»   » 'ಸಿಂಪಲ್ ಹುಡ್ಗಿ' ಶ್ವೇತಾ ಶ್ರೀವಾತ್ಸವ್ ಡೈರೆಕ್ಟರ್ ಕ್ಯಾಪ್ ತೊಡೋದು ಯಾವಾಗ?

'ಸಿಂಪಲ್ ಹುಡ್ಗಿ' ಶ್ವೇತಾ ಶ್ರೀವಾತ್ಸವ್ ಡೈರೆಕ್ಟರ್ ಕ್ಯಾಪ್ ತೊಡೋದು ಯಾವಾಗ?

Posted by:
Subscribe to Filmibeat Kannada

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಲ್ಲಿ ಮಾತಲ್ಲೇ ಸುಸುರ್ಬತ್ತಿ ಹಚ್ಚಿ, ಪಡ್ಡೆಗಳ ಕನಸಿನ ರಾಣಿಯಾಗಿರುವ ನಟಿ ಶ್ವೇತಾ ಶ್ರೀವಾತ್ಸವ್ ನಿರ್ದೇಶಕಿ ಆಗಲಿದ್ದಾರೆ ಅಂತ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೀವೆಲ್ಲಾ ಓದಿದ್ರಿ.

ಸದ್ಯ 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮತ್ತು ಸಿನಿಮಾ ಪ್ರಮೋಷನ್ ನಲ್ಲಿ ತೊಡಗಿರುವ 'ಸಿಂಪಲ್ ಕ್ವೀನ್' ಶ್ವೇತಾ ಶ್ರೀವಾತ್ಸವ್ ಡೈರೆಕ್ಟರ್ ಕ್ಯಾಪ್ ಯಾವಾಗ ತೊಡಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. [ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಇನ್ಮುಂದೆ ನಿರ್ದೇಶಕಿ]

kannada-actress-shwetha-srivatsav-will-direct-movie-soon

ಶ್ವೇತಾ ಶ್ರೀವಾತ್ಸವ್ ಕೈಯಲ್ಲೀಗ ಎರಡ್ಮೂರು ಪ್ರಾಜೆಕ್ಟ್ ಗಳಿವೆ. ತಾವು ಕಮಿಟ್ ಆಗಿರುವ ಪ್ರಾಜೆಕ್ಟ್ ಗಳು ಕಂಪ್ಲೀಟ್ ಆದ ಬಳಿಕ ಆಕ್ಷನ್ ಕಟ್ ಹೇಳುವುದಕ್ಕೆ ಶ್ವೇತಾ ಸಿದ್ಧ. [ಸಂಕ್ರಾಂತಿ ಸಂಭ್ರಮದಲ್ಲಿ 'ಸಿಂಪಲ್ ಹುಡುಗಿ' ಶ್ವೇತಾ ಶ್ರೀವಾತ್ಸವ್]

ಈಗಾಗಲೇ ತಮ್ಮ ನಿರ್ದೇಶನದಲ್ಲಿ ಮೂಡಿಬರುವ ಚಿತ್ರದ ಸ್ಕ್ರಿಪ್ಟಿಂಗ್ ಕಾರ್ಯದಲ್ಲಿ ಶ್ವೇತಾ ತೊಡಗಿದ್ದಾರೆ. ತೀರಾ ಎಚ್ಚರಿಕೆ ವಹಿಸಿ ತಮ್ಮ ಕನಸಿನ ಕೂಸಿಗೆ ರೂಪ ಕೊಡುವುದರಲ್ಲಿ ಶ್ವೇತಾ ಬಿಜಿ. [ಫಿಲಂಫೇರ್ ಪ್ರಶಸ್ತಿ - ಯಶ್ ಮತ್ತು ಶ್ವೇತಾ ಶ್ರೀವಾತ್ಸವ್ ಬೆಸ್ಟ್.!]

ನಟನೆ ಜೊತೆಗೆ ನಿರ್ದೇಶನದ ಹೊಣೆ ಹೊರಲು ತಯಾರಾಗಿರುವ ಶ್ವೇತಾ ಶ್ರೀವಾತ್ಸವ್ ಗೆ ನೀವೂ ಆಲ್ ದಿ ಬೆಸ್ಟ್ ಹೇಳಿಬಿಡಿ....

English summary
Kannada Actress Shwetha Srivatsav of 'Simpallag ond love story' fame is all set to direct a movie by next year.
Please Wait while comments are loading...

Kannada Photos

Go to : More Photos