»   » ಅನಾರೋಗ್ಯದಿಂದ ನಟಿ ರಮ್ಯಾ ಅಸ್ವಸ್ಥ: ವಿಕ್ರಂ ಆಸ್ಪತ್ರೆಗೆ ದಾಖಲು

ಅನಾರೋಗ್ಯದಿಂದ ನಟಿ ರಮ್ಯಾ ಅಸ್ವಸ್ಥ: ವಿಕ್ರಂ ಆಸ್ಪತ್ರೆಗೆ ದಾಖಲು

Posted by:
Subscribe to Filmibeat Kannada

ಅನಾರೋಗ್ಯದ ಕಾರಣದಿಂದಾಗಿ ಸ್ಯಾಂಡಲ್ ವುಡ್ ಕ್ವೀನ್... ಮಂಡ್ಯದ ಮಾಜಿ ಸಂಸದೆ... ನಟಿ ರಮ್ಯಾ ಇಂದು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಮ್ಯಾ ರವರಿಗೆ ಫುಡ್ ಪಾಯ್ಸನ್ನಿಂಗ್ ಆಗಿದ್ದು, ಶನಿವಾರ (ಮಾರ್ಚ್ 11) ಸಂಜೆ ಹೊತ್ತಿಗೆ ತುರ್ತು ಚಿಕಿತ್ಸೆ ಪಡೆಯಲು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಈಗಾಗಲೇ ರಮ್ಯಾ ರವರಿಗೆ ಅವಶ್ಯಕ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.['ಎಲ್ಲಿದ್ದಾರೆ ರಮ್ಯಾ' ಎನ್ನುತ್ತಿದ್ದವರಿಗೆಲ್ಲ ಇಲ್ಲೊಂದು ಬ್ರೇಕಿಂಗ್ ನ್ಯೂಸ್]

kannada-actress-congress-politician-ramya-hospitalized

'ರಮ್ಯಾ ರವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ರಮ್ಯಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ'' ಎಂದು ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಧೀರಜ್ ಕಾರಂತ್ (Consultant, Medical Gastroenterologist) ತಿಳಿಸಿದ್ದಾರೆ. [ಮೋಹಕ ತಾರೆ ರಮ್ಯಾ ಆಸ್ವತ್ರೆಗೆ ದಾಖಲು!]

ರಮ್ಯಾ ಸಂಪೂರ್ಣ ಗುಣಮುಖರಾದಲ್ಲಿ ನಾಳೆ ವಿಕ್ರಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

English summary
Kannada Actress, Congress Politician, EX MP Ramya aka Divya Spandana admitted to Vikram hospital, Bengaluru after complaining Food Poisoning.
Please Wait while comments are loading...

Kannada Photos

Go to : More Photos