twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಈ ಹಾಸ್ಯ ನಟರಲ್ಲಿ ಯಾರಿಗೆ ಅಗ್ರ ತಾಂಬೂಲ?

    |

    ನಗುನಗುತಾ ನಲೀ ನಲೀ.. ಏನೇ ಆಗಲಿ ಎಂದು ಬಂಗಾರದ ಮನುಷ್ಯ ಚಿತ್ರದಲ್ಲಿ ಡಾ. ರಾಜ್ ಹಾಡಿದ ಹಾಗೆ ನಗು ಮತ್ತು ನಲಿವು ನೋವನ್ನು ಮರೆಯಲು ದೇವರು ನೀಡಿದ ಗುಳಿಗೆ.

    ಕುಮಾರ್ ತ್ರಯರ (ರಾಜಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್) ಕಾಲದಲ್ಲಿ ಅಂದರೆ ಅರವತ್ತರಿಂದ ಎಂಬತ್ತರ ದಶಕದ ಸಮಯದಲ್ಲಿ ಇವರ ಕಾಲ್ ಶೀಟ್ ಗಳಿಗಿಂತ ಹಾಸ್ಯ ನಟ ನರಸಿಂಹರಾಜು ಕಾಲ್ ಶೀಟಿಗೆ ಹೆಚ್ಚಿನ ಡಿಮಾಂಡ್ ಇತ್ತು ಎನ್ನುವ ವಿಷಯವನ್ನು ಡಾ.ರಾಜ್ ಕೂಡಾ ಈ ಹಿಂದೆ ಹೇಳಿದ್ದರು.

    ಕೆಲವು ಹಾಸ್ಯ ನಟರ ಬಾಡಿ ಲಾಂಗ್ವೇಜ್ ಮತ್ತು ಡೈಲಾಗ್ ಡೆಲಿವರಿಯೇ ಪ್ರೇಕ್ಷಕರಲ್ಲಿ ನಗೆ ಚಿಮ್ಮಿಸುತ್ತದೆ. ಉದಾಹರಣೆಗೆ ನರಸಿಂಹರಾಜು ಅವರ ಬಾಡಿ ಲಾಂಗ್ವೇಜ್, ಮುಸುರಿ ಕೃಷ್ಣಮೂರ್ತಿ ಮತ್ತು ಎನ್ ಎಸ್ ರಾವ್ ಅವರ ಡೈಲಾಗ್ ಡೆಲಿವರಿ ಸಿನಿರಸಿಕರನ್ನು ನಗೆಗಡಲಲ್ಲಿ ತೇಲಿಸುತ್ತದೆ.

    ನರಸಿಂಹರಾಜು, ದಿನೇಶ್, ಮುಸುರಿ ಕೃಷ್ಣಮೂರ್ತಿ, ಎನ್ ಎಸ್ ರಾವ್ ಮುಂತಾದ ಘಟಾನುಗಟಿ ಹಾಸ್ಯನಟರು ಇತಿಹಾಸದ ಪುಟ ಸೇರಿದ ನಂತರ ಅನೇಕ ಹಾಸ್ಯ ನಟರು ಬಂದರು.

    ನರಸಿಂಹರಾಜು ಕಾಲದಿಂದ ಇಂದಿನವರೆಗೆ ನಮ್ಮನ್ನು ನಕ್ಕುನಲಿಸಿದ ಹಾಸ್ಯ ನಟರಲ್ಲಿ ಯಾರಿಗೆ ನೀಡಬಹುದು ಅಗ್ರ ತಾಂಬೂಲ?

    ನರಸಿಂಹರಾಜು

    ನರಸಿಂಹರಾಜು

    ಜನನ: 24.07.1923 (ತಿಪಟೂರು)
    ನಿಧನ: 11.07.1979
    ಒಟ್ಟು ಅಭಿನಯದ ಚಿತ್ರಗಳು : 253
    ಪ್ರಮುಖ ಚಿತ್ರಗಳು: ಪ್ರೊಫೆಸರ್ ಹುಚ್ಚುರಾಯ, ಸ್ಕೂಲ್ ಮಾಸ್ಟರ್, ಕುಲವಧು

    ಮುಸುರಿ ಕೃಷ್ಣಮೂರ್ತಿ

    ಮುಸುರಿ ಕೃಷ್ಣಮೂರ್ತಿ

    ಜನನ: 28.07.1930 (ಮೈಸೂರು)
    ನಿಧನ: 1985
    ಒಟ್ಟು ಅಭಿನಯದ ಚಿತ್ರಗಳು : 153
    ಪ್ರಮುಖ ಚಿತ್ರಗಳು: ಧರ್ಮಸೆರೆ, ಪಡುವಾರಹಳ್ಳಿ ಪಾಂಡವವರು, ಗಂಧರ್ವ ಗಿರಿ

    ದಿನೇಶ್

    ದಿನೇಶ್

    ಜನನ: 25.01.1939 (ಬೆಂಗಳೂರು)
    ನಿಧನ: 24.06.1990
    ಒಟ್ಟು ಅಭಿನಯದ ಚಿತ್ರಗಳು : 134
    ಪ್ರಮುಖ ಚಿತ್ರಗಳು: ನಾಂದಿ, ಭಲೇ ಹುಚ್ಚ, ಭೂತಯ್ಯನ ಮಗ ಅಯ್ಯೋ

    ಎನ್ ಎಸ್ ರಾವ್

    ಎನ್ ಎಸ್ ರಾವ್

    ಕಿಲಕಿಲ ಎಂದು ಕನ್ನಡಿಗರ ಮನದಲ್ಲಿ ಸದ್ದು ಮಾಡಿದ್ದ ಎನ್ ಎಸ್ ರಾವ್ ಕುರಿತು ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
    ಪ್ರಮುಖ ಚಿತ್ರಗಳು: ನಾನು ನನ್ನ ಹೆಂಡತಿ

    ದ್ವಾರಕೀಶ್

    ದ್ವಾರಕೀಶ್

    ಜನನ: 19.08.1942 (ಹುಣಸೂರು)
    ಒಟ್ಟು ಅಭಿನಯದ ಚಿತ್ರಗಳು : 307
    ಪ್ರಮುಖ ಚಿತ್ರಗಳು: ಸಿಂಗಾಪುರದಲ್ಲಿ ರಾಜಾಕುಳ್ಳ, ಪ್ರಚಂಡ ಕುಳ್ಳ, ಗುರುಶಿಷ್ಯರು

    ಎಂ ಎಸ್ ಉಮೇಶ್

    ಎಂ ಎಸ್ ಉಮೇಶ್

    ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ಕಲಾವಿದರಾದ ಎಂ.ಎಸ್.ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು. ಉಮೇಶ್ ಚಲನಚಿತ್ರ ರಂಗಕ್ಕೆ ಅಡಿಯಿಟ್ಟಿದ್ದು 'ಮಕ್ಕಳ ರಾಜ್ಯ' ಚಿತ್ರದ ಮೂಲಕ. ಕನ್ನಡದ ಸುಮಾರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿರುವ ಉಮೇಶ್ ಹಾಸ್ಯ ನಟರಾಗಿ ಹೆಸರುವಾಸಿ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಾಗುತ್ತಿಲ್ಲ.

    ಟೆನ್ನಿಸ್ ಕೃಷ್ಣ

    ಟೆನ್ನಿಸ್ ಕೃಷ್ಣ

    ಒಟ್ಟು ಅಭಿನಯದ ಚಿತ್ರಗಳು : 307
    ಪ್ರಮುಖ ಚಿತ್ರಗಳು: ಭಗವಂತ ಕೈಕೊಟ್ಟ, ಚಿಕ್ಕಪೇಟೆ ಸಾಚಾಗಳು, ಇದ್ರೆ ಗೋಪಿ ಬಿದ್ರೆ ಪಾಪಿ

    ದೊಡ್ಡಣ್ಣ

    ದೊಡ್ಡಣ್ಣ

    ಜನನ: 15.11.1949 (ಅರಸೀಕೆರೆ)
    ಒಟ್ಟು ಅಭಿನಯದ ಚಿತ್ರಗಳು : 200ಕ್ಕೂ ಹೆಚ್ಚು
    ಪ್ರಮುಖ ಚಿತ್ರಗಳು: ಅಳೀಮಯ್ಯ, ಮುತ್ತಣ್ಣ, ಸೋಲಿಲ್ಲದ ಸರದಾರ

    ಜಗ್ಗೇಶ್

    ಜಗ್ಗೇಶ್

    ಜನನ: 17.03.1963 (ತುರುವೇಕೆರೆ)
    ಒಟ್ಟು ಅಭಿನಯದ ಚಿತ್ರಗಳು : 100ಕ್ಕೂ ಹೆಚ್ಚು
    ಪ್ರಮುಖ ಚಿತ್ರಗಳು: ತರ್ಲೆ ನನ್ ಮಗ, ಮಠ, ರೂಪಾಯಿ ರಾಜ

    ಕೋಮಲ್ ಕುಮಾರ್

    ಕೋಮಲ್ ಕುಮಾರ್

    ಜನನ: ಜುಲೈ 4 (ತುರುವೇಕೆರೆ)
    ಒಟ್ಟು ಅಭಿನಯದ ಚಿತ್ರಗಳು : 100ಕ್ಕೂ ಹೆಚ್ಚು
    ಪ್ರಮುಖ ಚಿತ್ರಗಳು: ಗೋವಿಂದಾಯ ನಮ:, ಚಮ್ಕಾಯ್ಸಿ ಚಿಂದಿ ಉಡಾಯಿಸಿ, ಆಪ್ತರಕ್ಷಕ

    ಸಾಧು ಕೋಕಿಲಾ

    ಸಾಧು ಕೋಕಿಲಾ

    ನಟ, ಸಂಗೀತ ನಿರ್ದೇಶಕ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸಾಧು ಮಹಾರಾಜ್ ಸುಮಾರು 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
    ಪ್ರಮುಖ ಚಿತ್ರಗಳು: ರಕ್ತ ಕಣ್ಣೀರು, ನೈಂಟಿ, ಹುಡುಗರು

    ರಂಗಾಯಣ ರಘು

    ರಂಗಾಯಣ ರಘು

    ಹಾಸ್ಯ ನಟ, ಪೋಷಕ ನಟ, ಖಳನಟನಾಗಿ ಗುರುತಿಸಿಕೊಂಡಿರುವ ರಂಗಾಯಣ ರಘು ಇದುವರೆಗೆ ಸುಮಾರು ನೂರಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.
    ಪ್ರಮುಖ ಚಿತ್ರಗಳು: ದುನಿಯಾ, ಜಾಕಿ, ಯಾರೇ ಕೂಗಾಡಲಿ

    ಬುಲೆಟ್ ಪ್ರಕಾಶ್

    ಬುಲೆಟ್ ಪ್ರಕಾಶ್

    ನಿರ್ಮಾಪಕ, ಹಾಸ್ಯ ನಟ, ಪೋಷಕ ನಟ, ಖಳನಟನಾಗಿ ಗುರುತಿಸಿಕೊಂಡಿರುವ ಇದುವರೆಗೆ ಸುಮಾರು ನೂರ ಐವತ್ತಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.
    ಪ್ರಮುಖ ಚಿತ್ರಗಳು: ಸಂಸಾರದಲ್ಲಿ ಗೋಲ್ ಮಾಲ್, ಸ್ನೇಹಿತರು, ಸಾರಥಿ

    ಬ್ಯಾಂಕ್ ಜನಾರ್ಧನ್

    ಬ್ಯಾಂಕ್ ಜನಾರ್ಧನ್

    ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸಿರುವ ಬ್ಯಾಂಕ್ ಜನಾರ್ಧನ್ ಸುಮಾರು ಸುಮಾರು ನೂರಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಜನಪ್ರಿಯ ಟಿವಿ ಪಾಪ ಪಾಂಡು ಧಾರವಾಹಿಯಲ್ಲಿ ಕೂಡಾ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ.


    ಪ್ರಮುಖ ಚಿತ್ರಗಳು: ಅಜಗಜಾಂತರ, ರೂಪಾಯಿ ರಾಜ, ಜಿಪುಣ ನನ್ನ ಗಂಡ

    ಶರಣ್

    ಶರಣ್

    ಕನ್ನಡ ಚಿತ್ರರಂಗ ಕಂಡ ಮತ್ತೋರ್ವ ಪ್ರತಿಭಾನ್ವಿತ ಹಾಸ್ಯ ಮತ್ತು ಪೋಷಕ ನಟ. ನಿರ್ಮಾಪಕನಾಗಿ ಅವರು ತೆರೆಗೆ ತಂದ Rambo ಚಿತ್ರ ಯಶಸ್ಸನ್ನು ಸಾಧಿಸಿತ್ತು. ಇದುವರೆಗೆ ಶರಣ್ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    ಪ್ರಮುಖ ಚಿತ್ರಗಳು: ಕೆಂಪೇಗೌಡ, ಕೃಷ್ಣ, ಜಾಲಿ ಡೇಸ್

    ಟಿ ಎನ್ ಬಾಲಕೃಷ್ಣ

    ಟಿ ಎನ್ ಬಾಲಕೃಷ್ಣ

    ಜನನ: 02.11.1913 (ಅರಸೀಕೆರೆ)
    ನಿಧನ : 19.07.1995
    ಒಟ್ಟು ಅಭಿನಯದ ಚಿತ್ರಗಳು: 150ಕ್ಕೂ ಹೆಚ್ಚು
    ಪ್ರಮುಖ ಚಿತ್ರಗಳು: ಭಕ್ತ ಕುಂಬಾರ, ದಾರಿ ತಪ್ಪಿದ ಮಗ, ಬಂಗಾರದ ಮನುಷ್ಯ

    English summary
    Kannada film industries best ever comedy actors since 1960. Who is your choice?
    Thursday, March 7, 2013, 17:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X