»   » ನಾಚಿಕೆಗೇಡು: ಕನ್ನಡ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್'! ಸಾಕ್ಷಿ ಬೇಕಾ?

ನಾಚಿಕೆಗೇಡು: ಕನ್ನಡ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್'! ಸಾಕ್ಷಿ ಬೇಕಾ?

Written by: ಒನ್ಇಂಡಿಯಾ ಸಿಬ್ಬಂದಿ
Subscribe to Filmibeat Kannada

ನಟಿ ಆಗ್ಬೇಕು ಅಂದ್ರೆ 'ಕಾಂಪ್ರೊಮೈಸ್' ಮಾಡ್ಕೊಳ್ಬೇಕು, ಇದೆಲ್ಲಾ ಇಲ್ಲಿ ಕಾಮನ್.....ಎಂಬ ಮಾತುಗಳು ಹಲವು ಬಾರಿ ಬಾಲಿವುಡ್ ಅಂಗಳದಿಂದ ಕೇಳಿ ಬಂದಿರುವುದು ಎಲ್ಲರಿಗೂ ಗೊತ್ತಿದೆ.

ಬಾಲಿವುಡ್ ಮಾತ್ರ ಅಲ್ಲ, ಸ್ಯಾಂಡಲ್ ವುಡ್ ನಲ್ಲೂ 'ಕಾಮುಕ'ರ ಸಂಖ್ಯೆ ಕಡಿಮೆ ಏನಿಲ್ಲ. ಮುಂಬೈನಿಂದ ಜಿಂಕೆ ಜಿಗಿದು ಬಂದಿದೆ ಅಂತ ಗೊತ್ತಾದ್ರೆ ಸಾಕು, ಕೂಡಲೆ 'ಬೇಟೆ' ಆಡಲು ತುದಿಗಾಲಲ್ಲಿ ನಿಲ್ಲುವ 'ಮೃಗ'ಗಳು ಕನ್ನಡ ಚಿತ್ರರಂಗದಲ್ಲೂ ಇವೆ. ಇಂತಹ ನಾಚಿಕೆಗೇಡಿನ ಸಂಗತಿ ಕನ್ನಡದ ಖ್ಯಾತ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಟಾಬಯಲಾಗಿತ್ತು. ['ಲೈಂಗಿಕ ಕಿರಿಕಿರಿ' ಬಗ್ಗೆ ಬಾಲಿವುಡ್ ಬೆಡಗಿಯ ಬಿಚ್ಚು ಮಾತು]

ಈಗ ಕನ್ನಡ ಚಿತ್ರರಂಗದಲ್ಲಿ ಇರುವ 'ಕಾಸ್ಟಿಂಗ್ ಕೌಚ್' ಕಂಡು ಶಾಕ್ ಆಗಿರುವ ನಟಿಯೊಬ್ಬರು ಮನಬಿಚ್ಚಿ ಮಾತನಾಡಿದ್ದಾರೆ.

ಯಾರು 'ಆ' ನಟಿ?

ಇದೇ ವಾರ ತೆರೆ ಕಾಣಲು ಸಜ್ಜಾಗಿರುವ 'ಗೋಲಿಸೋಡ' ಚಿತ್ರದಲ್ಲಿ ಅಭಿನಯಿಸಿರುವ ನಟಿ ಪ್ರಿಯಾಂಕಾ.ಎಂ.ಜೈನ್ ಕನ್ನಡ ಚಿತ್ರರಂಗದಲ್ಲಿ ಇರುವ 'ಕಾಸ್ಟಿಂಗ್ ಕೌಚ್' ಕುರಿತು 'ಬೆಂಗಳೂರು ಮಿರರ್'ಗೆ ನೀಡಿರುವ ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದಾರೆ. [ಕಾಮುಕ ಕಾಮಿಡಿ ಕಿಂಗ್ ಕಾರಿನಲ್ಲಿ ಮಾಡಿದ್ದೇನು?]

ಸ್ವಂತ ಅನುಭವ

''ಕೆಲವು ವ್ಯಕ್ತಿಗಳಿದ್ದಾರೆ. ಅವರ ಹೆಸರು ಬೇಡ. ಅವರ ಪ್ರಕಾರ ಮುಂಬೈನಿಂದ ಬಂದ ಹೆಣ್ಮಕ್ಳು ಅಂದ್ರೆ 'ಒಂದ್ ಚಾನ್ಸ್'ಗಾಗಿ ಏನ್ ಬೇಕಾದರೂ ಮಾಡ್ಬಹುದು ಎಂಬ ಭಾವನೆ ಇದೆ'' ಅಂತ ಸಂದರ್ಶನದಲ್ಲಿ ಪ್ರಿಯಾಂಕಾ.ಎಂ.ಜೈನ್ ಹೇಳಿದ್ದಾರೆ.['ಕಾಮುಕ' ನಿರ್ದೇಶಕರ ಮುಖವಾಡ ಕಳಚಿದ ಟಿವಿ9]

ಕಾಂಪ್ರೊಮೈಸ್ ಆಗ್ಬೇಕು

''ತೆರೆಮೇಲೆ ಮಾತ್ರ ಎಕ್ಸ್ ಪೋಸ್ ಮಾಡುವುದಲ್ಲ. ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ 'ಕಾಂಪ್ರೊಮೈಸ್' ಆದರೆ 'ನಾಯಕಿ' ಪಾತ್ರ ಸಿಗುವ ಆಫರ್ ಗಳು ನನಗೂ ಬಂದಿತ್ತು'' ಎನ್ನುತ್ತಾರೆ ಪ್ರಿಯಾಂಕಾ.ಎಂ.ಜೈನ್

ಆಫರ್ಸ್ ರಿಜೆಕ್ಟ್ ಮಾಡಿದ್ದ ಪ್ರಿಯಾಂಕಾ.ಎಂ.ಜೈನ್

''ಇಂತಹ ಆಫರ್ಸ್ ಬಂದಿದ್ದು ನೋಡಿ ತುಂಬಾ ಶಾಕ್ ಆಯ್ತು. ನಮ್ಮ ತಂದೆ-ತಾಯಿ ಕೂಡ ಶಾಕ್ ಆಗ್ಬಿಟ್ರು. ಒಟ್ಟು ಮೂರು ಆಫರ್ ಗಳನ್ನ ಇದೇ ಕಾರಣಕ್ಕೆ ರಿಜೆಕ್ಟ್ ಮಾಡಿದ್ದೆ'' - ಪ್ರಿಯಾಂಕಾ.ಎಂ.ಜೈನ್

ಸೀರಿಯಸ್ ಪ್ರಾಬ್ಲಂ

''ಕಾಸ್ಟಿಂಗ್ ಕೌಚ್ ಎನ್ನುವುದು ಸೀರಿಯಸ್ ಪ್ರಾಬ್ಲಂ. ಅದರಲ್ಲೂ ಹೊಸಬರಿಗೆ ಇದು ದೊಡ್ಡ ಕಿರಿಕಿರಿ. ನನ್ನ ತಾಯಿಗೆ ನಾನು ನಟಿ ಆಗ್ಬೇಕೆಂಬ ಆಸೆ. ಆದ್ರೆ, ಅವರಿಗೆ 'ಕಾಸ್ಟಿಂಗ್ ಕೌಚ್' ಬಗ್ಗೆ ಅರಿವಿರಲಿಲ್ಲ. ಇಂಡಸ್ಟ್ರಿಯಲ್ಲಿ ಎಷ್ಟೋ ಜನಕ್ಕೆ ಈ ತರಹ ಆಗಿದೆ. ಆದ್ರೆ, ಯಾರೂ ಮುಂದೆ ಬಂದು ಮಾತನಾಡುವುದಿಲ್ಲ'' - ಪ್ರಿಯಾಂಕಾ.ಎಂ.ಜೈನ್

'ಗೋಲಿಸೋಡ' ಒಪ್ಪಿಕೊಂಡಿದ್ದು ಹೇಗೆ?

''ಟ್ಯಾಲೆಂಟ್ ಗೆ ಬೆಲೆ ಕೊಡುವ ಒಂದೊಳ್ಳೆ ಟೀಮ್ ಜೊತೆ ಕೆಲಸ ಮಾಡಲು ನಾನು ಕಾಯುತ್ತಿದ್ದೆ. ಸಿಟಿ ಮಾರ್ಕೆಟ್ ಗೆ ಹೋಗಿದ್ದಾಗ, ಲೊಕೇಷನ್ ನೋಡಲು ಬಂದಿದ್ದ ನಿರ್ದೇಶಕ ರಘು ಜಯ ನನ್ನನ್ನ 'ಗೋಲಿಸೋಡ' ಚಿತ್ರಕ್ಕೆ ಆಯ್ಕೆ ಮಾಡಿದರು. ಈ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ'' - ಪ್ರಿಯಾಂಕಾ.ಎಂ.ಜೈನ್

ಕನ್ನಡದಲ್ಲಿ ಇವರದ್ದು ಎರಡನೇ ಸಿನಿಮಾ

ಇನ್ನೂ ಹದಿನೆಂಟರ ಹರೆಯದ ಪ್ರಿಯಾಂಕಾ.ಎಂ.ಜೈನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 'ರಂಗಿತರಂಗ' ಚಿತ್ರದ ಮೂಲಕ. ಅದರಲ್ಲಿ ಒಂದು ಹಾಡಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಪ್ರಿಯಾಂಕಾ.ಎಂ.ಜೈನ್ 'ಗೋಲಿಸೋಡ' ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದಾರೆ. (ಕೃಪೆ: ಬೆಂಗಳೂರು ಮಿರರ್)

English summary
Kannada Actress Priyanka.M.Jain who is playing lead in Kannada Movie 'Goli Soda' has opened up about 'Casting Couch' in Sandalwood while speaking to Bangalore Mirror.
Please Wait while comments are loading...

Kannada Photos

Go to : More Photos