»   » ಸುದೀಪ್ ಗೆ 21 ವರ್ಷಗಳ ಸಂಭ್ರಮ, ಕಿಚ್ಚ ಹೇಳಿದ್ದೇನು?

ಸುದೀಪ್ ಗೆ 21 ವರ್ಷಗಳ ಸಂಭ್ರಮ, ಕಿಚ್ಚ ಹೇಳಿದ್ದೇನು?

Posted by:
Subscribe to Filmibeat Kannada

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಯಶಸ್ಸಿನ ಶಿಖರ ಅಂದ್ರೆ ತಪ್ಪಾಗಲಾರದು. ಯುವ ಪ್ರತಿಭೆಗಳಿಗೆ ಮಾದರಿ ಈ ನಟ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ, ಹಿಂದಿ, ತೆಲುಗು, ತಮಿಳಿನಲ್ಲೂ ತಮ್ಮ ಪ್ರತಿಭೆ ಸಾಮರ್ಥ್ಯವನ್ನ ತೋರಿಸಿರುವ ಕಲಾವಿದ.

ಒಂದು ಕಡೆ ನಟನೆಯಿಂದ ಕಲಾರಸಿಕರನ್ನ ರಂಜಿಸುತ್ತಿರುವ ಸುದೀಪ್, ಮತ್ತೊಂದಡೆ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ, ಉತ್ಸಾಹ ನೀಡುತ್ತಿದ್ದಾರೆ.['ಬಿಗ್ ಬಾಸ್ ಕನ್ನಡ-4' ಮುಗಿದ ಮೇಲೆ ಸುದೀಪ್ 'ಇವರನ್ನೆಲ್ಲ' ಮಿಸ್ ಮಾಡ್ಕೊಳ್ತಿದ್ದರಂತೆ!]

ಇಂತಹ ಪ್ರತಿಭಾನ್ವಿತ ನಟ, ಸಿನಿಮಾ ಪ್ರಪಂಚದಲ್ಲಿ 21 ವರ್ಷ ಪೂರೈಸಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಸುದೀಪ್ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ.

ಚಿತ್ರ ಜಗತ್ತಿನಲ್ಲಿ 21 ವರ್ಷ!

ಚಿತ್ರ ಜಗತ್ತಿನಲ್ಲಿ 21 ವರ್ಷ!

''ಈ ಸಿನಿಮಾ ಎಂಬ ಅದ್ಭುತ ಜಗತ್ತಿನಲ್ಲಿ 21 ವರ್ಷ ಪೂರೈಸಿದೆ. ತುಂಬಾ ವೇಗವಾಗಿ ಆಯ್ತು ಅನ್ಸುತ್ತೆ ಈ ಜರ್ನಿ, ಆದ್ರೆ, ಇನ್ನೂ ಹೋಗಬೇಕಿರುವುದು ತುಂಬಾ ಇದೆ. ನನ್ನ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು''['ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!]

ಹೃದಯ ಪೂರ್ವಕ ಧನ್ಯವಾದಗಳು

ಹೃದಯ ಪೂರ್ವಕ ಧನ್ಯವಾದಗಳು

''ವೇಗವಾಗಿ ಉರುಳುತ್ತಿರುವ ವರ್ಷಗಳಲ್ಲಿ, ಸಾಕಷ್ಟು ಕಲಿತ್ತಿದ್ದೇನೆ. ಇವತ್ತು ನಾನು ಇಲ್ಲಿ ಇದ್ದೀನಿ ಅಂದ್ರೆ, ಅದಕ್ಕೆ ಹಲವು ಜನ ಕಾರಣವಾಗಿದ್ದಾರೆ. ಅವರಿಗೆಲ್ಲ ಹೃದಯ ಪೂರ್ವಕ ಧನ್ಯವಾದಗಳು''

ನಾನಿನ್ನು ಹೊಸ ಕಲಾವಿದ!

ನಾನಿನ್ನು ಹೊಸ ಕಲಾವಿದ!

''ನಾನಿನ್ನು ಹೊಸ ಕಲಾವಿದ ಅನ್ನಿಸುತ್ತಿದೆ. ಕಲಿಯುವುದು ಸಾಕಷ್ಟಿದೆ, ಸಾಗಬೇಕಿರುವುದು ಇನ್ನೂ ದೂರವಿದೆ. ಪ್ರತಿಕ್ಷಣವೂ ಹೊಸದು. ಪ್ರತಿಯೊಂದು ಗಾಯವೂ ಗೆಲುವಾಗಿ ಪರಿವರ್ತನೆಯಾಗಿದೆ''

ಸಂತಸ ವ್ಯಕ್ತಪಡಿಸಿದ ಕಿಚ್ಚ

ಸಂತಸ ವ್ಯಕ್ತಪಡಿಸಿದ ಕಿಚ್ಚ

ನನ್ನ ಬಗ್ಗೆ ಪ್ರೀತಿ ಇತ್ತು ದ್ವೇಷ ಇತ್ತು.....ಅದೇ ದ್ವೇಷ ನಂತರ ಪ್ರೀತಿ ಆಯ್ತು. ಈ ಎಲ್ಲ ರೀತಿಯ ಸಂಧರ್ಭ, ಭಾವನೆಗಳು ನನಗೆ ಅತ್ಯಮೂಲ್ಯ ಅದನ್ನ ನಾನು ಕಾಪಾಡಿಕೊಂಡಿದ್ದೇನೆ.

English summary
Kannada Actor Sudeep Celebrates his 21st Anniversary in Film Industry On January 31st.
Please Wait while comments are loading...

Kannada Photos

Go to : More Photos