೆನಿಯ ಗುತ್ತಿಗೆದಾರ. ಒಮ್ಮೆ ಗುಬ್ಬಿ ಕಂಪೆನಿಯ ನಾಟಕ ಬಂದಿತ್ತು. ನಾಟಕ ನೋಡಲು ಹಣ ನೀಡಬೇಕಿತ್ತು. ಹಣ ಇಲ್ಲದಿದ್ದುರಿಂದ ಹುಲ್ಲಿನ ರಾಶಿಯ ಮೇಲೇರಿ ನಾಟಕ ವೀಕ್ಷಿಸುತ್ತಿದ್ದೆ.

    ಎಲ್ಲವೂ ಪುಟ್ಟಣ್ಣ ಅವರಿಂದಲೇ

    ಎಲ್ಲವೂ ಪುಟ್ಟಣ್ಣ ಅವರಿಂದಲೇ

    ನನಗೆ ಪ್ರಶಸ್ತಿ, ಮನೆ ಜೊತೆಗೆ ಪತ್ನಿ ಕೂಡಾ ಸಿಕ್ಕಿದ್ದು ಪುಟ್ಟಣ್ಣ ಅವರಿಂದಲೇ.ಪುಣ್ಣಣ್ಣ ಮನೆಯಲ್ಲಿ ಕೆಲಸದವಳಾಗಿದ್ದ ಹುಡುಗಿಯನ್ನು ನಾನು ಮದುವೆಯಾದೆ. ಪುಟ್ಟಣ್ಣ ಇಷ್ಟೆಲ್ಲಾ ಮಾಡಿದರೂ ನಾನು ಅವರಿಗೆ ಏನೂ ಮಾಡಲಾಗಲಿಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ ಎಂದು ರಾಮಕೃಷ್ಣ ಹೇಳಿದ್ದಾರೆ.

    English summary
    Kannada Actor Ramakrishna flash back stories. Ramakrishna was talking in 'Belli Hejje' programme organized by Karnataka Film academy on Saturday, Sep 28.
    Monday, September 30, 2013, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X