»   » ಉಪೇಂದ್ರ ಅವರ ಮುಂದಿನ ಚಿತ್ರ ಯಾವುದು ಗೊತ್ತಾ?

ಉಪೇಂದ್ರ ಅವರ ಮುಂದಿನ ಚಿತ್ರ ಯಾವುದು ಗೊತ್ತಾ?

Posted by:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿರುವ 'ಉಪ್ಪಿ-2' ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಉಪ್ಪಿಟ್ಟು ರುಚಿ ಸವಿದಿರುವ ಅಭಿಮಾನಿಗಳಿಗೆ ಈಗ ಕಾಡುತ್ತಿರುವ ಪ್ರಶ್ನೆ ಒಂದೇ. ಅದು ಉಪೇಂದ್ರ ಅವರ ಮುಂದಿನ ಚಿತ್ರ ಯಾವುದು?

ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಉಪೇಂದ್ರ ಮತ್ತೆ ಬಣ್ಣ ಹಚ್ಚೋಕೆ ಹೊರಟಿರುವ ಸಿನಿಮಾ 'ಕಲ್ಪನಾ-2'. ಹೌದು, ತೆಲುಗು ಮತ್ತು ತಮಿಳಿನಲ್ಲಿ ಸೂಪರ್ ಹಿಟ್ ಆದ 'ಕಾಂಚನಾ' ಚಿತ್ರದ ರೀಮೇಕ್ 'ಕಲ್ಪನಾ' ಸಿನಿಮಾ ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು.

upendra

ಉಪೇಂದ್ರ ಅಭಿನಯ ಕೆಲವರಿಗೆ ಕಚಗುಳಿ ಇಟ್ಟಿದ್ದರೆ, ಇನ್ನು ಕೆಲವರಿಗೆ ನಡುಕ ಹುಟ್ಟಿಸಿತ್ತು. ಇದೀಗ ಅಂತದ್ದೇ ಹವಾ ಕ್ರಿಯೇಟ್ ಮಾಡೋಕೆ ಉಪೇಂದ್ರ ರೆಡಿಯಾಗುತ್ತಿದ್ದಾರೆ. 'ಕಲ್ಪನಾ' ಚಿತ್ರದ ಮುಂದುವರಿದ ಭಾಗ 'ಕಲ್ಪನಾ-2' ಚಿತ್ರದಲ್ಲಿ ನಟಿಸುವುದಕ್ಕೆ ಉಪೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದಾರೆ. [ಬುದ್ದಿವಂತ ಉಪ್ಪಿಯ ರಿಮೇಕ್ ಚಿತ್ರಗಳೇನೂ ಕಮ್ಮಿಯಿಲ್ಲ]

ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಈಗಾಗಲೇ 'ಕಾಂಚನಾ-2' ಸಿನಿಮಾ ಸದ್ದು ಮಾಡಿದೆ. ಅದರ ರೀಮೇಕ್ ವರ್ಷನ್ನೇ ಈ 'ಕಲ್ಪನಾ-2'. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ. [ವಿಕಲಚೇತನರಿಗೆ ಉಪೇಂದ್ರ ಕಲ್ಪನಾ ಹಾಡು ಅರ್ಪಣೆ]

ಮುಂದಿನ ತಿಂಗಳಿನಿಂದ 'ಕಲ್ಪನಾ-2' ಶೂಟಿಂಗ್ ಶುರುವಾಗಲಿದೆ. ಉಪೇಂದ್ರ ಅವರೊಬ್ಬರನ್ನ ಬಿಟ್ಟರೆ ಬಾಕಿ ತಾರಾಗಣ ಇನ್ನೂ ಫೈನಲ್ ಆಗಿಲ್ಲ. 'ಕಲ್ಪನಾ-2' ಚಿತ್ರದ ಹೆಚ್ಚಿನ ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actor Upendra has agreed to act in 'Kalpana-2', which is the remake of Telugu Film 'Kanchana-2'. Upendra had previously played lead role in the movie 'Kalpana'.
Please Wait while comments are loading...

Kannada Photos

Go to : More Photos