»   » ಬಿಡುವಿನ ವೇಳೆ ಚಿತ್ರಕಲೆ ಮಾಡಲು ರಾಗಿಣಿಗೆ ಇವರೇ ಸ್ಫೂರ್ತಿ

ಬಿಡುವಿನ ವೇಳೆ ಚಿತ್ರಕಲೆ ಮಾಡಲು ರಾಗಿಣಿಗೆ ಇವರೇ ಸ್ಫೂರ್ತಿ

Posted by:
Subscribe to Filmibeat Kannada

ಸದ್ಯಕ್ಕೆ ಬ್ಯಾಕ್ ಟು ಬ್ಯಾಕ್ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಶೂಟಿಂಗ್ ಒತ್ತಡ ತಗ್ಗಿಸಿಕೊಳ್ಳಲು ಪೇಂಟಿಂಗ್ ಮೊರೆ ಹೋಗುತ್ತಿದ್ದಾರಂತೆ.

ಹಾಗಂತ ಖುದ್ದು ನಟಿ ರಾಗಿಣಿ ಅವರೇ ಹೇಳಿಕೊಂಡಿದ್ದಾರೆ. 'ಪೇಂಟಿಂಗ್ ಮಾಡುವುದರಿಂದ ಒತ್ತಡ ತಗ್ಗಿ ಉತ್ಸಾಹ ಹೆಚ್ಚುತ್ತದೆ, ಜೊತೆಗೆ ನಮ್ಮ ಯೋಚನೆಗಳು ಕೂಡ ಕಲರ್ ಫುಲ್ ಆಗುತ್ತದೆ ಎನ್ನುತ್ತಾರೆ ರಾಗಿಣಿ.[ಬಾಲಿವುಡ್ ನಲ್ಲೂ ರಾಗಿಣಿ ಅವರ ತುಪ್ಪ ಘಮ ಘಮ ಅನ್ನುತ್ತಿದೆ]'ಕಳೆದ 5 ತಿಂಗಳಿನಿಂದ ಪೇಂಟಿಂಗ್ ಅಭ್ಯಾಸ ಮಾಡುತ್ತಾ ಬಂದಿದ್ದೇನೆ. ಬಿಳಿ ಹಾಳೆಗಳ ಮೇಲೆ ನನ್ನ ಸೃಜನಶೀಲತೆಗೆ ತಕ್ಕಂತೆ ರೇಖೆಗಳನ್ನು ಗೀಚಿ ಅದಕ್ಕೆ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದೇನೆ' ಎಂದು ರಾಗಿಣಿ ಹೇಳಿಕೊಂಡಿದ್ದಾರೆ.'ನನ್ನಲ್ಲಿ ಸೃಜನಶೀಲತೆ ಬರುವವರೆಗೆ ನನ್ನ ಪೇಂಟಿಂಗ್ ಗೆ ಕೊನೆ ಇಲ್ಲ. ಇದನ್ನು ವೃತ್ತಿಯಾಗಿ ತೆಗೆದುಕೊಂಡಿಲ್ಲ. ನನ್ನ ಆತ್ಮತೃಪ್ತಿಗಾಗಿ ಮಾಡುತ್ತಿದ್ದೇನೆ. ಶೀಘ್ರದಲ್ಲೇ ನನ್ನದೇ ಪೇಂಟಿಂಗ್ ಒಂದು ಹೊರ ಬರಲಿದೆ ಎಂದು ರಾಗಿಣಿ ಖ್ಯಾತ ದಿನಪತ್ರಿಕೆಯ ಸಂದರ್ಶನವೊಂದರಲ್ಲಿ ನುಡಿದಿದ್ದಾರೆ.[ವಾವ್.! ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ]ಅಂದಹಾಗೆ ರಾಗಿಣಿ ಅವರಿಗೆ ಪೇಂಟಿಂಗ್ ಕಲಿಯಲು ಸ್ಫೂರ್ತಿ ಕೊಟ್ಟವರು ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರಂತೆ. ಶೂಟಿಂಗ್ ಸೆಟ್ ನಲ್ಲಿ ಸಲ್ಲು ಅವರು ಬಿಡುವಿನ ವೇಳೆಯಲ್ಲಿ ಪೇಂಟಿಂಗ್ ಮಾಡುತ್ತಿರುತ್ತಾರೆ. ಅವರೇ ನನಗೆ ಸ್ಫೂರ್ತಿ ಎಂದು ತುಪ್ಪದ ಬೆಡಗಿ ನುಡಿದಿದ್ದಾರೆ.


ಪೇಂಟಿಂಗ್ ನನಗೆ ಅತ್ಯಂತ ಖುಷಿ ಕೊಡುತ್ತಿದೆ. ಮಾತ್ರವಲ್ಲದೇ ಈ ಅಭ್ಯಾಸದಿಂದ ಕೆಲವರನ್ನು ದೂರ ಇಡಲು ಸಹಕಾರಿಯಾಗಿದೆ ಎಂದು ನಗುತ್ತಾರೆ ರಾಗಿಣಿ ಅವರು.['ತುಪ್ಪದ ಬೆಡಗಿ'ಗೆ ಸಿಕ್ಕ ಹೊಸ ಬಿರುದು ಯಾವುದು ಗೊತ್ತಾ?]ಸುಮಾರು 15 ಕೆ.ಜಿ ತೂಕ ಕಡಿಮೆ ಮಾಡಿಕೊಂಡು ಸಖತ್ ಸ್ಲಿಮ್ ಬ್ಯೂಟಿ ಆಗಿರುವ ರಾಗಿಣಿ 'ನಾನೇ ನೆಕ್ಸ್ಟ್ ಸಿಎಂ' ಚಿತ್ರದ ಹಾಡುಗಳ ಶೂಟಿಂಗ್ ಮುಗಿಸಿ, 'ರಣಚಂಡಿ' ಚಿತ್ರದ ಆಡಿಯೋ ಬಿಡುಗಡೆ ನಿರೀಕ್ಷೆ ಮಾಡುತ್ತಿದ್ದಾರೆ.

English summary
Kannada Actress Ragini Dwivedi, if not on sets, is at home painting. "I have started painting pots. I felt it is a good stress reliever and am loving it. Whenever I get a day off, I make sure to apply my mind on colours. Says Actress Ragini.
Please Wait while comments are loading...

Kannada Photos

Go to : More Photos