»   » ಹ್ಯಾಟ್ರಿಕ್ ಹೀರೋ ಹಾರ್ಟ್ ಅಟ್ಯಾಕ್ ಸುದ್ದಿ ಕೇಳಿ ಅಂಬರೀಶ್ ಶಾಕ್!

ಹ್ಯಾಟ್ರಿಕ್ ಹೀರೋ ಹಾರ್ಟ್ ಅಟ್ಯಾಕ್ ಸುದ್ದಿ ಕೇಳಿ ಅಂಬರೀಶ್ ಶಾಕ್!

Posted by:
Subscribe to Filmibeat Kannada

ಇನ್ನು ಹರೆಯದ ಹುಡುಗನಂತೆ ಕಾಣುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ 54 ವರ್ಷ ಅಂದ್ರೆ ನಂಬೋಕೆ ಅಸಾಧ್ಯ. ಅಂತದ್ರಲ್ಲಿ, ಶಿವಣ್ಣನಿಗೆ ಹೃದಯಾಘಾತವಾಗಿದೆ ಅಂದ್ರೆ ಯಾರ್ತಾನೆ ನಂಬೋಕೆ ಸಾಧ್ಯ ಹೇಳಿ.

ಇಂತಹ ಸುದ್ದಿ ಬ್ರೇಕ್ ಆಗ್ತಿದ್ದಂತೆ, ವಸತಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ರವರಿಗೂ ನಂಬುವುದಕ್ಕೆ ಆಗ್ಲಿಲ್ಲ. ವಿಷಯ ಕೇಳಿದ ತಕ್ಷಣ ಅಂಬರೀಶ್ ಗೆ ಶಾಕ್ ಆಗಿದೆ. ಕೂಡಲೆ ಶಿವಣ್ಣ ಅಳಿಯ ಡಾ.ದಿಲೀಪ್ ಗೆ ಫೋನ್ ಮಾಡಿ ಶಿವಣ್ಣನಿಗೆ ಏನಾಯ್ತು ಅಂತ ಅಂಬಿ ವಿಚಾರಿಸಿದ್ದಾರೆ. [ಶಿವಣ್ಣನಿಗೆ ಹಾರ್ಟ್ ಅಟ್ಯಾಕ್.! ಮಲ್ಯ ವೈದ್ಯರು ಹೇಳಿದ್ದೇನು?]

Kannada Actor Shivarajkumar hospitalized : Ambareesh reaction

ಗಾಬರಿ ಪಡುವಂತದ್ದು ಏನು ಇಲ್ಲ ಅಂತ ತಿಳಿದ ನಂತ ಅಂಬರೀಶ್ ಗೆ ಸಮಾಧಾನವಾಗಿದೆ. ಈ ಬಗ್ಗೆ ಮಾತನಾಡಿರುವ ಅಂಬರೀಶ್, ''ಈ ಸುದ್ದಿ ಕೇಳಿ ಶಾಕ್ ಆಗ್ಬಿಟ್ಟೆ. ಅಳಿಯ ದಿಲೀಪ್ ಗೆ ಫೋನ್ ಮಾಡಿ ವಿಚಾರಿಸಿದೆ. ಬೆಳಗ್ಗೆನೆ ನಾನು ಮಂಡ್ಯಗೆ ಹೊರಟು ಬಂದೆ. ಹೀಗಾಗಿ ನನಗೆ ಯಾವ ವಿಷಯ ಕೂಡ ಗೊತ್ತಾಗಲಿಲ್ಲ.'' [ಶಿವಣ್ಣ ಅಸ್ವಸ್ಥ : ರಾಘಣ್ಣ, ಪುನೀತ್, ಮಧು ಬಂಗಾರಪ್ಪ ಏನಂತಾರೆ?]

''ಮಾಧ್ಯಮಗಳಲ್ಲಿ ಬಂದ ನಂತರ ಸುದ್ದಿ ಗೊತ್ತಾಯ್ತು. ಹಿ ಈಸ್ ಟೂ ಯಂಗ್. ಅವರು ತುಂಬಾ ಹೆಲ್ತಿ. ತುಂಬಾ ಹ್ಯಾಪಿ ಫೆಲೋ. ನಮ್ಮ ಎಲ್ಲಾ ಫಂಕ್ಷನ್ ನಲ್ಲೂ ಬರ್ತಿದ್ರೂ. ಐದೇ ನಿಮಿಷಕ್ಕೆ ರೆಡಿಯಾಗಿಬಿಡೋರು. ತುಂಬಾ ಎನರ್ಜಿ ಮತ್ತು ತುಂಬಾ ಫಾಸ್ಟ್ ವ್ಯಕ್ತಿ. ಈ ಸುದ್ದಿ ಕೇಳಿ ಅವರು ತುಂಬಾ ಶಾಕ್ ಆಯ್ತು.'' ಅಂತ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

English summary
Kannada Actor, Congress Politician, MLA Ambareesh has expressed his shock hearing the news of Kannada Actor Shivarajkumar has suffered heart attack.
Please Wait while comments are loading...

Kannada Photos

Go to : More Photos