»   » 'ಸಿಂಪಲ್' ಸುನಿ ಜೊತೆ ಸೇರಿ 'ಚಮಕ್' ಕೊಡ್ತಾರೆ ಗಣೇಶ್

'ಸಿಂಪಲ್' ಸುನಿ ಜೊತೆ ಸೇರಿ 'ಚಮಕ್' ಕೊಡ್ತಾರೆ ಗಣೇಶ್

Posted by:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮುದ್ದಿನ ಪುತ್ರ ವಿಹಾನ್ ನಾಮಕರಣ ಸಮಾರಂಭ ಇತ್ತೀಚೆಗಷ್ಟೆ ನೆರವೇರಿತು. ಆ ಸಮಾರಂಭದಲ್ಲಿ 'ಸಿಂಪಲ್ಲಾಗೊಂದ್ ಲವ್ ಸ್ಟೋರಿ' ಖ್ಯಾತಿಯ ಸುನಿ ಕೂಡ ಭಾಗವಹಿಸಿದ್ದರು.

ಆಗ್ಲೇ ಗೊತ್ತಾಗಿದ್ದು, 'ಸಿಂಪಲ್' ಸುನಿ ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ಒಂದು ಸಿನಿಮಾ ಮಾಡ್ತಿದ್ದಾರೆ ಅಂತ. ಗಣಿ ಇಮೇಜ್ ಗೆ ತಕ್ಕಂತೆ ರೊಮ್ಯಾಂಟಿಕ್-ಕಾಮಿಡಿ ಸ್ಟೋರಿ ಬರೆದಿರುವ ಸುನಿ, ಮಳೆ ಹುಡುಗನಿಗೆ ಕಥೆ ಹೇಳಿ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ.

suni

ಅಂದ್ಹಾಗೆ, ಚಿತ್ರದ ಟೈಟಲ್ ಏನು ಗೊತ್ತಾ? 'ಚಮಕ್'..! ಶೀರ್ಷಿಕೆ ಕೇಳ್ತಿದ್ದಂತೆ ಇದು ಪಕ್ಕಾ ಸುನಿ ಸ್ಟೈಲ್ ಅನ್ನೋದು ಕನ್ಫರ್ಮ್. ಮಾತಲ್ಲೇ ಪಟಾಕಿ ಹಾರಿಸುವ ಸುನಿ, ಗಣಿಗಾಗಿ 'ಚಮಕ್-ಚಮಕ್' ಡೈಲಾಗ್ಸ್ ಬರೆದರೆ ಅಚ್ಚರಿ ಇಲ್ಲ ಬಿಡಿ. [ಗೋಲ್ಡನ್ ಸ್ಟಾರ್ ತೋಳೊಳಗೆ ಮರಿ ಲಿಟಲ್ ಸ್ಟಾರ್...]

ganesh

ಹಾಗ್ನೋಡಿದ್ರೆ, ಶಿವರಾಜ್ ಕುಮಾರ್ ಜೊತೆ ಸುನಿ 'ಮನಮೋಹಕ' ಸಿನಿಮಾ ಮಾಡ್ಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಚಿತ್ರ ಮುಂದಕ್ಕೆ ಹೋಗಿದೆ. ಸದ್ಯ ಗಣೇಶ್ ಕೂಡ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. 'ಸ್ಟೈಲ್ ಕಿಂಗ್', 'ಪಟಾಕಿ', 'ಮುಂಗಾರು ಮಳೆ-2', 'ZOOಮ್' ಚಿತ್ರಗಳ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಈ ಎಲ್ಲಾ ಚಿತ್ರಗಳು ಮುಗಿದ ಬಳಿಕ ಸುನಿ ಜೊತೆ ಸೇರಿ ಗಣೇಶ್ 'ಚಮಕ್' ಕೊಡ್ತಾರೆ.

English summary
Kannada Actor Ganesh has confirmed to star in Kannada Director Suni's next rom-com film 'Chamak'.
Please Wait while comments are loading...

Kannada Photos

Go to : More Photos