»   » ಪತ್ನಿಯಿಲ್ಲದೆ 'ತುಳಸಿ ಹಬ್ಬ' ಆಚರಿಸಿದ ಶ್ರೀನಗರ ಕಿಟ್ಟಿ

ಪತ್ನಿಯಿಲ್ಲದೆ 'ತುಳಸಿ ಹಬ್ಬ' ಆಚರಿಸಿದ ಶ್ರೀನಗರ ಕಿಟ್ಟಿ

Posted by:
Subscribe to Filmibeat Kannada

ಶ್ರದ್ಧಾ ಭಕ್ತಿಯಿಂದ ಕಡ್ಡಿ-ಕರ್ಪೂರ ಹಚ್ಚಿ, ಶ್ರೀನಗರ ಕಿಟ್ಟಿ ಯಾವಾಗ ದೇವರ ಪೂಜೆ ಮಾಡಿದ್ರೋ ಗೊತ್ತಿಲ್ಲ. ಆದ್ರೆ, ಪತ್ನಿ ಭಾವನಾ ಬೆಳಗೆರೆ 'ಬಿಗ್ ಬಾಸ್' ಮನೆಯಲ್ಲಿರುವ ಕಾರಣ ಕಿಟ್ಟಿ ಒಬ್ಬರೇ 'ತುಳಸಿ ಹಬ್ಬ'ವನ್ನು ತಮ್ಮ ಮನೆಯಲ್ಲಿ ಆಚರಣೆ ಮಾಡಿದ್ದಾರೆ.

ಮೊದಲಿಗೆ ಗಣಪತಿ ಪೂಜೆ ಸಲ್ಲಿಸಿ, ನಂತರ ತುಳಸಿ ದೇವಿಗೆ ಅಷ್ಟೋತ್ತರ, ಅರ್ಚನೆ, ನೈವೇದ್ಯ ಹಾಗೂ ಆರತಿ ಬೆಳಗಿ ಶ್ರೀನಗರ ಕಿಟ್ಟಿ ಭಕ್ತಿಯಿಂದ ತುಳಸಿ ಹಬ್ಬವನ್ನು ಆಚರಿಸಿದ್ದಾರೆ.[ವಿಷ್ಣುಪ್ರಿಯೆ, ಶುಭದಾಯಿನಿ ಮಾತೆ ತುಳಸಿ ನಮೋ ನಮಃ]

Kannada Actor Srinagar Kitty celebrates 'Tulasi Festival' alone

ಮನೆಯಲ್ಲಿ ಭಾವನಾ ಬೆಳಗೆರೆ ಇದ್ದಿದ್ರೆ ಕಿಟ್ಟಿ ಇಷ್ಟೆಲ್ಲಾ ಮಾಡ್ತಿದ್ರೋ ಇಲ್ವೋ, ಆದ್ರೆ, ಪತ್ನಿ ಇಲ್ಲದೇ ಇರುವ ಕಾರಣ ಕಿಟ್ಟಿಗೂ 'ಟಾಸ್ಕ್' ಸಿಕ್ಕಂತಾಗಿದೆ.

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಯಾವುದೇ ವಿವಾದಕ್ಕೆ ಗುರಿಯಾಗದೆ ಸೇಫ್ ಆಗಿ ಆಡುತ್ತಿರುವ ಭಾವನಾ ಬೆಳಗೆರೆ ಶೋ ಗೆಲ್ಲಲಿ ಅನ್ನೋದು ಕಿಟ್ಟಿ ಕೋರಿಕೆ. ಇದಕ್ಕೆ 'ತುಳಸಿ ಮಾತೆ' ತಥಾಸ್ತು ಅನ್ನುವಳೇ..? ನೋಡೋಣ....

English summary
Kannada Actor Srinagar Kitty is missing his wife Bhavana Belagere. Since Bhavana Belagere is in Bigg Boss Kannada 3, Srinagar Kitty celebrated 'Tulasi Festival' in his home alone.
Please Wait while comments are loading...

Kannada Photos

Go to : More Photos