»   » ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಚಾಂದಿನಿ ಚಮಕ್

ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಚಾಂದಿನಿ ಚಮಕ್

Posted by:
Subscribe to Filmibeat Kannada

'ಎ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆಡಗಿ ಚಾಂದಿನಿ ಇದೀಗ 'ಖೈದಿ' ಸಿನಿಮಾದೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿರುವ ಸಂಗತಿ ನಿಮಗೆ ಗೊತ್ತಿದೆ. ಈಗ ಇದೇ ಚಾಂದಿನಿ ಕಾಲಿವುಡ್ ಮತ್ತು ಬಾಲಿವುಡ್ ಗೆ ಹಾರುತ್ತಿದ್ದಾರೆ.

ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಎಸ್.ಎಂ.ವಸಂತ್ ಆಕ್ಷನ್ ಕಟ್ ಹೇಳುತ್ತಿರುವ ದ್ವಿಭಾಷಾ ಚಿತ್ರಕ್ಕೆ ಚಾಂದಿನಿ ಸೆಲೆಕ್ಟ್ ಆಗಿದ್ದಾರೆ. ತಮಿಳು ಮತ್ತು ಹಿಂದಿಯಲ್ಲಿ ಏಕ ಕಾಲದಲ್ಲಿ ರೆಡಿಯಾಗುವ ಈ ಚಿತ್ರದಲ್ಲಿ ಚಾಂದಿನಿ ಜೊತೆಗೆ ಹಾಲಿವುಡ್ ಮಟ್ಟದಲ್ಲಿಯೂ ಹೆಸರಾಗಿರುವ ಗುಲ್ಷನ್ ಗ್ರೋವರ್ ಅಭಿನಯಿಸಲಿದ್ದಾರೆ. ["ಸಂಜೆ ಕೆಂಪಾದಾಗ" ಚಲೆಗಯಿ ಚಾಂದನಿ ಆಗಯಿ]

Kannada Actress Chandini to make Bollywood and Kollywood Debut

ಮೂಲತಃ ಕಾಲಿವುಡ್ ನ ಪ್ರಸಿದ್ಧ ನಿರ್ದೇಶಕ ಭಾರತೀರಾಜಾ ಅವರ ಶಿಷ್ಯ ಎಸ್.ಎಂ.ವಸಂತ್. ಹೀಗಾಗಿ ಭಾರತೀರಾಜಾ ಅವರ ಸಮ್ಮುಖದಲ್ಲಿಯೇ, ಈ ಪ್ರಾಜೆಕ್ಟ್ ನ ಅನೌನ್ಸ್ ಮಾಡಿದ್ರು ಎಸ್.ಎಂ.ವಸಂತ್. ದ್ವಿಭಾಷೆಯಲ್ಲಿ ಚಿತ್ರ ರೆಡಿಯಾಗುವುದರಿಂದ ಬಾಲಿವುಡ್, ಕಾಲಿವುಡ್ ಮತ್ತು ಹಾಲಿವುಡ್ ನ ತಂತ್ರಜ್ಞರನ್ನ ಬಳಸಿಕೊಳ್ಳುತ್ತಾರಂತೆ.

ಏಕಕಾಲಕ್ಕೆ ಬಾಲಿವುಡ್ ಮತ್ತು ಕಾಲಿವುಡ್ ಗೆ ಹಾರುತ್ತಿರುವುದರಿಂದ ಫುಲ್ ಖುಷ್ ಆಗಿರುವ ಚಾಂದಿನಿ, ''ನಾನು ಎಲ್ಲಿಯೇ ಹೋದರೂ, ಕನ್ನಡದಿಂದ ಬಂದವಳೆಂದು ಹೇಳುತ್ತೇನೆ. ಈ ಚಿತ್ರಕ್ಕೆ ನನ್ನನ್ನ ಆಯ್ಕೆ ಮಾಡಿರುವುದು ನನಗೆ ಅಚ್ಚರಿ ತಂದಿದೆ. ತಮ್ಮ ನಿರೀಕ್ಷೆಗೆ ತಕ್ಕಂತೆ ನಾನು ಅಭಿನಯಿಸುತ್ತೇನೆ'' ಅಂತಾರೆ ಚಾಂದಿನಿ. [''ತಾಳೆ ಹೂವ ಪೊದೆಯಿಂದ..'' ರೀಮಿಕ್ಸ್ ಹಾಡು ನೋಡಿದ್ದೀರಾ?]

Kannada Actress Chandini to make Bollywood and Kollywood Debut

ಅಂದ್ಹಾಗೆ, ಇನ್ನೂ ಹೆಸರಿಡದ ಈ ಚಿತ್ರ ಕಾದಂಬರಿ ಆಧಾರಿತ. ಯಾವ ಕಾದಂಬರಿ ಅನ್ನೋದನ್ನ ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada Actress Chandini of 'A' fame is making her debut in Kollywood and Bollywood through S.M.Vasanth directorial Bilingual yet-to-be titled film.
Please Wait while comments are loading...

Kannada Photos

Go to : More Photos