»   » ವಾವ್...ರಾಗಿಣಿ ಬದಲಾಗಿದ್ದಾರೆ.! ಹೊಸ ಫೋಟೋ ನೋಡಿ...

ವಾವ್...ರಾಗಿಣಿ ಬದಲಾಗಿದ್ದಾರೆ.! ಹೊಸ ಫೋಟೋ ನೋಡಿ...

Posted by:
Subscribe to Filmibeat Kannada

'ಕೆಂಪೇಗೌಡ' ಚಿತ್ರದಲ್ಲಿ ಕೆಂಪಗೆ, ತೆಳ್ಳಗೆ, ಬಳುಕುವ ಬಳ್ಳಿಯಂತೆ ಇದ್ದ ನಟಿ ರಾಗಿಣಿ ದ್ವಿವೇದಿ ಬರ್ತಾ ಬರ್ತಾ ಹೇಗೆ ಬದಲಾದರು ಅನ್ನೋದು ನಿಮಗೆ ಚೆನ್ನಾಗಿ ಗೊತ್ತು.

'ತುಪ್ಪದ ಹುಡುಗಿ' ಆಗಿದ್ದ ರಾಗಿಣಿ, 'ಆಕ್ಷನ್ ಕ್ವೀನ್' ಪಟ್ಟಕ್ಕೆ ಏರಿದ್ಮೇಲಂತೂ ಯದ್ವಾ ತದ್ವಾ ದಪ್ಪ ಆಗ್ಬಿಟ್ರು. ಅದಕ್ಕೆ ಸರಿಯಾಗಿ ಸಾಲು ಸಾಲು ಸಿನಿಮಾಗಳೂ ನೆಲಕಚ್ಚಿದ್ವು. ['ನಾಟಿ ಕೋಳಿ' ರಾಗಿಣಿ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್]

kannada-actress-ragini-dwivedi-s-new-photoshoot-after-losing-weight-021982

ಎಲ್ಲದರಿಂದ ಪಾಠ ಕಲಿತಿರುವ ರಾಗಿಣಿ ದ್ವಿವೇದಿ ಕಳೆದ ಕೆಲ ತಿಂಗಳಿನಿಂದ ಪ್ರತಿ ದಿನ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ. ಅದರ ಪರಿಣಾಮ ರಾಗಿಣಿ ಮರಳಿ 'ಗಿಣಿ' ತರಹ ಆಗಿದ್ದಾರೆ. [ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ]

ಕೆ.ಜಿ ಲೆಕ್ಕದಲ್ಲಿ ತೂಕ ಇಳಿಸಿಕೊಂಡಿರುವ ರಾಗಿಣಿ ದ್ವಿವೇದಿ ಈಗ ಮತ್ತೆ ಮೊದಲಿನ ಹಾಗೆ ಸಪೂರ ಮೈಕಟ್ಟಿನಿಂದ ಕಂಗೊಳಿಸುತ್ತಿದ್ದಾರೆ. ಅದೇ ಖುಷಿಯಲ್ಲಿ ರಾಗಿಣಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಅದರ ಝಲಕ್ ಇಲ್ಲಿದೆ ನೋಡಿ....

ವಾವ್...ರಾಗಿಣಿ ಬದಲಾಗಿದ್ದಾರೆ.! ಹೊಸ ಫೋಟೋ ನೋಡಿ...

ಅಸಲಿಗೆ ರಾಗಿಣಿ ದಪ್ಪ ಆಗಲು 'ಆಕ್ಷನ್' ಸಿನಿಮಾಗಳೇ ಕಾರಣವಂತೆ. ಸ್ಟಂಟ್ ಸೀನ್ ಮಾಡುವಾಗ ರಾಗಿಣಿ ಹಲವು ಬಾರಿ ಪೆಟ್ಟು ತಿಂದಿದ್ದಾರೆ. ನೋವು ನಿವಾರಣೆಗಾಗಿ ವೈದ್ಯರು ರಾಗಿಣಿಗೆ Steriods ಗುಳಿಗೆಗಳನ್ನ ನೀಡಿದ್ದರಿಂದ ತೂಕ ಹೆಚ್ಚಾಗಿತ್ತು. [ಕಾಫಿ ಎಸ್ಟೇಟ್ ನಲ್ಲಿ ತುಪ್ಪದ ಹುಡುಗಿ ರಾಗಿಣಿಗೆ ಏನು ಕೆಲಸ?]

ಇದೀಗ ವೈದ್ಯರ ಸಲಹೆ ಮೇಲೆ ರಾಗಿಣಿ ಡಯೆಟ್ ಜೊತೆಗೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ. ರಿಸಲ್ಟ್ ಈಗ ನಿಮ್ಮ ಕಣ್ಣ ಮುಂದಿದೆ.

English summary
Kannada Actress Ragini Dwivedi has lost weight and her new look is hotter than ever. Check out her new Photoshoot pictures.
Please Wait while comments are loading...

Kannada Photos

Go to : More Photos