»   » ಅಬುಧಾಬಿಗೆ ಹಾರಿದ ರಾಕಿಂಗ್ ಸ್ಟಾರ್ ಯಶ್ ಮತ್ತು ಶಾನ್ವಿ..!

ಅಬುಧಾಬಿಗೆ ಹಾರಿದ ರಾಕಿಂಗ್ ಸ್ಟಾರ್ ಯಶ್ ಮತ್ತು ಶಾನ್ವಿ..!

Posted by:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ಶಾನ್ವಿ ಶ್ರೀವಾಸ್ತವ್ ಅವರು ಅಬುಧಾಬಿಗೆ ಹಾರಿದ್ದಾರಂತೆ, ಯಾಕಂತೀರಾ?, ಯಾಕೆಂದರೆ, ಯಶ್ ಅವರ ಈ ವರ್ಷದ ಬಹುನಿರೀಕ್ಷಿತ 'ಮಾಸ್ಟರ್ ಪೀಸ್' ಚಿತ್ರದ ಹಾಡಿನ ಶೂಟಿಂಗ್ ಗೆ ವಿದೇಶಕ್ಕೆ ಹಾರಿದ್ದಾರೆ.

ಇನ್ನು ಚಿತ್ರತಂಡ ಬಹುತೇಕ ಶೂಟಿಂಗ್ ಮುಗಿಸಿದ್ದು, ಕೇವಲ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಇದೀಗ ಆ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಇಡೀ ಚಿತ್ರತಂಡ ವಿದೇಶಕ್ಕೆ ಹಾರಿದ್ದು, ಸದ್ಯಕ್ಕೆ ಅಬುಧಾಬಿಯಲ್ಲಿ ಹಾಡಿನ ಶೂಟಿಂಗ್ ಗೆ ತಯಾರಿ ಮಾಡಿಕೊಂಡು, ಬೀಡು ಬಿಟ್ಟಿದೆ.['ಮಾಸ್ಟರ್ ಪೀಸ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಾಸ್ ಸಾಂಗ್]

ಸಂಭಾಷಣೆಕಾರ ಹುದ್ದೆಯಿಂದ ನಿರ್ದೇಶಕ ಸ್ಥಾನಕ್ಕೆ ಭಡ್ತಿ ಹೊಂದಿದ ನಿರ್ದೇಶಕ ಕಮ್ ನಟ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ 'ಮಾಸ್ಟರ್ ಪೀಸ್' ಚಿತ್ರದ ಎರಡು ಹಾಡುಗಳಲ್ಲಿ ಒಂದು ಹಾಡಿನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಭಾನುವಾರ (ನವೆಂಬರ್ 22) ದಂದು ಸಂಜೆಯ ವೇಳೆಗೆ ಚಿತ್ರೀಕರಣ ಮುಗಿಸಿದ್ದಾರೆ.

ಇನ್ನು ಸ್ವಲ್ಪ ಕೂಡ ರೆಸ್ಟ್ ತೆಗೆದುಕೊಳ್ಳದ 'ಮಾಸ್ಟರ್ ಪೀಸ್' ಚಿತ್ರತಂಡ, ಎರಡನೇ ಹಾಡಿನ ಶೂಟಿಂಗ್ ಗೆ ಸಿದ್ದತೆ ಮಾಡಿಕೊಂಡು, ಸೆಟ್ ಹಾಕಿದೆ.

ಅಂದಹಾಗೆ ಈ ವರ್ಷದ ಕ್ರಿಸ್ ಮಸ್ ಹಬ್ಬಕ್ಕೆ ಯಶ್ ಅವರ 'ಮಾಸ್ಟರ್ ಪೀಸ್' ತೆರೆ ಮೇಲೆ ಭರ್ಜರಿಯಾಗಿ ಅಪ್ಪಳಿಸಲಿದ್ದು, ಚಿತ್ರದಲ್ಲಿ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಅವರು ಯಶ್ ಜೊತೆ ಡ್ಯುಯೆಟ್ ಹಾಡಿದ್ದಾರೆ.[ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್]

ರಾಕಿಂಗ್ ಸ್ಟಾರ್ ಅವರ ಸೆಂಟಿ ಮೆಂಟ್ ನಂತೆ ಕಳೆದ ವರ್ಷ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಡಿಸೆಂಬರ್ 25 ರಂದು ತೆರೆ ಕಂಡು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಆದ್ದರಿಂದ ಈ ವರ್ಷ ಕೂಡ ಡಿಸೆಂಬರ್ ತಿಂಗಳಿನಲ್ಲಿ 'ಮಾಸ್ಟರ್ ಪೀಸ್' ಚಿತ್ರ ತೆರೆ ಕಾಣಬೇಕು ಎಂಬುದು ಯಶ್ ಆಸೆ.[ರಾಕಿಂಗ್ ಸ್ಟಾರ್ ಯಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಗೆ ಕ್ಲ್ಯಾಷ್!! ]

ಅಂತೂ ಇಂತೂ ಯಶ್ ಅವರ ಆಸೆಯನ್ನು ಈಡೇರಿಸಲು ನಿರ್ದೇಶಕ ಮಂಜು ಮಾಂಡವ್ಯ ನಿರ್ಧರಿಸಿದ್ದು, ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ 'ಮಾಸ್ಟರ್ ಪೀಸ್' ತೆರೆ ಮೇಲೆ ಬರಲಿದೆ.

English summary
Shooting for two songs of Yash's Masterpiece is taking place in Abu Dhabi currently. Shooting of the first song was wrapped up on Sunday evening. Without taking any break the team has started shooting the second song.
Please Wait while comments are loading...

Kannada Photos

Go to : More Photos