twitter
    For Quick Alerts
    ALLOW NOTIFICATIONS  
    For Daily Alerts

    'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ನಿರ್ದೇಶಕ ಹೇಮಂತ್ ರಾವ್ ಗೆ ರಾಷ್ಟ್ರ ಪ್ರಶಸ್ತಿ!

    By Bharath Kumar
    |

    'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ರಾವ್ ಗೆ 'ಗೊಲ್ಲಪುಡಿ ಶ್ರೀನಿವಾಸ್' ಅವರ ಹೆಸರಿನಲ್ಲಿ ನೀಡುವ ರಾಷ್ಟ್ರ ಪ್ರಶಸ್ತಿ ಲಭಿಸಿದೆ.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]

    ಪ್ರತಿವರ್ಷ ಚೊಚ್ಚಲ ಸಿನಿಮಾ ನಿರ್ದೇಶಕರಿಗೆ ನೀಡಲಾಗುವ ಈ ಪ್ರಶಸ್ತಿಯನ್ನ, 2017ನೇ ಸಾಲಿನಲ್ಲಿ ಕನ್ನಡದ ನಿರ್ದೇಶಕ ಹೇಮಂತ್ ರಾವ್ ಗೆ ನೀಡಲಾಗುತ್ತಿದೆ. ಈ ಮೂಲಕ 'ಗೊಲ್ಲಪುಡಿ ಶ್ರೀನಿವಾಸ್' ಪ್ರಶಸ್ತಿ ಪಡೆದ ಮೊದಲ ಕನ್ನಡ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಹೇಮಂತ್ ಪಾತ್ರರಾಗಿದ್ದಾರೆ.

    ಚೊಚ್ಚಲ ಸಿನಿಮಾಗೆ 'ಗೊಲ್ಲಪುಡಿ ಶ್ರೀನಿವಾಸ್' ಪ್ರಶಸ್ತಿ!

    ಚೊಚ್ಚಲ ಸಿನಿಮಾಗೆ 'ಗೊಲ್ಲಪುಡಿ ಶ್ರೀನಿವಾಸ್' ಪ್ರಶಸ್ತಿ!

    ಖ್ಯಾತ ನಿರ್ದೇಶಕ 'ಗೊಲ್ಲಪುಡಿ ಶ್ರೀನಿವಾಸ್' ಅವರ ಹೆಸರಿನಲ್ಲಿ, ಚೊಚ್ಚಲ ಸಿನಿಮಾ ನಿರ್ದೇಶಕರಿಗೆ ನೀಡುವ ಪ್ರಶಸ್ತಿಯನ್ನ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕಾಗಿ ನಿರ್ದೇಶಕ ಹೇಮಂತ್ ರಾವ್ ಮುಡಿಗೇರಿಸಿಕೊಂಡಿದ್ದಾರೆ.['ಗೋಧಿ ಬಣ್ಣ' ಚಿತ್ರವನ್ನು ತಂದೆಗೆ ಅರ್ಪಿಸಿದ ರಕ್ಷಿತ್ ಶೆಟ್ಟಿ]

    20 ಚಿತ್ರಗಳು ನಾಮನಿರ್ದೇಶನಗೊಂಡಿತ್ತು

    20 ಚಿತ್ರಗಳು ನಾಮನಿರ್ದೇಶನಗೊಂಡಿತ್ತು

    ಮಲಯಾಳಂ, ಮಣಿಪುರಿ, ತಮಿಳು, ಬೆಂಗಾಳಿ, ಅಸ್ಸಾಂ, ಇಂಗ್ಲೀಷ್, ಹಿಂದಿ ಸೇರಿದಂತೆ ದೇಶದ 20 ಚಿತ್ರಗಳು ಈ ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿದ್ದವು. ಇವುಗಳ ಪೈಕಿ ಕನ್ನಡದ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ ಪ್ರಶಸ್ತಿ ನೀಡಿದ್ದಾರೆ.[ತಮಿಳು-ತೆಲುಗು ಅಂಗಳಕ್ಕೆ ಜಿಗಿದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು']

    ಪ್ರಶಸ್ತಿ ಮೊತ್ತ ಎಷ್ಟು?

    ಪ್ರಶಸ್ತಿ ಮೊತ್ತ ಎಷ್ಟು?

    ಆಗಸ್ಟ್ 12 ರಂದು ಚೆನ್ನೈನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, 'ಗೊಲ್ಲಪುಡಿ ಶ್ರೀನಿವಾಸ್' ಪ್ರಶಸ್ತಿ ಪಡೆದವರಿಗೆ 1.5 ಲಕ್ಷ ನಗದು ಮತ್ತು ಟ್ರೋಫಿ ನೀಡಲಾಗುವುದು.[ಬಾಲಿವುಡ್ ನಲ್ಲೂ ಮಿನುಗಲಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು']

    ಗೊಲ್ಲಪುಡಿ ಶ್ರೀನಿವಾಸ್ ಯಾರು?

    ಗೊಲ್ಲಪುಡಿ ಶ್ರೀನಿವಾಸ್ ಯಾರು?

    ಅಂದ್ಹಾಗೆ, ಗೊಲ್ಲಪುಡಿ ಶ್ರೀನಿವಾಸ್ ಅವರು ತೆಲುಗಿನ ಖ್ಯಾತ ನಿರ್ದೇಶಕರು. ಇವರ ಹೆಸರಿನಲ್ಲಿ ಪ್ರತಿವರ್ಷವೂ ಚೊಚ್ಚಲ ನಿರ್ದೇಶಕರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗುವುದು. 1998 ರಿಂದ ಈ ಪ್ರಶಸ್ತಿಯನ್ನ ನೀಡಲಾಗುತ್ತಿದೆ. ಇದಕ್ಕೂ ಮುಂಚೆ ಅಮೀರ್ ಖಾನ್, ಜಾನಕಿ ವಿಶ್ವನಾಥ್, ಅಮಿತ್ ರೈ, ಸೇರಿದಂತೆ ಹಲವರು ಈ ಪ್ರಶಸ್ತಿ ಪಡೆದಿದ್ದಾರೆ.

    'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಬಗ್ಗೆ....!

    'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಬಗ್ಗೆ....!

    ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್ ಅಭಿನಯಿಸಿದ್ದ ಈ ಚಿತ್ರ, ತಂದೆ ಮತ್ತು ಮಗನ ಸಂಬಂಧದ ಕುರಿತಗಾಗಿತ್ತು. ಈ ಚಿತ್ರವನ್ನ ಪುಷ್ಕರ್ ಮಲ್ಲಿಕಾರ್ಜುನ ನಿರ್ಮಾಣ ಮಾಡಿದ್ದು, ಹೇಮಂತ್ ರಾವ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದರು. ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕಿತ್ತು.

    English summary
    Hemanth Rao, the Kannada director who made Godhi Banna Sadharana Mykattu in 2016, has won this year's Gollapudi Srinivas National Award for Best Debut Film.
    Saturday, March 18, 2017, 10:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X