»   » ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗ ಯಾರು.?

ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗ ಯಾರು.?

Posted by:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಬಾಲನಟಿ ಆಗಿ ಎಂಟ್ರಿಕೊಟ್ಟು... 'ಚೆಲುವಿನ ಚಿತ್ತಾರ'ದ ಮೂಲಕ ತೆರೆ ಮೇಲೆ ನಾಯಕಿ ಆಗಿ ಬಡ್ತಿ ಪಡೆದು... 'ಶ್ರಾವಣಿ ಸುಬ್ರಮಣ್ಯ', 'ಗಜಕೇಸರಿ', 'ಖುಷಿ ಖುಷಿಯಾಗಿ', 'ಮಳೆ' ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಅಮೂಲ್ಯಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಶೀಘ್ರದಲ್ಲಿ ನಟಿ ಅಮೂಲ್ಯ ಹಸೆಮಣೆ ಏರಲಿದ್ದಾರೆ. ಅಂದ್ಹಾಗೆ ನಟಿ ಅಮೂಲ್ಯ ರವರ ಕೈ ಹಿಡಿಯುತ್ತಿರುವ ಗಂಡು ಇವರೇ....

ಅಮೂಲ್ಯ 'ರಾಜಕುಮಾರ' ಜಗದೀಶ್

ಅಮೂಲ್ಯ 'ರಾಜಕುಮಾರ' ಜಗದೀಶ್

ನಟಿ ಅಮೂಲ್ಯ ಕೈಹಿಡಿಯುತ್ತಿರುವ ಹುಡುಗನ ಹೆಸರು ಜಗದೀಶ್. ಮಾಜಿ ಕಾರ್ಪರೇಟರ್ ರಾಮಚಂದ್ರ ರವರ ಪುತ್ರ ಈ ಜಗದೀಶ್. ರಾಜರಾಜೇಶ್ವರಿನಗರ ನಿವಾಸಿ.[ಬೇಬಿ ಡಾಲ್ ಅಮೂಲ್ಯಗೆ ಮದುವೆ ಆಯ್ತು.!]

ಎಂ.ಬಿ.ಎ ಮಾಡಿರುವ ಜಗದೀಶ್

ಎಂ.ಬಿ.ಎ ಮಾಡಿರುವ ಜಗದೀಶ್

ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡಿರುವ ಜಗದೀಶ್ ಎಂ.ಬಿ.ಎ ಪದವೀಧರ.[ಐಸ್ ಕ್ರೀಂ ತಿನ್ನುತ್ತಿದ್ದ ಟಪೋರಿ ಅಮೂಲ್ಯ 'ಪ್ರೇತಾತ್ಮ'ವಾದಾಗ]

ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬಕ್ಕೆ ಆಪ್ತ

ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬಕ್ಕೆ ಆಪ್ತ

ಅಸಲಿಗೆ, ಈ ಜಗದೀಶ್ ಮತ್ತು ತಂದೆ ರಾಮಚಂದ್ರ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ ರವರಿಗೆ ಆಪ್ತರು. ಗಣೇಶ್ ಕುಟುಂಬದ ಕಾರ್ಯಕ್ರಮಗಳಲ್ಲಿ ಜಗದೀಶ್ ಕೂಡ ಭಾಗವಹಿಸುತ್ತಿದ್ದರು.[ಗಣೇಶ್ ಅಮೂಲ್ಯರನ್ನ ಮತ್ತೆ ಒಂದು ಮಾಡೋದು ಕಷ್ಟ]

ಗಣೇಶ್ ಮನೆಯಲ್ಲಿಯೇ ಅಮೂಲ್ಯ-ಜಗದೀಶ್ ಪರಿಚಯ

ಗಣೇಶ್ ಮನೆಯಲ್ಲಿಯೇ ಅಮೂಲ್ಯ-ಜಗದೀಶ್ ಪರಿಚಯ

ಗಣೇಶ್ ರವರ ನಿವಾಸದಲ್ಲಿಯೇ ನಟಿ ಅಮೂಲ್ಯಗೆ ಜಗದೀಶ್ ರವರ ಪರಿಚಯ ಆಗಿತ್ತು. ಉಭಯ ಕುಟುಂಬಗಳ ನಿರ್ಧಾರದಂತೆ ಈಗ ಈ ಜೋಡಿಯ ಮದುವೆ ನಿಶ್ಚಯವಾಗಿದೆ.

ಜಾತಕ ಕೂಡಿ ಬಂದಿದೆ

ಜಾತಕ ಕೂಡಿ ಬಂದಿದೆ

ಮೂರು ತಿಂಗಳ ಹಿಂದೆ ಇಬ್ಬರ ಜಾತಕ ಕೂಡಿಬಂದಿತ್ತು. ಮೂರು ದಿನಗಳಿಂದ ನಟ ಗಣೇಶ್ ಮನೆಯಲ್ಲಿಯೇ ಮಾತುಕತೆ ನಡೆಯುತ್ತಿದ್ದು, ಈಗ ಉಭಯ ಕುಟುಂಬಗಳ ಸಮ್ಮತಿ ಮೇರೆಗೆ ವಿವಾಹ ನಿಕ್ಕಿಯಾಗಿದೆ.

ನಿಶ್ಚಿತಾರ್ಥ ಯಾವಾಗ.?

ನಿಶ್ಚಿತಾರ್ಥ ಯಾವಾಗ.?

ಒಕ್ಕಲಿಗ ಕುಟುಂಬಕ್ಕೆ ಸೇರಿರುವ ಅಮೂಲ್ಯ-ಜಗದೀಶ್ ರವರ ನಿಶ್ಚಿತಾರ್ಥ ಮಾರ್ಚ್ 6 ರಂದು ನಡೆಯಲಿದೆ. ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

English summary
Kannada Actress Amulya is getting hitched to Jagadish, son of EX Corporator Ramachandra.
Please Wait while comments are loading...

Kannada Photos

Go to : More Photos